ಹೆಂಡತಿಯೊಬ್ಬಳು ಸಂಘದಲ್ಲಿ ಇದ್ದರೇ?  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಚಾರಗೋಷ್ಟಿಯಲ್ಲಿ ಏನು ಹೇಳಿದ್ರು ಓದಿ!

Sri Kshetra Dharmasthala Rural Development Project seminar!

ಹೆಂಡತಿಯೊಬ್ಬಳು ಸಂಘದಲ್ಲಿ ಇದ್ದರೇ?   ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ವಿಚಾರಗೋಷ್ಟಿಯಲ್ಲಿ ಏನು ಹೇಳಿದ್ರು ಓದಿ!
Sri Kshetra Dharmasthala Rural Development Project, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

SHIVAMOGGA  |  Jan 6, 2024  |  ತ್ಯಾಗ ಹಾಗೂ ವಾತ್ಸಲ್ಯ ಮೂರ್ತಿಯ ಪ್ರತಿರೂಪವೇ ಹೆಣ್ಣು ಹೆಂಡತಿ ಒಬ್ಬಳ ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ ಈಗ ಈ ಸಾಲುಗಳ ರೂಪ ಬದಲಾಗಿ ಹೆಂಡತಿಯೊಬ್ಬಳು ಸಂಘದಲ್ಲಿದ್ದರೆ ನನಗದೆ ಕೋಟಿ ರೂಪಾಯಿಯಾಗಿ ಪರಿವರ್ತಿತವಾಗಿದೆ ಎಂದು ಡಾ ಶ್ರೀಪತಿ ಹಳಗುಂದ ಹೇಳಿದ್ದಾರೆ. 

 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ಪಟ್ಟಣದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ ಕೆ ಶ್ರೀಪತಿ ಹಳಗುಂದರವರು  ಪಟ್ಟಣದ ಗಾಯತ್ರಿ ಮಂದಿರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.  

ತಂತ್ರಜ್ಞಾನಗಳು ಮತ್ತು ಮಹಿಳಾ ಸವಾಲುಗಳು ವಿಷಯದಲ್ಲಿ ವಿಷಯದ ಬಗ್ಗೆ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳಿಂದ ನಾಲ್ಕು ಗೋಡೆಗಳ ಮಧ್ಯೆ ಬಂದಿಯಾಗಿದ್ದ ಹೆಣ್ ಈಗ ನಾಲ್ಕು ದಿಕ್ಕುಗಳಲ್ಲೂ ತನ್ನ ಪ್ರಭಾವ ಹಾಗೂ ಪ್ರಭುತ್ವ ಪ್ರದರ್ಶಿಸಿದ್ದಾರೆ ಎಂದಿದ್ದಾರೆ. 

ಕಾರ್ಯಕ್ರಮ ಉದ್ಘಾಟಿಸಿದ ತಹಶೀಲ್ದಾರ್ ಶ್ರೀಮತಿ ರಶ್ಮಿ ಹಾಲೇಶ್ ಹೆಣ್ಣು ಕೇವಲ ಭೂಮಿಯಲ್ಲದೆ ನಭದಲ್ಲೂ ತನ್ನ ಅಸ್ತಿತ್ವ ಗುರುತಿಸಿಕೊಂಡಿದ್ದು ರಕ್ಷಣೆ ಕೃಷಿ ಆರೋಗ್ಯ ಶಿಕ್ಷಣ ಸಾಮಾಜಿಕ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಅಸ್ತಿತ್ವ ಪ್ರದರ್ಶಿಸುತ್ತಿರುವುದು ಶ್ಲಾಘನೀಯವೆಂದರು 

ಜಿಲ್ಲಾ ಜನಜಾಗ್ರತಿ ವೇದಿಕೆಯ ಎನ್ನಾರ್ ದೇವಾನಂದ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಶ್ರೀಮತಿ ಶಶಿ ಕಲಾ ವಕೀಲ ಮೋಹನ ಶೆಟ್ಟಿ ಶ್ರೀಮತಿ ಅಶ್ವಿನಿ ಪಂಡಿತ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಾಧಕ ಮಹಿಳೆಯರಿಗೆ ಸನ್ಮಾನ ಪುಷ್ಪಗುಚ್ಛ ಸ್ಪರ್ಧೆ ರಂಗವಲ್ಲಿ ಸ್ಪರ್ಧೆ ಸಿರಿಧಾನ್ಯಗಳ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು 

READ : ಸಾಗರದಲ್ಲಿ ಮೂವರಿಗೆ ಡಿಕ್ಕಿ ಹೊಡೆದು ಕರೆಂಟ್ ಕಂಬಕ್ಕೆ ಗುದ್ದಿದ ಶಿರಸಿ ಮೂಲದ ಕಾರು! ವಾಹನದ ಮೇಲೆ ಬಿದ್ದ ಲೈಟ್ ಕಂಬ!

ಶ್ರೀ ವೀರಾಂಜನೇಯ ಸ್ವಾಮಿ ಸಿದ್ದರಾಮಯ್ಯ ದೇವಸ್ಥಾನಕ್ಕೆ ನೆರವು

ನಿರ್ಮಾಣ ಹಂತದಲ್ಲಿರುವ ಹೊಸನಗರ ಶ್ರೀ ವೀರಾಂಜನೇಯ ಸ್ವಾಮಿ ಸಿದ್ದರಾಮಯ್ಯ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಿಂದ 3 ಲಕ್ಷ ರೂಗಳ ನೆರವು ನೀಡಲಾಗಿದೆ. 

ಹೊಸನಗರ ಪಟ್ಟಣದ BHರಸ್ತೆಯಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಇದೀಗ 1.23 ಕೋಟಿ ರೂ ವೆಚ್ಚದಲ್ಲಿ ನೂತನ ಶಿಲಾಮಯ ದೇವಸ್ಥಾನವಾಗಿ ಪುನರ್ ನಿರ್ಮಾಣಗೊಳ್ಳುತ್ತಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮ ಅಭಿವೃದ್ಧಿ ಯೋಜನೆ ಯವರು ಮೂರು ಲಕ್ಷ ರೂಪಾಯಿಗಳ ಚೆಕ್ಕನ್ನು ಯೋಜನೆಯ ಜಿಲ್ಲಾ ಹಿರಿಯ ನಿರ್ದೇಶಕರಾದ ಜೆ ಚಂದ್ರಶೇಖರ್ ಅವರು ದೇವಸ್ಥಾನ ಸಮಿತಿಯವರಿಗೆ ಹಸ್ತಾಂತರಿಸಿದರು