ಸಾಗರದಲ್ಲಿ ಮೂವರಿಗೆ ಡಿಕ್ಕಿ ಹೊಡೆದು ಕರೆಂಟ್ ಕಂಬಕ್ಕೆ ಗುದ್ದಿದ ಶಿರಸಿ ಮೂಲದ ಕಾರು! ವಾಹನದ ಮೇಲೆ ಬಿದ್ದ ಲೈಟ್ ಕಂಬ!
Sirsi-based car hits three people in Sagar, rams into electric pole A light pole fell on the vehicle!

SHIVAMOGGA | Jan 6, 2024 | ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮೂವರಿಗೆ ಡಿಕ್ಕಿ ಹೊಡೆದಿದ್ದಷ್ಟೆ ಅಲ್ಲದೆ, ಲೈಟ್ ಕಂಬಕ್ಕೆ ಡಿಕ್ಕಿಯಾಗಿದೆ. ಪರಿಣಾಮ ತುಂಡಾದ ಲೈಟ್ ಕಂಬ ಕಾರಿನ ಮೇಲೇಯೆ ಬಿದ್ದಿದೆ.
ಸಾಗರ ತಾಲ್ಲೂಕು ಆನಂದಪುರ
ಇಲ್ಲಿನ ಹೊಸೂರು ಸಮೀಪ ಈ ಘಟನೆ ಸಂಭವಿಸಿದೆ. ಶಿರಸಿ ಕಡೆಗೆ ಹೋಗುವವರು ಕಾರಿನಲ್ಲಿ ಶಿವಮೊಗ್ಗದಿಂದ ಸಾಗರಕ್ಕೆ ತೆರಳುತ್ತಿದ್ದರು. ಈ ವೇಳೆ ಹೊಸೂರು ಸಮೀಪ ಕಾರು ಅಪ್ಸೆಟ್ ಆಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದವರು ಬಚಾವ್ ಆಗಿದ್ದಾರೆ. ಆದರೆ ಅದೇ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ.
ಮಣಿಪಾಲ್ ಆಸ್ಪತ್ರೆ
ಶಿವಮೊಗ್ಗದ ಕಡೆಯಿಂದ ಸ್ಪೀಡಾಗಿ ಬರುತ್ತಿದ್ದ ಬರುತ್ತಿದ್ದ ಕಾರು ರಸ್ತೆಯ ಬದಿಯಲ್ಲಿದ್ದ ಹೊಸೂರು ಗ್ರಾಮದ ನಿವಾಸಿಗಳ ಮೇಲೆರಿಗಿದೆ. ಪರಿಣಾಮ ಮೂವರ ಕಾಲಿಗೆ ತೀವ್ರ ಪೆಟ್ಟಾಗಿದ್ದು ಆ ಪೈಕಿ ಇಬ್ಬರನ್ನ ಮಣಿಪಾಲ್ ಆಸ್ಪತ್ರೆಗೆ ಹಾಗೂ ಓರ್ವರನ್ನ ಶಿವಮೊಗ್ಗ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಕರೆಂಟ್ ಕಂಬಕ್ಕೆ ಕಾರು ಡಿಕ್ಕಿ
ಇನ್ನೂ ಮೂವರಿಗೆ ಡಿಕ್ಕಿಯಾದ ಕಾರು ನೇರವಾಗಿ ಲೈಟ್ ಕಂಬಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಲೈಂಟ್ ಕಂಬವೇ ಮುರಿದಿದ್ದು, ಕಾರಿನಮೇಲೆಯೇ ಬಿದ್ದಿದ್ದು, ಅದೃಷ್ಟಕ್ಕೆ ಕರೆಂಟ್ ಸಂಪರ್ಕ ಕಟ್ ಆಗಿದೆ. ಹಾಗಾಗಿ ಇನ್ಯಾರಿಗೂ ಅಪಾಯ ಉಂಟಾಗಿಲ್ಲ.
ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯರು ಗಾಯಾಳುಗಳನ್ನ ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡಿದ್ದಾರೆ. ಅಷ್ಟರಲ್ಲಿ ಸ್ಥಳಕ್ಕೆ ಆನಂದಪುರ ಪೊಲೀಸ್ ಸ್ಠೇಷನ್ ಸಿಬ್ಬಂದಿ ಆಗಮಿಸಿದ್ದು, ಸ್ಥಳದಲ್ಲಿ ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.