ದ್ರೌಪದಮ್ಮ ಸರ್ಕಲ್​, ರೈಲ್ವೆ ನಿಲ್ದಾಣ, ರಾಗಿಗುಡ್ಡಗಳಲ್ಲಿ ಪೊಲೀಸರ ಫೂಟ್ ಪೆಟ್ರೋಲಿಂಗ್! ಕಟ್ಟೆ ಆಸಾಮಿಗಳಿಗೆ ಶಾಕ್!

Police foot patrolling at Draupadamma Circle, Railway Station, Ragigudda

ದ್ರೌಪದಮ್ಮ ಸರ್ಕಲ್​,  ರೈಲ್ವೆ ನಿಲ್ದಾಣ, ರಾಗಿಗುಡ್ಡಗಳಲ್ಲಿ ಪೊಲೀಸರ ಫೂಟ್ ಪೆಟ್ರೋಲಿಂಗ್! ಕಟ್ಟೆ ಆಸಾಮಿಗಳಿಗೆ ಶಾಕ್!
Police foot patrolling ,Draupadamma Circle, Railway Station, Ragigudda

Shivamogga | Feb 11, 2024 |    ದಿನಾಂಕಃ 10-02-2024  ರಂದು ಸಂಜೆ ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ನೇತಾಜಿ ವೃತ್ತ, ದ್ರೌಪದಮ್ಮ ವೃತ್ತ, ಜೆಪಿ ನಗರ, ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ  ರೈಲ್ವೆ ನಿಲ್ದಾಣ, ಎಎ ಕಾಲೋನಿ, ಬಸವನಗುಡಿ, ಉಷಾ ವೃತ್ತ, ಗಾಂಧಿ ನಗರ, ರಾಗಿಗುಡ್ಡಗಳಲ್ಲಿ ಪೊಲೀಸರು ಕಾಲ್ನಡಿಗೆ ಗಸ್ತು ಮುಂದುವರಿಸಿದ್ದಾರೆ. 

ಶಿವಮೊಗ್ಗದಲ್ಲಿ ಅಷ್ಟೆ ಅಲ್ಲದೆ  ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಸಿದ್ದಾಪುರ ಬೇಕರಿ ವೃತ್ತ,  ತರೀಕೆರೆ ರಸ್ತೆ, ತಮ್ಮಣ್ಣ ಕಾಲೋನಿ, ಹಿರಿಯೂರು, ಅಂತರಗಂಗೆ, ನಂಜಾಪುರ, ಜಂಬರಘಟ್ಟ, ಶಿಕಾರಿಪುರ  ಉಪ ವಿಭಾಗ ವ್ಯಾಪ್ತಿಯ ಶಿಕಾರಿಪುರ ಟೌನ್ ಭದ್ರಾಪುರ, ವಿನಾಯಕ ನಗರ, ಕೊಟ್ಟಾ ಗ್ರಾಮ, ಶಿರಾಳಕೊಪ್ಪ ಟೌನ್, ಸೊರಬದ ಕಾನ್ಕೇರಿ, ಆನವಟ್ಟಿ ಬಸ್ ನಿಲ್ದಾಣ, ಸಾಗರ ಉಪ ವಿಭಾಗ ವ್ಯಾಪ್ತಿಯ ಸಾಗರ ಟೌನ್ ನ ರೈಲ್ವೆ ನಿಲ್ದಾಣ ರಸ್ತೆ, ತ್ಯಾಗರ್ತಿ, ಕಾರ್ಗಲ್ ಬಜಾರ್ ಮತ್ತು ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ ಹೊಸನಗರದ ಮಾರಿಕಾಂಬ ದೇವಸ್ಥಾನ ಹತ್ತಿರ, ನಗರದ ಆರ್. ಪಿ ರಸ್ತೆ, ಆಗುಂಬೆ ಬಸ್ ನಿಲ್ದಾಣ, ಮಳೂರು ಹಾಗೂ ರಿಪ್ಪನ್ ಪೇಟೆ ಟೌನ್ ನಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು ಕಾಲ್ನಡಿಗೆ ವಿಶೇಷ ಗಸ್ತು  Foot Patrolling ಮಾಡಿದೆ. 

ಈ ವೇಳೆ Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 22 ಲಘು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.