SHIVAMOGGA | Jan 9, 2024 | 2023-24ನೇ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಡಿಯಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ ವಿವಿಧ ತರಭೇತಿಗಳನ್ನ ನೀಡಲಾಗುತ್ತಿದೆ. ಪರಿಶಿಷ್ಟ ಜಾತಿ ಯುವಜನರಿಗೆ ಅನುಷ್ಠಾನಗೊಳಿಸಿರುವ ತರಬೇತಿ ಶಿಬಿರಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಯಾವೆಲ್ಲಾ ತರಬೇತಿ ನೀಡಲಾಗುತ್ತದೆ. ಹಾಗೂ ಅರ್ಜಿಯನ್ನು ಸಲ್ಲಿಸುವ ಬಗ್ಗೆ ಸುತ್ತೋಲೆಯನ್ನು ಹೊರಡಿಸಲಾಗಿದೆ. ಅದರ ವಿವರ ಇಲ್ಲಿದೆ
ಜಿಮ್/ಫಿಟ್ನಸ್ ತರಬೇತಿ ಶಿಬಿರ (15 ದಿನಗಳು)
ತರಬೇತಿಯ ಅವಧಿ : 24-01-2024 ರಿಂದ 07-02-2024 ರವರೆಗೆ
ವಿದ್ಯಾರ್ಹತೆ : ದ್ವಿತೀಯ ಪಿ.ಯು.ಸಿ.
ವಯೋಮಿತಿ 16 ರಿಂದ 30 ವರ್ಷ
ಸ್ಥಳ : ಶ್ರೀ ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಯುವ ತರಬೇತಿ ಕೇಂದ್ರ, ವಿದ್ಯಾನಗರ/ ಶ್ರೀ ಕಂಠೀರವ ಕ್ರೀಡಾಂಗಣ ಬೆಂಗಳೂರು
ಬ್ಯೂಟೀಷಿಯನ್ ತರಬೇತಿ ಶಿಬಿರ (13 ದಿನಗಳು)
ತರಬೇತಿಯ ಅವಧಿ : 26-01-2024 ರಿಂದ 07-02-2024 ವರೆಗೆ
ವಯೋಮಿತಿ : 15 ರಿಂದ 29 ವರ್ಷ
ವಿದ್ಯಾರ್ಹತೆ : ಎಸ್ಎಸ್ಎಲ್ಸಿ (ಪಾಸ್/ಫೇಲ್)
ಸ್ಥಳ : ಕುಂಬಳಗೋಡು ತರಬೇತಿ ಕೇಂದ್ರ ಬೆಂಗಳೂರು
ವೀಡಿಯೋಗ್ರಫಿ ತರಬೇತಿ ಶಿಬಿರ (12 ದಿನಗಳು)
ತರಬೇತಿಯ ಅವಧಿ : 27-01-2024 ರಿಂದ 07-02-2024 ವರೆಗೆ
ವಯೋಮಿತಿ : 15 ರಿಂದ 29 ವರ್ಷ
ವಿದ್ಯಾರ್ಹತೆ : ದ್ವಿತೀಯ ಪಿಯುಸಿ
ಸ್ಥಳ : ಕುಂಬಳಗೋಡು ತರಬೇತಿ ಕೇಂದ್ರ ಬೆಂಗಳೂರು
ನಿರೂಪಣಾ ಮತ್ತು ವಾರ್ತಾ ವಾಚಕರ ತರಬೇತಿ ಶಿಬಿರ (8 ದಿನಗಳು)
ತರಭೇತಿಯ ಅವಧಿ : 31-01-2024 ರಿಂದ 07-02-2024 ರವರೆಗೆ
ವಯೋಮಿತಿ : 15 ರಿಂದ 29 ವರ್ಷ
ವಿದ್ಯಾರ್ಹತೆ : ಪದವಿ ಹಾಗೂ ಪತ್ರಿಕೋಧ್ಯಮ (Journalism) ಪ್ರಾಮುಖ್ಯತೆ