Shivamogga | Feb 11, 2024 | ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್ನಲ್ಲಿ ಒಂದು ದರೋಡೆ ಯತ್ನದ ಪ್ರಕರಣದಲ್ಲಿ ನಾಲ್ವರು ಫಿಟ್ ಆಗಿದ್ದಾರೆ. ಉರ್ದು ಬಜಾರ್, ಮಿಳಘಟ್ಟ, ಭರ್ಮಪ್ಪ ನಗರ ಹಾಗೂ ಅಣ್ಣಾನಗರದ ನಾಲ್ವರು ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪದ ಅಡಿಯಲ್ಲಿ ಅರೆಸ್ಟ್ ಆಗಿದ್ದು, ಇವರ ವಿರುದ್ದ ಪೊಲೀಸರೇ ಸುಮುಟೋ ಕೇಸ್ ದಾಖಲಿಸಿದ್ದಾರೆ.
ಕೆಎಸ್ಆರ್ಟಿಸಿ ಬಸ್ ಡಿಪೋ
ಶಿವಮೊಗ್ಗದ ಕೆಎಸ್ಆರ್ಟಿಸಿ ಬಸ್ ಡಿಪೋ ಸಮೀಪ ಇರುವ ಎಕ್ಸಿಬೀಷನ್ ನಡೆಯುವ ಖಾಲಿ ಜಾಗದಲ್ಲಿ ಆರೋಪಿಗಳು ಹೊಂಚು ಹಾಕುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. ಎಕ್ಸಿಬೀಷನ್ ನಡೆಯುವ ಖಾಲಿ ಜಾಗದಿಂದ ಮಂಜುನಾಥ ಬಡಾವಣೆಗೆ ಹೋಗುವವರನ್ನ ಅಡ್ಡಹಾಕಿ ಅವರನ್ನ ದೋಚುವ ಸಲುವಾಗಿ ಖಾರದ ಪುಡಿ, ರಾಡು, ಚಾಕು ಹಾಗೂ ಲಾಂಗ್ ಹಿಡಿದು ಸ್ಕೆಚ್ ಹಾಕಿ ನಿಂತಿದ್ದಾರೆ ಎಂಬ ಮಾಹಿತಿ ದೊಡ್ಡಪೇಟೆ ಪೊಲೀಸರಿಗೆ ಬಂದಿದೆ.
ಬುದ್ದಾನಗರ ಸರ್ಕಲ್
ಇದೇ ವೇಳೆ ಬುದ್ದಾನಗರ ಸರ್ಕಲ್ನಲ್ಲಿ ಪೆಟ್ರೋಲಿಂಗ್ ನಲ್ಲಿದ್ದ ದೊಡ್ಡಪೇಟೆ ಪಿಎಸ್ಐ-3 ಶ್ರೀನಿವಾಸ್ ಮಾಹಿತಿ ಸಿಗುತ್ತಲೇ ಸ್ಥಳದಲ್ಲಿ ರೇಡ್ ಮಾಡಿದ್ದಾರೆ. ಸಿಬ್ಬಂದಿಯ ಜೊತೆಗೆ ರೇಡ್ ಮಾಡಿದ ಪಿಎಸ್ಐ ನಾಲ್ವರನ್ನ ಅರೆಸ್ಟ್ ಮಾಡಿದ್ದಾರೆ. ಓರ್ವ ಪರಾರಿಯಾಗಿದ್ದಾನೆ. ಪೊಲೀಸರ ಕೈಗೆ ಇಡ್ಲಿ, ಪಠಾಣ್ ಅಲಿಯಾಸ್ ಅಕ್ರಿಖಾನ್ , ಮುಸ್ತಾಕ್, ಆದೀಲ್ ಹಾಗೂ ಮಾಜ್ ಬೇಗ್ ಸಿಕ್ಕಿಬಿದ್ದಿದ್ದಾರೆ. ಮಾರಕಾಸ್ತ್ರಗಳ ಜೊತೆಗೆ ಐವತ್ತು ಗ್ರಾಂ ಖಾರದ ಪುಡಿಯ ಜೊತೆಗೆ ಎಲ್ಲರನ್ನು ಅರೆಸ್ಟ್ ಮಾಡಿದ ಪೊಲೀಸರು
IPC 1860 (U/s-399,402) ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.
ಐಪಿಸಿ ಸೆಕ್ಷನ್
ಐಪಿಸಿ ಸೆಕ್ಷನ್ 399 : ಭಾರತೀಯ ದಂಡ ಸಂಹಿತೆಯ ಸೆಕ್ಷನ್ 399, ಡಕಾಯಿತಿ ಮಾಡಲು ಸಿದ್ಧತೆ ನಡೆಸಿದ ಆರೋಪವನ್ನ ಹೊಂದಿದೆ. ದರೋಡೆಗೆ ಯಾವುದೇ ಸಿದ್ಧತೆಯನ್ನು ಮಾಡುವವರು ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಕಠಿಣ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ ಮತ್ತು ದಂಡಕ್ಕೆ ಗುರಿಯಾಗುತ್ತಾರೆ.
ಐಪಿಸಿ ಸೆಕ್ಷನ್ 402 : ಭಾರತೀಯ ದಂಡ ಸಂಹಿತೆ, 1860 ರ ಸೆಕ್ಷನ್ 402 ಡಕಾಯಿತಿ ಮಾಡುವ ಉದ್ದೇಶಕ್ಕಾಗಿ ಒಟ್ಟುಗೂಡುವ ಅಪರಾಧದ ಬಗ್ಗೆ ಈ ಸೆಕ್ಷನ್ ಹೆಳುತ್ತದೆ. ಡಕಾಯಿತಿ ಮಾಡುವ ಉದ್ದೇಶಕ್ಕಾಗಿ ಐದು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರೆ, ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಕಠಿಣ ಸೆರೆವಾಸದಿಂದ ಶಿಕ್ಷೆಗೆ ಗುರಿಯಾಗುತ್ತಾರೆ ಮತ್ತು ದಂಡ ವಿಧಿಸಲಾಗುತ್ತದೆ.