ಮಾರಿಕಾಂಬಾ ಫೈನಾನ್ಸ್‌ , ಓಂಶಕ್ತಿ | ಈಶ್ವರಪ್ಪ ವೋಟ್‌ ಪಾಕೆಟ್‌ನಲ್ಲಿ ಯಾರ್ಯಾರು ಇದ್ದಾರೆ | ದೊಡ್ಡಸುದ್ದಿ

Marikamba Finance, Omshakti | Who is in Eshwarappa's vote pocket? big news BS Yeddyurappa, Shimoga Lok Sabha Constituency, Shimoga Political News, BY Raghavendra, Geeta Shivaraj Kumar

ಮಾರಿಕಾಂಬಾ ಫೈನಾನ್ಸ್‌ , ಓಂಶಕ್ತಿ | ಈಶ್ವರಪ್ಪ ವೋಟ್‌ ಪಾಕೆಟ್‌ನಲ್ಲಿ ಯಾರ್ಯಾರು ಇದ್ದಾರೆ | ದೊಡ್ಡಸುದ್ದಿ
Marikamba Finance, Omshakti, Eshwarappa vote pocket ,BS Yeddyurappa, Shimoga Lok Sabha Constituency, Shimoga Political News, BY Raghavendra, Geeta Shivaraj Kumar

SHIVAMOGGA | MALENADUTODAY NEWS | Apr 30, 2024    ‌ 

ಶಿವಮೊಗ್ಗ ಲೋಕಸಭಾ ಕ್ಷೇತ್ರದ ರಂಗೇರಿದ್ದು, ಚುನಾವಣೆಯ ಮೂಡ್‌ ಯಾರ ಕಡೆ ಇದೆ ಎನ್ನುವುದೇ ಡಿಸೈಡ್‌ ಆಗುತ್ತಿಲ್ಲ. ಪಕ್ಷೇತರ ಅಭ್ಯರ್ಥಿ, ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳು ತಮ್ಮದೇ ಗೆಲುವು ಎಂದು ಲೀಡ್‌ ಲೆಕ್ಕಾಚಾರ ನೀಡುತ್ತಿದ್ದಾರೆ. ವಿಶೇಷ ಅಂದರೆ, ಈ ನಡುವೆ ಪಕ್ಷೇತರ ಅಭ್ಯರ್ಥಿಯ ನಡೆಗಳು ಕತೂಹಲ ಮೂಡಿಸುತ್ತಿದ್ದು ಉಳಿದ ಅಭ್ಯರ್ಥಿಗಳಲ್ಲಿ ಸಂಚಲನ ಮೂಡಿಸ್ತಿದೆ. 

ರಾಜ್ಯದ ಪ್ರಮುಖ ರಾಜಕೀಯ ಬರಹಗಾರ ಆರ್‌ ಟಿ ವಿಠಲಮೂರ್ತಿಯವರು ಈ ಬಗ್ಗೆ ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಬರೆದುಕೊಂಡಿದ್ದು, ಅದರ ವಿವರ ಹೀಗಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಣಕ್ಕೆ ಇಳಿದಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಒಂದು ಲೆವೆಲ್ಲಿನ ಹವಾ ಎಬ್ಬಿಸಿದ್ದಾರೆ. ಯಡಿಯೂರಪ್ಪ ಪುತ್ರ ರಾಘವೇಂದ್ರ ಅವರನ್ನು ಸೋಲಿಸುವ ಗುರಿಯೊಂದಿಗೆ ಸ್ಪರ್ಧಿಸಿರುವ ಈಶ್ವರಪ್ಪ ಅವರ ಬಗ್ಗೆ,ಶುರುವಿನ ದಿನಗಳಲ್ಲಿದ್ದ ಭಾವನೆ ಕರಗತೊಡಗಿದೆ. ಶುರುವಿನಲ್ಲಿ ಈಶ್ವರಪ್ಪ ಅವರ ಸ್ಪರ್ಧೆಯ ಬಗ್ಗೆ ಮಾತನಾಡಿದರೆ,'ಯೇ,ಅವ್ರಿಗೆ ಇಪ್ಪತ್ತರಿಂದ ಮೂವತ್ತು ಸಾವಿರ ವೋಟು ಬಂದ್ರೆ ಜಾಸ್ತಿ' ಅಂತ ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿಕೂಟದ ನಾಯಕರು ಹೇಳುತ್ತಿದ್ದರು.ಅಷ್ಟೇ ಅಲ್ಲ,ಜಾತಿವಾರು ಮತಗಳ ಲೆಕ್ಕಾಚಾರವನ್ನು ಮುಂದಿಟ್ಟು,'ಇದರಲ್ಲಿ ಯಾವ ಜಾತಿಗಳು ಈಶ್ವರಪ್ಪ ಅವರ ಪರವಾಗಿವೆ ಹೇಳ್ರೀ' ಎನ್ನುತ್ತಿದ್ದರು.

ಆದರೆ ದಿನ ಕಳೆದಂತೆ ಈಶ್ವರಪ್ಪ ಅವರು ಜಾತಿಗಿಂತ ಧರ್ಮಾಧಾರಿತ ಮತ ಬ್ಯಾಂಕಿನ‌ ಮೇಲೆ ಕಣ್ಣಿಟ್ಟಿರುವುದು ಸ್ಪಷ್ಟವಾಗಿದೆ.ಅವರ ಆಪ್ತರ ಪ್ರಕಾರ,ಈಶ್ವರಪ್ಪ ಅವರ ಪರ ಹೋರಾಡಲು ಹಲವು  ತುಕಡಿಗಳಿದ್ದು ಇದರಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಯೋಧರಿದ್ದಾರೆ. ಈ ಪೈಕಿ ಮಾರಿಕಾಂಬಾ ಮೈಕ್ರೋ ಫೈನಾನ್ಸ್ ನ ಹತ್ತು ಸಾವಿರಕ್ಕೂ ಹೆಚ್ಚು ಮಂದಿ,ಓಂ ಶಕ್ತಿ ತುಕಡಿಯ ಹದಿನೆಂಟು ಸಾವಿರದಷ್ಟು ಮಂದಿ ಫೀಲ್ಡಿಗಳಿದಿದ್ದಾರೆ.ಶಿವಮೊಗ್ಗ,ಶಿವಮೊಗ್ಗ ಗ್ರಾಮಾಂತರ ಮತ್ತು ಭದ್ರಾವತಿ ಕ್ಷೇತ್ರಗಳಲ್ಲಿ ಮಾರಿಕಾಂಬಾ ಮತ್ತು ಓಂ ಶಕ್ತಿ ತುಕಡಿಗಳ ಎಫೆಕ್ಟು ಜಾಸ್ತಿ.

ಅಂದ ಹಾಗೆ ಪ್ರತಿ ವರ್ಷ ಈಶ್ವರಪ್ಪ ಅವರು ನೂರಿಪ್ಪತ್ತು ಬಸ್ಸುಗಳಲ್ಲಿ ಜನರನ್ನು  ಓಂ ಶಕ್ತಿ ಕ್ಷೇತ್ರಕ್ಕೆ ಕಳಿಸುತ್ತಾರೆ.ಈಗ ಇದೇ ಜನ ಓಂ ಶಕ್ತಿ ತುಕಡಿಯಾಗಿ ಪರಿವರ್ತನೆಯಾಗಿದ್ದು   ಚುನಾವಣೆಯಲ್ಲಿ ಡೆಡ್ಲಿ ಹೋರಾಟ ನಡೆಸುತ್ತಿದ್ದಾರೆ.ಇದೇ ರೀತಿ ಒಕ್ಕಲಿಗ ನಾಯಕರಾದ ಸಿ.ಟಿ.ರವಿ,ಪ್ರತಾಪ್ ಸಿಂಹ,ನಳೀನ್ ಕುಮಾರ್ ಕಟೀಲ್ ಅವರಿಗೆ ಬಿಜೆಪಿಯಿಂದ ಅನ್ಯಾಯವಾಗಿದ್ದು ಇದರಿಂದ ಕೆರಳಿರುವ ಭದ್ರಾವತಿ,ತೀರ್ಥಹಳ್ಳಿ ಪಾಕೀಟಿನ ಬಹುತೇಕ ಒಕ್ಕಲಿಗರು ಈಶ್ವರಪ್ಪ ಬೆನ್ನಿಗೆ ನಿಲ್ಲಲಿದ್ದಾರೆ.

ಇನ್ನು ಈಡಿಗರು ತಮ್ಮ ಜತೆಗಿದ್ದಾರೆ ಅಂತ ಕಾಂಗ್ರೆಸ್ಸಿನ ಗೀತಾ ಶಿವರಾಜ್ ಕುಮಾರ್ ಮತ್ತವರ ಸಹೋದರ ಮಧುಬಂಗಾರಪ್ಪ ಭಾವಿಸಿದ್ದರೂ,ಲಿಂಗಾಯತರು ತಮ್ಮ ಜತೆಗಿದ್ದಾರೆ ಅಂತ ರಾಘವೇಂದ್ರ ಭಾವಿಸಿದ್ದರೂ ಈ ವೋಟ್ ಬ್ಯಾಂಕಿನ ಮೇಜರ್ ಶೇರು ಈಶ್ವರಪ್ಪ ಅವರಿಗೆ ದಕ್ಕಲಿದೆ. ಈ ಮಧ್ಯೆ ಬೈಂದೂರು,ಸೊರಬ,ಸಾಗರ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಸುಧಾರಿಸುತ್ತಿದ್ದು,ಮ್ಯಾಚ್ ಫಿನಿಷರ್ಸ್ ಖ್ಯಾತಿಯ ಐನೂರು ಜನರ ತಂಡ ಒಂದೆರಡು ದಿನಗಳಲ್ಲಿ ಚಿಕ್ಕಮಗಳೂರಿನಿಂದ ಕ್ಷೇತ್ರಕ್ಕೆ ಬಂದಿಳಿಯಲಿದೆ. ಉಳಿದಂತೆ ದಶಕಗಳ ಕಾಲದಿಂದ ಜಿಲ್ಲೆಯಲ್ಲಿ ಈಶ್ವರಪ್ಪ ಕಟ್ಟಿದ ಹಿಂದುತ್ವದ ಕೋಟೆ ನಿರ್ಣಾಯಕ ಘಟ್ಟದಲ್ಲಿ ಅವರ ಜತೆ  ನಿಲ್ಲುತ್ತದೆ. ಹೀಗಾಗಿ ಈಶ್ವರಪ್ಪ ಗೆದ್ದರೆ ಅಚ್ಚರಿಪಡಬೇಕಾಗಿಲ್ಲ ಅಂತ ಅವರ ಆಪ್ತರು ಹೇಳುತ್ತಾರೆ.ಇದು ಎಷ್ಟರ ಮಟ್ಟಿಗೆ ನಿಜವಾಗುತ್ತದೆ ಎಂಬುದು ಕಾಲಕ್ಕೆ ಬಿಟ್ಟ ವಿಚಾರ.ಆದರೆ ಕಾಂಗ್ರೆಸ್ ಮತ್ತು ಬಿಜೆಪಿಯಂತೆ ಜಾತಿ ಮತ ಬ್ಯಾಂಕಿನ ಗೊಡವೆಯಿಲ್ಲದೆ ಹೋರಾಡುತ್ತಿರುವ ಈಶ್ವರಪ್ಪ ಅವರ ಕಾನ್ಫಿಡೆನ್ಸು ಮಾತ್ರ ನಿಜಕ್ಕೂ ದೊಡ್ಡದು.

(ಸೂಚನೆ : ಈ ವರದಿ ಆರ್‌ಟಿ ವಿಠಲ ಮೂರ್ತಿಯವರಾಗಿದ್ದು, ಅವರ ಕೃಪೆಯೊಂದಿಗೆ ಇಲ್ಲಿ ಪ್ರಕಟಿಸಲಾಗಿದೆ.)