ಇವರಿಬ್ಬರ ಪೈಕಿ ಒಬ್ಬನ ಸುಳಿವು ಕೊಟ್ರೂ ಸಿಗುತ್ತದೆ 10 ಲಕ್ಷ ರೂಪಾಯಿ ಬಹುಮಾನ! ಪೂರ್ತಿ ಮಾಹಿತಿ, ವಿವರ ಪಡೆದುಕೊಳ್ಳಿ

Even if you give a clue to one of these two, you will get a reward of 10 lakh rupees! Get complete information, details

ಇವರಿಬ್ಬರ ಪೈಕಿ ಒಬ್ಬನ ಸುಳಿವು ಕೊಟ್ರೂ ಸಿಗುತ್ತದೆ 10 ಲಕ್ಷ ರೂಪಾಯಿ ಬಹುಮಾನ! ಪೂರ್ತಿ ಮಾಹಿತಿ, ವಿವರ ಪಡೆದುಕೊಳ್ಳಿ
Rameswaram cafe blast case,Tirthahalli suspects , ಅಬ್ದುಲ್ ಮತೀನ್‌ ತಾಹಾ, ಮುಸಾವೀರ್ ಹುಸೇನ್ ಶಾಜಿಬ್, Abdul Mateen Taha, Musawir Hussain Shajib

Shivamogga Mar 30, 2024   ರಾಮೇಶ್ವರಂ ಕಫೆ ಸ್ಫೋಟ ಪ್ರಕರಣದಲ್ಲಿ ಎನ್‌ಐಎ ತೀರ್ಥಹಳ್ಳಿ ಸೇರಿದಂತೆ ರಾಜ್ಯದ ಹಲವೆಡೆ ರೇಡ್‌ ನಡೆಸಿದ್ದು ಗೊತ್ತೆ ಇದೆ. ಅಲ್ಲದೆ ಈ ವಿಚಾರದಲ್ಲಿ ಓರ್ವನನ್ನ ಅರೆಸ್ಟ್‌ ಮಾಡಲಾಗಿದೆ. ಆತನ ಚಹರೆಯನ್ನ ಎನ್‌ಐಎ ಇದುವರೆಗು ಬಿಡುಗಡೆ ಮಾಡಿಲ್ಲ. ಸದ್ಯ  ಪ್ರಕರಣದ ಆರೋಪಿಗಳಾದ ಮಸಾವೀರ್‌ ಶಾಜಿದ್‌ ಹಾಗೂ ಮತೀನ್‌ ತಾಹನ  ಬಗ್ಗೆ ಸುಳಿವು ಸಿಕ್ಕರೇ ಮಾಹಿತಿ ನೀಡಿ ಎಂದು ಪ್ರಕಟಣೆ ನೀಡಿತ್ತಷ್ಟೆ ಅಲ್ಲದೆ ಅದಕ್ಕೆ ಸಂಬಂಧಿಸಿದಂತೆ ಇಬ್ಬರ ತಲೆಗೂ ಇನಾಮು ಘೋಷಣೆ ಮಾಡಿದೆ,. 

,Tirthahalli suspects

 

ಶಂಕಿತ  ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವೀರ್ ಹುಸೇನ್ ಶಾಜಿಬ್ ಕುರಿತು ಸುಳಿವು ನೀಡಿದರೆ 10 ಲಕ್ಷ ರು ಬಹುಮಾನ ನೀಡುವುದಾಗಿ ಎನ್‌ಐಎ ಶುಕ್ರವಾರ ಘೋಷಿಸಿದೆ. ಹಳೆಯ ಪ್ರಕರಣಗಳಲ್ಲಿ ಈ ಇಬ್ಬರ ತಲೆಗೆ 5 ಲಕ್ಷ ರು. ಬಹುಮಾನವನ್ನು ಎನ್‌ಐಎ ಪ್ರಕಟಿಸಿತ್ತು. ಇದೇ ವೇಳೆ, ಮತೀನ್ ಹಾಗೂ ಶಾಜಿಬ್‌ನ ಸ್ಪಷ್ಟವಾಗಿ ಕಾಣುವ ಪೋಟೋಗಳನ್ನು ಸಹ ಸಾರ್ವಜನಿಕವಾಗಿ ಪ್ರಕಟಿಸಿರುವ ಎನ್‌ಐಎ, ಈ ಶಂಕಿತರ ಕುರಿತು ಸುಳಿವು ನೀಡುವ ಮಾಹಿತಿದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದೆ. 

Tirthahalli suspects

 

ಎನ್‌ಐಎನ ಪ್ರಕಟಣೆಯನ್ನು ಶಿವಮೊಗ್ಗ ಪೊಲೀಸರು ಮಾಧ್ಯಮ ಗ್ರೂಪ್‌ಗಳಿಗೆ ಹಂಚಿಕೆ ಮಾಡಿದ್ದಾರೆ. ಇನ್ನೂ ಆರೋಪಿಗಳ ವಿವರಗಳನ್ನ ಗಮನಿಸುವುದಾದರೆ, ರಾಮೇಶ್ವರಂ ಕಫೆ ‍ಸ್ಫೋಟ ಪ್ರಕರಣದ ಪ್ರಮುಖ ಸಂಚುಕೋರ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅಬ್ದುಲ್ ಮತೀನ್ ತಾಹಾ 5.5 ಅಡಿ ಎತ್ತರವಿದ್ದು, 30 ವರ್ಷ ವಯಸ್ಸಿನವನಾಗಿದ್ದಾರೆ.  ತಲೆಯ ಮುಂಭಾಗ ಬೊಕ್ಕತಲೆಯಾಗಿದ್ದು, ತಲೆಗೆ ಕ್ಯಾಪ್ ಧರಿಸುತ್ತಾನೆ.  ನಕಲಿ ಹೆಸರುಗಳನ್ನು ಬಳಸಿಯೇ ಆಧಾರ್‌ಕಾರ್ಡ್ ಸೇರಿ ಕೆಲ ದಾಖಲೆಗಳನ್ನು ಪಡೆದುಕೊಂಡಿದ್ದಾನೆ.  Tirthahalli suspects

ಗುರುತು ಮರೆಮಾಚುವ ಸಲುವಾಗಿ ಸಾರ್ವ ಜನಿಕವಾಗಿ ಓಡಾಡುವಾಗ ತಲೆಗೆ ವಿಗ್‌ ಹಾಗೂ ನಕಲಿ ಗಡ್ಡವನ್ನು ಮತೀನ್ ಹಾಕಿಕೊಳ್ಳುತ್ತಾನೆ ಎಂದು ಎನ್‌ಐಎ ತಿಳಿಸಿದೆ. ಹಾಸ್ಟೆಲ್ ಹಾಗೂ ಪಿಜಿಗಳಲ್ಲಿ ಆತ ಉಳಿದು ಕೊಳ್ಳುತ್ತಾನೆ. ಸಾಮಾನ್ಯವಾಗಿಕಡಿಮೆ ಬಜೆಟ್ ಹೋಟೆಲ್ ಹಾಗೂ ಲಾಡ್ಜ್‌ಗಳಲ್ಲಿ ಬಿಡಾರ ಹೂಡುತ್ತಾನೆ ಎಂದು ಎನ್‌ಐಎ ತಿಳಿಸಿದೆ. 

Tirthahalli suspects

 

ಮುಸಾವೀರ್‌ಹುಸೇನ್ ಶಾಜಿಬ್

ಇನ್ನೊಬ್ಬ ಆರೋಪಿ ರಾಮೇಶ್ವರಂ  ಕೆಫೆಗೆ ಬಾಂಬ್ ಇಟ್ಟಿದ್ದ ಮುಸಾವೀರ್‌ಹುಸೇನ್ ಶಾಜಿಬ್ ಅಲಿಯಾಸ್ ಎಂ.ಡಿ.ಹುಸೈನ್ 6.2 ಅಡಿ ಎತ್ತರವಿದ್ದಾನೆ., ಜಿಮ್‌ನಲ್ಲಿ ಕಸರತ್ತು ಮಾಡಿದ್ದಂತಹ ಮೈಕಟ್ಟು ಹೊಂದಿ ನೋಡಲು ಸುಂದರವಾಗಿದ್ದಾನೆ ಎಂದು ಎನ್‌ಐಎ ಹೇಳಿದೆ. 

Tirthahalli suspects

 

ಸದಾ ಜೀನ್ಸ್‌ ಹಾಗೂ ಟೀ ಶರ್ಟ್‌ನಲ್ಲೇಕಾಣಿಸಿಕೊಳ್ಳುತ್ತಾನೆ.ಮಹಮ್ಮದ್ ಜುನೇದ್ ಶಾಹಿದ್ ಹೆಸರಿನಲ್ಲಿ ನಕಲಿ ಚಾಲನಾ ಪರವಾನಗಿ ಸೇರಿ ಇತರೆ ದಾಖಲೆಗಳನ್ನು ಪಡೆದಿದ್ದಾನೆ. ಹಾಸ್ಟೆಲ್ ಹಾಗೂ ಪಿಜಿಗಳು ಮಾತ್ರವಲ್ಲದೆ ಕಡಿಮೆ ಬಜೆಟ್ ಹೋಟೆಲ್ ಗಳಲ್ಲಿ ಆತ ವಾಸ್ತವ್ಯ ಹೂಡುತ್ತಾನೆ ಎಂದು ವಿವರಿಸಿದೆ. 

Tirthahalli suspects

 

ಕರೆ ಅಥವಾ ಮೇಲ್ ಕಳುಹಿಸಿ: 

ಈ ಶಂಕಿತರ ಕುರಿತು ಮಾಹಿತಿ ಇದ್ದರೆ 080-29510900, 890424100 6 info.blr.nia@gov. in ಗೆ ಕರೆ ಅಥವಾ ಇಮೇಲ್ ಮಾಡುವಂತೆ ಕೋರಿರುವಎನ್‌ಐಎ,ಮಾಹಿತಿದಾರನಗೌಪ್ಯ ತೆಯನ್ನು ಕಾಪಾಡುವುದಾಗಿ ಖಚಿತಪಡಿಸಿದೆ. ಅಂಚೆ ವಿಳಾಸ- ಎಸ್ಪಿ, ರಾಷ್ಟ್ರೀಯ ತನಿಖಾ ದಳ, 3ನೇ ಫ್ಲೋರ್, ಬಿಎಸ್‌ಎನ್‌ಎಲ್ ಟೆಲಿಫೋನ್ ಎಕ್ಸ್‌ಚೆಂಜ್, 80ನೇ ಅಡಿ ರಸ್ತೆ, ಎಚ್‌ಎಎಲ್ 2ನೇ ಹಂತ, ಇಂದಿರಾನಗರ, ಬೆಂಗಳೂರು.

Tirthahalli suspects