ಬಸ್​ ಸ್ಟ್ಯಾಂಡ್​ನಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದವರಿಗೆ ಪೊಲೀಸರ ಆತಿಥ್ಯ | ಗೊಡೆಯನ್ನೆ ಒಡೆದು ಕಳ್ಳತನ| ಅಪರಿಚಿತನಿಂದ ಹಲ್ಲೆ

Today's Crime News in Shimoga

ಬಸ್​ ಸ್ಟ್ಯಾಂಡ್​ನಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದವರಿಗೆ ಪೊಲೀಸರ ಆತಿಥ್ಯ | ಗೊಡೆಯನ್ನೆ ಒಡೆದು ಕಳ್ಳತನ| ಅಪರಿಚಿತನಿಂದ ಹಲ್ಲೆ
Today's Crime News in Shimoga

Shivamogga | Feb 8, 2024 |   Today Crime News in Shimoga ಶಿವಮೊಗ್ಗದ SRTC ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬರ ಜೊತೆ ಇಬ್ಬರು ಯುವಕರ ಅಸಭ್ಯವಾಗಿ ವರ್ತಿಸಿದ ಆರೋಪವೊಂದು ಕೇಳಿಬಂದಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸರು ಯುವಕರಿಬ್ಬರನ್ನ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. 

ಕೆಎಸ್​ಆರ್​ಟಿಸಿ ನಿಲ್ದಾಣದಲ್ಲಿ ಯುವಕರಿಬ್ಬರು ತಮ್ಮ ಮಗಳ ಜೊತೆ ಅಸಭ್ಯವಾಗಿ ವರ್ತಿಸ್ತಿರುವ ಸಂಬಂಧ ತಾಯೊಬ್ಬರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಯುವಕರಿಬ್ಬರನ್ನ ವಶಕ್ಕೆ ಪಡೆದು ಸ್ಟೇಷನ್​ಗೆ ಕರೆತಂದು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ವಿನೋಬನಗರ ಪೊಲೀಸ್ ಸ್ಟೇಷನ್ 

ಇನ್ನೊಂದೆಡೆ  ವಿನೋಬನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಇನ್ನೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ದೂರು ಹೇಳಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಷ್ಟರಲ್ಲಿ ಹಲ್ಲೆ ಮಾಡಿದ್ದ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದ. ಹೀಗಾಗಿ ಹಲ್ಲೆಗೊಳಗಾದ ವ್ಯಕ್ತಿಯಿಂದ ದೂರು ಪಡೆದು ಪ್ರಕರಣದ ವಿಚಾರಣೆ ನಡೆಸ್ತಿದ್ದಾರೆ.  ತುಂಗಾನಗರ ಪೊಲೀಸ್ ಸ್ಟೇಷನ್ 

ಶಿವಮೊಗ್ಗದ ತುಂಗಾನಗರ ಪೊಲೀಸ್ ಸ್ಟೇಷನ್ ಲಿಮಿಟ್ಸ್​ನಲ್ಲಿ ಮನೆಯ ಗೋಡೆಯನ್ನ ಮುರಿದ ಕಳ್ಳರು ಕಳ್ಳತನ ನಡೆಸಿರುವ ಬಗ್ಗೆ ವರದಿಯಾಗಿದೆ. ಕಳೆದ ಐದನೇ ತಾರೀಖು ಈ ಘಟನೆ ನಡೆದಿದೆ. ಮನೆಯ ಒಂದುಭಾಗದ ಗೋಡೆಯನ್ನು ಒಡೆದಿರುವ ಕಳ್ಳರು ಮನೆಯೊಳಗಿದ್ದ ವಸ್ತುಗಳನ್ನ ಕಳ್ತನ ಮಾಡಿ ಕದೊಯ್ದಿದ್ದಾರೆ. ಈ ಸಂಬಂಧ ಮನೆ ಮಾಲೀಕರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣದ ವಿಚಾರಣೆ ನಡೆಸ್ತಿದ್ದಾರೆ.