ಡಿಸಿ ಆರ್ಡರ್! ಇನ್ಮುಂದೆ ಈ ವಾಹನಗಳಿಗೆ ಜಿಪಿಎಸ್ ಕಡ್ಡಾಯ! ವಿವರ ಇಲ್ಲಿದೆ ಓದಿ

DC order! GPS is now mandatory for these vehicles! Read the details here

ಡಿಸಿ ಆರ್ಡರ್! ಇನ್ಮುಂದೆ ಈ ವಾಹನಗಳಿಗೆ ಜಿಪಿಎಸ್ ಕಡ್ಡಾಯ! ವಿವರ ಇಲ್ಲಿದೆ ಓದಿ
DC order! GPS is now mandatory for these vehicles! Read the details here

SHIVAMOGGA  |  Jan 6, 2024  |  ಉಪಖನಿಜಗಳ ಸಾಗಾಣಿಕೆ ವಾಹನಗಳಿಗೆ ಜಿಪಿಎಸ್ ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ.ಆರ್​ ಸೆಲ್ವಮಣಿ ಸೂಚಿಸಿದ್ದಾರೆ. 



ಉಪ ಖನಿಜಗಳ ಅಕ್ರಮ ಗಣಿಗಾರಿಕೆ / ಸಾಗಾಣಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕರ್ನಾಟಕ ಪ್ರಿವೆನ್ಷನ್ ಆಫ್ ಇಲ್ಲೀಗಲ್ ಮೈನಿಂಗ್, ಟ್ರಾನ್ಸ್‍ಪೋರ್ಟ್ ಆಂಡ್ ಸ್ಟೋರೇಜ್ ಆಫ್ ಮೈನರಲ್  ರೂಲ್, 2011 ರೂಲ್ (7)ರ ಅನ್ವಯ ಕಟ್ಟಡ ಕಲ್ಲು, ಜಲ್ಲಿ, ಎಂ ಸ್ಯಾಂಡ್, ಮರಳು ಹಾಗೂ ಮಣ್ಣು ಇತ್ಯಾದಿ ಉಪ ಖನಿಜ ಸಾಗಾಣಿಕೆ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ (GPS) ಉಪಕರಣಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿಗಳು/ ಜಿಲ್ಲಾ ಟಾಸ್ಕ್ ಪೋರ್ಸ್ (ಗಣಿ) ಸಮಿತಿ ಅಧ್ಯಕ್ಷರು ಆದ ಡಾ. ಆರ್. ಸೆಲ್ವಮಣಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

READ :  ಹೆಂಡತಿಯೊಬ್ಬಳು ಸಂಘದಲ್ಲಿ ಇದ್ದರೇ?  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಚಾರಗೋಷ್ಟಿಯಲ್ಲಿ ಏನು ಹೇಳಿದ್ರು ಓದಿ!



ಶಿವಮೊಗ್ಗ ಜಿಲ್ಲೆಯಲ್ಲಿ ಈವರೆಗೆ ಒಟ್ಟು 583 ಖನಿಜ ಸಾಗಾಣಿಕೆ ವಾಹನಗಳಿಗೆ ಜಿಪಿಎಸ್ ಉಪಕರಣಗಳನ್ನು ಅಳವಡಿಸಲಾಗಿದ್ದು, ಜಿಪಿಎಸ್ ಉಪಕರಣವನ್ನು ಅಳವಡಿಸಿಕೊಳ್ಳದ/ ಜಿಪಿಎಸ್ ಉಪಕರಣವನ್ನು ಅಳವಡಿಕೆ ಮಾಡಿಕೊಂಡು ಒಂದು ಪರವಾನಿಗೆಯಿಂದ ಒಂದಕ್ಕಿಂತ ಹೆಚ್ಚು ಬಾರಿ ಮರಳು ಸಾಗಾಣಿಕೆ ಮಾಡಿರುವುದು, ವಾಹನ ಸಾಮರ್ಥ್ಯಕ್ಕಿಂತ  ಕಡಿಮೆ ಪ್ರಮಾಣವನ್ನು ಪರವಾನಿಗೆಯಲ್ಲಿ ನಮೂದಿಸುವುದು,

 ಜಿ.ಪಿ.ಎಸ್. ಅಳವಡಿಸಿಕೊಂಡು ಸೇವಾದಾರ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿರಿಸಿಕೊಳ್ಳದ, ಪರವಾನಿಗೆ ಪ್ರಮಾಣಕ್ಕಿಂತ ಹೆಚ್ಚಿನ ಮರಳನ್ನು ಸಾಗಾಣಿಕೆ ಮಾಡುವಂತಹ ವಾಹನಗಳ ಮೇಲೆ ಕ.ಉ.ಖ.ರಿಯಾಯಿತಿ ನಿಯಮಾಳಿಯನ್ವಯ ಅಗತ್ಯ ಕ್ರಮಗಳನ್ನು ಕೈಗೊಂಡು ನಿಯಮಾನುಸಾರ ದಂಡ/ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.