ನರೇಂದ್ರ ಮೋದಿ ಫೋಟೋ ಬಳಕೆ | ಕೆಎಸ್‌ ಈ‍ಶ್ವರಪ್ಪನವರ ವಿರುದ್ಧ ಶಿವಮೊಗ್ಗ ಜಿಲ್ಲಾ ಬಿಜೆಪಿ ದೊಡ್ಡ ನಡೆ! ಏನದು?

ನರೇಂದ್ರ ಮೋದಿ ಫೋಟೋ ಬಳಕೆ | ಕೆಎಸ್‌ ಈ‍ಶ್ವರಪ್ಪನವರ ವಿರುದ್ಧ ಶಿವಮೊಗ್ಗ ಜಿಲ್ಲಾ ಬಿಜೆಪಿ ದೊಡ್ಡ ನಡೆ! ಏನದು? Narendra Modi photo usage issue Big move by Shimoga district BJP against KS Eshwarappa! what is

ನರೇಂದ್ರ ಮೋದಿ ಫೋಟೋ ಬಳಕೆ  |  ಕೆಎಸ್‌ ಈ‍ಶ್ವರಪ್ಪನವರ ವಿರುದ್ಧ ಶಿವಮೊಗ್ಗ ಜಿಲ್ಲಾ ಬಿಜೆಪಿ ದೊಡ್ಡ ನಡೆ! ಏನದು?
Narendra Modi photo

Shivamogga Apr 17, 2024  Narendra Modi photo ಪ್ರಧಾನಿ ನರೇಂದ್ರ ಮೋದಿಯವವರ ಫೋಟೋ ಬಳಕೆ ವಿಚಾರ ಶಿವಮೊಗ್ಗದಲ್ಲಿ ವಿಪರೀತ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಪಕ್ಷೇತರ ಅಭ್ಯರ್ಥಿ ಕೆಎಸ್‌ ಈಶ್ವರಪ್ಪ ನರೇಂದ್ರ ಮೋದಿ ಫೋಟೋವನ್ನ ಬಳಸಿಕೊಳ್ಳಲು ನಿರ್ಧರಿಸಿದ್ದು, ತಮ್ಮ ಪಕ್ಷದ ವಿರುದ್ಧವೇ ಹರಿಹಾಯ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಕೋರ್ಟ್‌ ಮೊರೆಹೋಗಿದೆ. 

ಈ ಮೊದಲು ಚುನಾವಣಾ ಆಯೋಗಕ್ಕೆ ರಾಜ್ಯ ಬಿಜೆಪಿ ನರೇಂದ್ರ ಮೋದಿಯವರ ಫೋಟೋವನ್ನ ಈಶ್ವರಪ್ಪನವರು ಬಳಸದಂತೆ ತಡೆಯುವಂತೆ ಮನವಿ ನೀಡಿ ಒತ್ತಾಯಿಸಿತ್ತು. ಇದರ ನಡುವೆ ಇದೀಗ  ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋಗಳನ್ನು ಕೆಎಸ್‌ ಈಶ್ವರಪ್ಪನವರು ಬಳಸುತ್ತಿರುವುದನ್ನ ಆಕ್ಷೇಪಿಸಿ ಶಿವಮೊಗ್ಗ ಜಿಲ್ಲಾ ಕೋರ್ಟ್‌ ಮೆಟ್ಟಿಲೇರಿದೆ. 

ಕೆಎಸ್‌ ಈ‍ಶ್ವರಪ್ಪನವರು ತಮ್ಮ ಪರವಾದ ಪ್ರಚಾರಕ್ಕೆ ಮೋದಿ ಫೋಟೋ ಬಳಸಿರುವುದನ್ನು ಆಕ್ಷೇಪಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್  ಕಳೆದ ಸೋಮವಾರ ಅಂದರೆ ಏಪ್ರಿಲ್‌ 15ರಂದು ಶಿವಮೊಗ್ಗ  ಕೋರ್ಟ್‌ನಲ್ಲಿ  interlocutory application ನನ್ನ ಸಲ್ಲಿಸಿದೆ. ಈ ಸಂಬಂಧ ನಿನ್ನೆ ಅಂದರೆ ಏಪ್ರಿಲ್‌ 16 ರಂದು ಸಲ್ಲಿಸಿದ ಅರ್ಜಿ Principal Senior Civil Judge and CJM of Shivamogga ರವರ ಮುಂದೆ ಬಂದಿದ್ದು ವಿಚಾರಣೆಯನ್ನು ಏಪ್ರಿಲ್‌ 18 ಕ್ಕೆ ಮುಂದೂಡಲಾಗಿದೆ. 

ಈ ಮೊದಲು ಬಿಜೆಪಿಯಿಂದ ಇಂತಹ ಹೆಜ್ಜೆಯನ್ನು ನಿರೀಕ್ಷಿಸಿದ್ದ ಕೆಎಸ್‌ ಈಶ್ವರಪ್ಪರವರು ನರೇಂದ್ರ ಮೋದಿಯವರ ಫೋಟೋ ಬಳಕೆ ಸಂಬಂಧ ಶಿವಮೊಗ್ಗ ಕೋರ್ಟ್‌ನಲ್ಲಿಯೇ ಕೇವಿಯಟ್‌ ಅರ್ಜಿಯನ್ನು ಸಲ್ಲಿಸಿದ್ದರು.