ಕೊರೊನಾ ಟೈಂನಲ್ಲಿ ಸಾಗರದಲ್ಲಿ ನಡೆದಿತ್ತು ನಾಲ್ಕು ಕೋಟಿ ವಂಚನೆ! ಇದೀಗ ಆರೋಪಿ ಅರೆಸ್ಟ್!‌ ಏನಿದು ಅಡಕೆ ಕೇಸ್‌

Rs 4 crore fraud took place in Sagara during corona time The accused has now been arrested! What is the arecanut case? sagara taluk news today

ಕೊರೊನಾ ಟೈಂನಲ್ಲಿ ಸಾಗರದಲ್ಲಿ ನಡೆದಿತ್ತು ನಾಲ್ಕು ಕೋಟಿ ವಂಚನೆ! ಇದೀಗ ಆರೋಪಿ ಅರೆಸ್ಟ್!‌ ಏನಿದು ಅಡಕೆ ಕೇಸ್‌
sagara taluk news today

Shivamogga  Apr 14, 2024 sagara taluk news today  ಕೋವಿಡ್‌ ಟೈಂನಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುನಲ್ಲಿ ಅಡಿಕೆ ವ್ಯಾಪಾರ ಮಾಡಿ, ಖರೀದಿಸಿದ ಅಡಿಕೆಗೆ ದುಡ್ಡು ಕೊಡದೇ ಮೋಸ ಮಾಡಿದ ಆರೋಪದ ಅಡಿಯಲ್ಲಿ ಓರ್ವ ವ್ಯಾಪಾರಿಯನ್ನ ಸಾಗರ ಪೊಲೀಸರು ಬಂಧಿಸಿದ್ದಾರೆ. 

60ಕ್ಕೂ ಹೆಚ್ಚು ಸಣ್ಣ ವ್ಯಾಪಾರಿಗಳಿಗೆ ಸುಮಾರು 4 ಕೋಟಿ ರೂ. ವಂಚಿ ಸಿದ್ದ ನಗರದ ಅಡಕೆ ವ್ಯಾಪಾರಿಯನ್ನು ಪೇಟೆ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.  ನೆಹರೂ ನಗರದ ನಿವಾಸಿ ಬಂಧಿತ ಆರೋಪಿ. ಬೆಂಗಳೂರಿನಲ್ಲಿ ಖಾಸಗಿ ಚಿಟ್ ಫಂಡ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಕೋವಿಡ್ ಸಮಯದಲ್ಲಿ ಸಾಗರಕ್ಕೆ ಬಂದು ಸಣ್ಣ ದಾಗಿ ಅಡಕೆ ವ್ಯವಹಾರ ಪ್ರಾರಂಭಿಸಿದ್ದ. ಇಲ್ಲಿನ ಸಣ್ಣಪುಟ್ಟ ವ್ಯಾಪಾರಿಗಳಿಂದ ಉದ್ರಿ ಲೆಕ್ಕದಲ್ಲಿ ಮಾಲು ಖರೀದಿಸಿ ಬೇರೆಯವರಿಗೆ ಮಾರಾಟ ಮಾಡಿ ಲಾಭ ಪಡೆಯುತ್ತಿದ್ದ. ಆನ್‌ಲೈನ್ ಗ್ಯಾಂಬ್ಲಿಗ್ ಅಭ್ಯಾಸವಿದ್ದ ಈತ ಅಡಕೆ ವ್ಯಾಪಾರದಲ್ಲಿ ಬಂದ ಹಣವನ್ನ ಇದಕ್ಕೆ ಖರ್ಚು ಮಾಡುತ್ತಿದ್ದ ಎನ್ನಲಾಗಿದೆ. 

ಕಳೆದ 7-8 ತಿಂಗಳಿಂದ ಇದೇ ಪ್ರವೃತ್ತಿಯಲ್ಲಿ ತೊಡಗಿದ್ದರಿಂದ ಸಾಲದ ಮೊತ್ತ ಕೋಟಿಯ ಲೆಕ್ಕದಲ್ಲಿ ಬೆಳೆದಿತ್ತು. ಅಡಕೆ ಪಡೆದವರಿಗೆ ಹಣ ನೀಡಲು ಸಾಧ್ಯವಾಗದೆ ಕೆಲ ದಿನಗಳ ಕಾಲ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಸಣ್ಣವ್ಯಾಪಾರಿಗಳು ದೂರು ನೀಡಿದ್ದರು.