ಮಾರಿ ಜಾತ್ರೆ ಬಂದೋಬಸ್ತ್‌ ನಲ್ಲಿದ್ದ ಪೊಲೀಸ್‌ ಮೇಲೆ ಯುವಕರ ಹಲ್ಲೆ ! ಬೆಂಬಲಿಗರು ಎಂದು ವಾರ್ನಿಂಗ್!‌ ವಿಡಿಯೋದಲ್ಲಿ ಏನಿದೆ?

Youth attacked the police in Mari Jatre Bandobast! Supporters Warning! ಆನಂದಪುರ ಪೊಲೀಸ್‌ ಸ್ಟೇಷನ್‌ ,Anandpur Police Station,

ಮಾರಿ ಜಾತ್ರೆ ಬಂದೋಬಸ್ತ್‌ ನಲ್ಲಿದ್ದ ಪೊಲೀಸ್‌ ಮೇಲೆ ಯುವಕರ ಹಲ್ಲೆ ! ಬೆಂಬಲಿಗರು ಎಂದು ವಾರ್ನಿಂಗ್!‌ ವಿಡಿಯೋದಲ್ಲಿ ಏನಿದೆ?
ಆನಂದಪುರ ಪೊಲೀಸ್‌ ಸ್ಟೇಷನ್‌ ,Anandpur Police Station,

Shivamogga  Mar 30, 2024 ,Anandpur Police Station, ಕಾನೂನು ಸುವ್ಯವಸ್ಥೆಯಲ್ಲಿ ಯಾವುದೇ ಸನ್ನಿವೇಶವನ್ನು ಮೊದಲು ಎದುರಾಗುವವರು ಪೊಲೀಸರು. ಅಂತಹ ಪೊಲೀಸರ ಮೇಲೆಯೇ ಹಲ್ಲೆ ನಡೆದರೇ ಪೊಲೀಸ್‌ ಇಲಾಖೆ ಸುಮ್ಮನಿರುವುದೇ? ಖಂಡಿತ ಇಲ್ಲ. ಸದ್ಯ  ಈ ವಿಚಾರ ಯಾಕೆ ಎಂದರೆ, ಶಿವಮೊಗ್ಗ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಇದರ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿದೆ. 

ಶಿವಮೊಗ್ಗ ಜಿಲ್ಲೆ ಆನಂದಪುರದ ಸಮೀಪ ಗೌತಮಪುರದಲ್ಲಿ ಈ ಘಟನೆ ನಡೆದಿದೆ. ಗೌತಮಪುರದಲ್ಲಿ ಮಾರಿಕಾಂಬಾ ಜಾತ್ರೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಡಿಆರ್‌ ಪೊಲೀಸ್‌ ಸಿಬ್ಬಂದಿ ಒಬ್ಬರು ಬಂದೋಬಸ್ತ್‌ ನಲ್ಲಿದ್ದರು. ಅವರ ಸಮ್ಮುಖದಲ್ಲಿ ಗುಂಪೊಂದು ಗಲಾಟೆ ಮಾಡುತ್ತಿತ್ತು. ಅದನ್ನು ಬಿಡಿಸಲು ಹೋಗಿದ್ದ ಸಿಬ್ಬಂದಿಯ ಮೇಲೆ ಯುವಕರು ಹಲ್ಲೆ ಮಾಡಿದ್ದಾರೆ. ಅಲ್ಲದೆ ಪೊಲೀಸ್‌ ಸಮವಸ್ತ್ರವನ್ನು ಹರಿದುಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ಸಿಬ್ಬಂದಿಯನ್ನು ನಿಂದಿಸಿದ್ದಲ್ಲದೇ, ಶಾಸಕರೊಬ್ಬರ ಬೆಂಬಲಿಗರು ಎಂದು ಹೇಳಿಕೊಂಡಿರುವ ಯುವಕರ ಗುಂಪು ತಮ್ಮ ತಂಟೆಗೆ ಬಂದರೆ ಹುಷಾರ್‌ ಎಂದು ಪೊಲೀಸರನ್ನ ಹೆದರಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಇನ್ನೂ  ಹಲ್ಲೆ ಮಾಡುತ್ತಿರುವ ದೃಶ್ಯಗಳು ಮೊಬೈಲ್‌ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಸ್ಥಳೀಯರು ಪೊಲೀಸರನ್ನ ಗುಂಪಿನ ಯುವಕರಿಂದ ಬಿಡಿಸುತ್ತಿರುವ ದೃಶ್ಯಗಳಿದ್ದು, ಹಲ್ಲೆ ಮಾಡುತ್ತಿರುವ ಯುವಕನ ಚಹರೆಯು ರೆಕಾರ್ಡ್‌ ಆಗಿದೆ. 

ಈ ಸಂಬಂಧ ಓರ್ವನನ್ನ ವಶಕ್ಕೆ ಪಡೆದಿರುವ ಪೊಲೀಸರು ಇನ್ನೊಬ್ಬನಿಗಾಗಿ ಹುಡುಕಾಟ ನಡೆಸ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಶಿವಮೊಗ್ಗ ಎಸ್‌ಪಿ ಮಿಥುನ್‌ ಕುಮಾರ್‌ ರವರ ಗಮನಕ್ಕೆ ವಿಚಾರ ತಲುಪಿದೆ. ಈ ಹಿಂದೆಯು ಶಿವಮೊಗ್ಗದಲ್ಲಿ ಪೊಲೀಸ್‌ ಪೇದೆ ಯೊಬ್ಬರ ಮೇಲೆ ಹಲ್ಲೆ ನಡೆದಿತ್ತು. ಇಂತಹ ಪ್ರಕರಣಗಳಲ್ಲಿ ಪೊಲೀಸ್‌ ಇಲಾಖೆ ಗಂಭೀರ ಹೆಜ್ಜೆ ಇಡಬೇಕಾಗುತ್ತದೆ. ಆ ನಿಟ್ಟಿನಲ್ಲಿ ಆನಂದಪುರದ ಪೊಲೀಸ್‌ ಸ್ಟೇಷನ್‌ ಪೊಲೀಸರು ಗಮನ ಹರಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದುವರೆಗೂ ಈ ಬಗ್ಗೆ ಎಫ್‌ಐಆರ್‌ ದಾಖಲಾಗಿಲ್ಲ ಎನ್ನಲಾಗಿದೆ.