ಹಿಂದೂ ಹೆಸರಿನಲ್ಲಿ ತೀರ್ಥಹಳ್ಳಿ ಶಂಕಿತರ ಓಡಾಟ! ರಾಮೇಶ್ವರಂ ಕಫೆ ಸ್ಫೋಟ ಕೇಸ್‌ನ ಅಪ್‌ಡೇಟ್ಸ್‌!

Tirthahalli suspects run in the name of Hindu! Updates on the Rameswaram cafe blast case!

ಹಿಂದೂ ಹೆಸರಿನಲ್ಲಿ ತೀರ್ಥಹಳ್ಳಿ ಶಂಕಿತರ ಓಡಾಟ! ರಾಮೇಶ್ವರಂ ಕಫೆ ಸ್ಫೋಟ ಕೇಸ್‌ನ ಅಪ್‌ಡೇಟ್ಸ್‌!
Rameswaram cafe blast case,Tirthahalli suspects

Shivamogga  Mar 30, 2024 ಬೆಂಗಳೂರು ರಾಮೇಶ್ವರಂ ಕಫೆ ಸ್ಫೋಟ ಪ್ರಕರಣದ ಆರೋಪಿಗಳು ಹಿಂದೂ ಹೆಸರು ಇಟ್ಟುಕೊಂಡು ಅಜ್ಞಾತ ಸ್ಥಳಗಳಲ್ಲಿ ತಮ್ಮ ಪರಿಚಯ ಮಾಡಿಕೊಳ್ಳುತ್ತಿದ್ದರು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಕಫೆ ಸ್ಫೋಟ ಪ್ರಕರಣದಲ್ಲಿ ಎನ್‌ಐಎ ಶಿವಮೊಗ್ಗ ಐಸಿಸ್‌ ಮ್ಯಾಡುಲ್‌ನ ಕೈವಾಡ ಇರುವುದು ಗೊತ್ತಾಗುತ್ತಿದ್ದಂತೆ ಎಲ್ಲೆಡೆ ರೇಡ್‌ ನಡೆಸಿ ಓರ್ವನನ್ನ ವಶಕ್ಕೆ ಪಡೆದಿತ್ತು. ಈ ಸಂಬಂಧ ನಿನ್ನೆಯಷ್ಟೆ ಪ್ರಕಟಣೆಯನ್ನ ನೀಡಿರುವ ಎನ್‌ಐಎ ಇನ್ನಷ್ಟು ವಿಚಾರಗಳನ್ನು ಹಂಚಿಕೊಂಡಿದೆ

ಶಿವಮೊಗ್ಗ ಐಸಿಸ್ ಮ್ಯಾಡ್ಯುಲ್ ಗ್ಯಾಂಗ್

ಶಿವಮೊಗ್ಗ ಐಸಿಸ್ ಮ್ಯಾಡ್ಯುಲ್ ಗ್ಯಾಂಗ್ ಗೆ ಸಂಬಂಧಿಸಿದಂತೆ ವಿವರಣೆ ನೀಡಿರುವ ರಾಷ್ಟ್ರೀಯ ತನಿಖಾ ದಳದ ತನಿಖೆಯಲ್ಲಿ ಹಲವು ಅಂಶಗಳನ್ನು ಹೇಳಿದೆ. ಪ್ರಕರಣದ ಪ್ರಮುಖ ಆರೋಪಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅಬ್ದುಲ್ ಮತೀನ್‌ ತಾಹಾ, ಹೊರರಾಜ್ಯಗಳಲ್ಲಿ ತನ್ನ ಹೆಸರನ್ನು ವಿಘ್ನೇಶ್‌ ಮತ್ತು ಸುಮಿತ್ ಎಂದು ಹೇಳಿಕೊಂಡು ಆಶ್ರಯ ಪಡೆದಿದ್ದ ಎನ್ನಲಾಗಿದೆ. ಅಲ್ಲದೆ ಇದೇ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಸಹ ಪಡೆದು ಸಿಮ್ ಖರೀದಿಸಿ ಆತ ವ್ಯವಹರಿಸಿದ್ದಾನೆ ಎನ್ನಲಾಗಿದೆ.ಇನ್ನೂ ಶಾಜೀಬ್‌ ಮಹಮ್ಮದ್ ಜುನೇದ್ ಶಾಹಿದ್ ಎಂಬ ಹೆಸರಿನಲ್ಲಿ ಡಿಎಲ್‌ ಪಡೆದಿದ್ದ ಎಂಬ ವಿಚಾರವೂ ಗೊತ್ತಾಗಿದೆ.