ಗೀತಾ ಶಿವರಾಜ್‌ ಕುಮಾರ್‌ ನಾಮಿನೇಷನ್‌ !ಎಷ್ಟು ಜನ ಸೇರುತ್ತಾರೆ! ಸಿಗಂದೂರಲ್ಲಿ ಶಿವಣ್ಣನ ಪ್ರಾರ್ಥನೆ, ವಿಶೇಷ ವಿಮಾನದಲ್ಲಿ ಡಿಕೆ ಶಿವಕುಮಾರ್‌

Geetha Shivraj Kumar Nomination! How many people join! Sivanna's prayer at Sigandur, DKsivakumar in a special flight

ಗೀತಾ ಶಿವರಾಜ್‌ ಕುಮಾರ್‌ ನಾಮಿನೇಷನ್‌ !ಎಷ್ಟು ಜನ ಸೇರುತ್ತಾರೆ! ಸಿಗಂದೂರಲ್ಲಿ ಶಿವಣ್ಣನ ಪ್ರಾರ್ಥನೆ, ವಿಶೇಷ ವಿಮಾನದಲ್ಲಿ ಡಿಕೆ ಶಿವಕುಮಾರ್‌
Geetha Shivraj Kumar Nomination,Sivanna,Sigandur, DKshivakumar

Shivamogga  Apr 14, 2024 ಶಿವಮೊಗ್ಗದಲ್ಲಿಂದು ಲೋಕಸಭಾ ಚುನಾವಣೆ  2024 ಕ್ಕೆ ಸ್ಪರ್ಧೆ ಬಯಸಿ ಗೀತಾ ಶಿವರಾಜ ಕುಮಾರ್‌ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಶಿವಮೊಗ್ಗ ನಗರದ ರಾಮಣ್ಣ ಶೆಟ್ಟಿ ಪಾರ್ಕ್‌ ಆವರಣದಿಂದ ಬೃಹತ್‌ ಮೆರವಣಿಗೆ ಮೂಲಕ ಸಾಗಿ ಬಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ . ಇದಕ್ಕಾಗಿ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದ್ದು ಮೆರವಣಿಗೆ ಆರಂಭಿಕ ಹಂತದಲ್ಲಿ ಸಾಗುತ್ತಿದೆ. 

mt

ಇಂದು ನಾಮಪತ್ರ ಸಲ್ಲಿಕೆ 

 

ಇನ್ನು  ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ನಿನ್ನೆ ಗೀತಾ ಶಿವರಾಜಕುಮಾರ್‌ ಹಾಗೂ ಶಿವಣ್ಣ ಸಿಗಂದೂರು ಚೌಡಶ್ವರಿ ದೇವಸ್ಥಾನಕ್ಕೆ ಭೇಟಿಕೊಟ್ಟು ಪೂಜೆ ಸಲ್ಲಿಸಿದ್ರು.ಈ ವೇಳೆ ಬಿಫಾರಂನ್ನ ದೇವಿಯ ಸನ್ನಿಧಾನದಲ್ಲಿಟ್ಟು ಪ್ರಾರ್ಥಿಸಿದರು. ಕಾಂಗ್ರೆಸ್‌ನ ಹಿರಿಯರು  ಕಾಗೋಡು ತಿಮ್ಮಪ್ಪ ರನ್ನ ಭೇಟಿಯಾದ ದಂಪತಿ ಆಶೀರ್ವಾದ ಪಡೆದರು.    

 

ವಿಶೇಷ ವಿಮಾನದಲ್ಲಿ ಡಿಕೆ ಶಿವಕುಮಾರ್‌ ಆಗಮನ

 

ಇವತ್ತು ನಡೆಯಲಿರುವ ನಾಮಿನೇಷನ್‌ ಕಾರ್ಯಕ್ರಮಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಬರಲಿದ್ದಾರೆ ಎಂದು ತಿಳಿದುಬಂದಿದೆ.  ಏ.15ರಂದು ಮಧ್ಯಾಹ್ನ 12.30ಕ್ಕೆ ವಿಶೇಷ ವಿಮಾನದ ಮೂಲಕ ಬೆಳಗಾವಿಯಿಂದ ಹೊರಡಲಿದ್ದಾರೆ. ಮಾಧ್ಯಾಹ್ನ 1.30ಕ್ಕೆ ಶಿವಮೊಗ್ಗದಲ್ಲಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 4.30ಕ್ಕೆ ವಿಶೇಷ ವಿಮಾನದ ಮೂಲಕ ಬೆಂಗಳೂರಿನತ್ತೆ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗಿದೆ. 

mt

ಮಧು ಬಂಗಾರಪ್ಪ ಸಾಥ್‌ 

 

ಕಾರ್ಯಕ್ರಮದಲ್ಲಿ  ಸಚಿವ ಮಧು ಬಂಗಾರಪ್ಪ ಸೇರಿದಂತೆ ಜಿಲ್ಲೆಯ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಏಪ್ರಿಲ್‌ ಹನ್ನೆರಡನೇ ತಾರೀಖು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕೆಎಸ್‌ ಈಶ್ವರಪ್ಪನವರ ನಾಮಿನೇಷನ್‌ ವೇಳೆ 30 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು ಎಂದು  ಅವರ ಬೆಂಬಲಿಗರು ಹೇಳಿದ್ದರು. 

 

45 ಸಾವಿರ ಮಂದಿ ಜನ

 

ಇನ್ನು ಇವತ್ತಿನ ಗೀತಾ ಶಿವರಾಜ್‌ ಕುಮಾರ್‌ರವರ ಕಾರ್ಯಕ್ರಮಕ್ಕೆ ಬರೋಬ್ಬರಿ 45 ಸಾವಿರ ಮಂದಿ ಜನ ಸೇರುವ ನಿರೀಕ್ಷೆ ಇದೆ ಎಂದು ಸುದ್ದಿಗೋಷ್ಟಿಯಲ್ಲಿ ಗೀತಾ ಶಿವರಾಜ್‌ ಕುಮಾರ್‌ ಹೇಳಿದ್ದರು.