ಶಿರಸಿಯಲ್ಲಿ ಬೈಕ್​ ಕದ್ದು , ಸಾಗರದಲ್ಲಿ ಸಿನಿಮಾ ನೋಡ್ಕೊಂಡು ಮಾಡಿದ್ದೇನು ಗೊತ್ತಾ? ಐದು ಜಿಲ್ಲೆಗಳಿಗೆ ಬೇಕಿದ್ದ ಕಳ್ಳರು ಅಂದರ್

accused in theft cases wanted by five districts were arrested from Anandpur police station.

ಶಿರಸಿಯಲ್ಲಿ ಬೈಕ್​ ಕದ್ದು , ಸಾಗರದಲ್ಲಿ ಸಿನಿಮಾ ನೋಡ್ಕೊಂಡು ಮಾಡಿದ್ದೇನು ಗೊತ್ತಾ? ಐದು ಜಿಲ್ಲೆಗಳಿಗೆ ಬೇಕಿದ್ದ ಕಳ್ಳರು ಅಂದರ್
accused in theft cases wanted by five districts were arrested from Anandpur police station.

SHIVAMOGGA  |  Jan 9, 2024  |  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರ ಸಮೀಪದ ಪ್ರಕರಣವೊಂದು ಅಪರೂಪದ ವಿಚಾರವೊಂದು ನಡೆದಿದೆ. 

ಆನಂದಪುರ ಪೊಲೀಸ್ ಸ್ಟೇಷನ್

ಆನಂದಪುರ ಪೊಲೀಸ್ ಸ್ಟೇಷನ್ ಪೊಲೀಸರು ತುಮಕೂರು, ಕಲಬುರಗಿ, ಯಾದಗಿರಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿನ ಕಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಗಳನ್ನ ಬಂಧಿಸಿದ್ದಾರೆ. ಸಚಿನ್, ರೋಶನ್ ಹಾಗೂ ಶಿವರಾಜ್ ಬಂಧಿತರು. 

ಮಂಗಳೂರು, ಕಲಬುರಗಿ , ನೆಲಮಂಗಲ

ವಿಶೇಷ ಅಂದರೆ, ಈ ಕಳ್ಳರು ಸಿಕ್ಕಿಬಿದ್ದಿರೋದು ಜನರ ಕೈಯಲ್ಲಿ ಆರೋಪಿಗಳು ಮಂಗಳೂರು, ಕಲಬುರಗಿ ಹಾಗೂ ನೆಲಮಂಗಲದ ಮೂಲದವರಾಗಿದ್ದಾರೆ. ಇವರು ಶಿರಸಿ ಹಾಗೂ ಯಲ್ಲಾಪುರದಲ್ಲಿ ಬೈಕ್​ ಕದ್ದು ಸಾಗರಕ್ಕೆ ಬಂದಿದ್ದರು. ಅಲ್ಲಿಂದ ಸಾಗರದಲ್ಲಿ  ಸಿನಿಮಾ ನೋಡಿಕೊಂಡು ಬಳಿಕ ಆನಂದಪುರದ ಬಾರ್ ಒಂದರಲ್ಲಿ ಎಣ್ಣೆ ಹಾಕಿದ್ದರು. 

READ : ಜಿಮ್/ಫಿಟ್ನರ್​, ಬ್ಯೂಟೀಷಿಯನ್ ,ವೀಡಿಯೋಗ್ರಫರ್​ ಸೇರಿದಂತೆ ನಿರೂಪಕರಾಗಲು ಇಲ್ಲಿದೆ ಅವಕಾಶ!

ಕಾಣಿಕೆ ಹುಂಡಿ!

ಇದೆಲ್ಲದರ ಬಳಿಕ ಇಲ್ಲಿನ ಚೆನ್ನಕೊಪ್ಪ ಗ್ರಾಮದ ದೇವಸ್ಥಾನವೊಂದರಲ್ಲಿದ್ದ ಕಾಣಿಕೆ ಹುಂಡಿಯನ್ನು ಕದೊಯ್ದಿದ್ದರು. ಅದನ್ನು ಸಮೀಪದ ಹೊಲವೊಂದರಲ್ಲಿ ಒಡೆಯಲು ಯತ್ನಿಸಿದ್ದಾರೆ. ಕಾಣಿಕೆ ಹುಂಡಿಯ ಮೇಲೆ ಕಲ್ಲು ಹಾಕಿ ಒಡೆಯುತ್ತಿರುವುದನ್ನ ಗಮನಿಸಿದ ಗ್ರಾಮಸ್ಥರಿಗೆ ಇವರು ಕಳ್ಳರು ಹೌದಾ ಅಲ್ವಾ ಎಂಬ ಅನುಮಾನ ಉಳಿದಿರಲಿಲ್ಲ

ತಕ್ಷಣವೇ ಊರಿಗೆ ವಿಷಯ ತಿಳಿಸಿ ಗುಂಪುಗೂಡಿ ಗ್ರಾಮಸ್ಥರು ಮೂವರನ್ನ ಹಿಡಿದ್ದಾರೆ. ಬಳಿಕ ಏನು ಎತ್ತ ವಿಚಾರಿಸಿದಾಗ ಕಳ್ಳರ ಕರಾಮತ್ತು ಗೊತ್ತಾಗಿದೆ. ಅಲ್ಲಿಗೆ ಆನಂದಪುರ ಪೊಲೀಸ್ ಸ್ಟೇಷನ್ ಪೊಲೀಸರು ಬಂಧಿಸಿದ್ದಾರೆ. ಅವರು ವಿಚಾರಣೆಗೆ ಒಳಪಡಿಸಿದ ಬಳಿಕ ಆರೋಪಿಗಳ ವಿರುದ್ಧ ಐದಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಳ್ಳತನ ಪ್ರಕರಣಗಳು ಇರುವುದು ಗೊತ್ತಾಗಿದೆ. ಸದ್ಯ ಅವರ ವಿಚಾರಣೆ ಮುಂದುವರಿದಿದೆ.