ಗಣಪತಿ ಕೂರಿಸಲು ಕಂಡೀಷನ್​/ ಪರ್ಮಿಶನ್​ ಸುದ್ದಿ ಬಗ್ಗೆ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್​ ಮಹತ್ವದ ಸ್ಪಷ್ಟನೆ!

SP Mithun Kumar has clarified the issue of false news circulating about Ganapati sitting in a public place in Shimoga.ಶಿವಮೊಗ್ಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಣಪತಿ ಕೂರಿಸುವ ವಿಚಾರದಲ್ಲಿ ಸುಳ್ಳು ಸುದ್ದಿ ಹರಿದಾಡ್ತಿರುವ ಸಂಬಂಧ ಎಸ್​ಪಿ ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ

ಗಣಪತಿ ಕೂರಿಸಲು ಕಂಡೀಷನ್​/ ಪರ್ಮಿಶನ್​ ಸುದ್ದಿ ಬಗ್ಗೆ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್​ ಮಹತ್ವದ ಸ್ಪಷ್ಟನೆ!

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS

ಶಿವಮೊಗ್ಗ ಪೊಲೀಸ್ ಇಲಾಖೆ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಆಚರಣೆಯು ಶಾಂತಿಯುತವಾಗಿ ನಡೆಯಲಿ ಎಂಬ ಕಾರಣಕ್ಕೆ ಈಗಾಗಲೇ ಶಾಂತಿಸಭೆಗಳನ್ನ ನಡೆಸ್ತಿದೆ. ರೌಡಿಶೀಟರ್ಸ್​ಗಳಿಗೆ ವಾರ್ನ್ ಮಾಡುತ್ತಿದೆ. ಏರಿಯಾ ಡಾಮಿನೇಷನ್​ ಗಸ್ತನ್ನು ಇನ್ನಷ್ಟು ಗಂಭೀರವಾಗಿ ನಡೆಸಲಾಗುತ್ತಿದೆ. ರಾತ್ರಿ ವಹಿವಾಟುಗಳನ್ನು ಕಂಪ್ಲೀಟ್ ಆಗಿ ಲಾಕ್ ಮಾಡಲಾಗುತ್ತಿದೆ. 

ಇದರ ನಡುವೆ ಕೆಲವರು ಶಿವಮೊಗ್ಗ ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಮೂರ್ತಿ ಸ್ಥಾಪನೆಗೆ ಅನುಮತಿ ನೀಡುತ್ತಿಲ್ಲ. ಕೇವಲ ದೇವಸ್ಥಾನಗಳಲ್ಲಿ ಸ್ಥಾಪಿಸಬೇಕು ಎಂಬಂತಹ ವರದಿಗಳು ಪ್ರಸಾರವಾಗುತ್ತಿವೆಯಂತೆ. ಈ ಬಗ್ಗೆ ಮಾಹಿತಿ ಪಡೆದ ಎಸ್​ಪಿ ಮಿಥುನ್ ಕುಮಾರ್ ತತ್ಸಂಬಂಧ ಸ್ಪಷ್ಟನೆಯೊಂದನ್ನ ಪೊಲೀಸ್ ಹಾಗೂ ಮಾಧ್ಯಮಗಳ ಅಧಿಕೃತ ವಾಟ್ಸ್ಯಾಪ್​ ಗ್ರೂಪ್​ನಲ್ಲಿ ರವಾನಿಸಿದ್ದಾರೆ. 

ಪೊಲೀಸ್ ಇಲಾಖೆಯಿಂದ ಒಂದು ಸ್ಪಷ್ಟನೆ..

1. ಗಣಪತಿ ಮೂರ್ತಿಯನ್ನು ದೇವಸ್ಥಾನಗಳಲ್ಲಿ ಮಾತ್ರ ಪ್ರತಿಷ್ಠಾಪಿಸಬೇಕು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಮೂರ್ತಿಗಳನ್ನು ಸ್ಥಾಪಿಸಬಾರದು ಎಂದು ಪೊಲೀಸ್ ಇಲಾಖೆ ನಿರ್ಬಂಧ ವಿಧಿಸುತ್ತಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡುತ್ತಿವೆ. ಅದು ತಪ್ಪು, ಪ್ರತಿಷ್ಠಾಪನೆಯ ಸ್ಥಳಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿಲ್ಲ.. ಕಳೆದ ವರ್ಷದವರೆಗೆ ಅನುಸರಿಸಿದ ಮಾದರಿಯನ್ನೆ ಈ ವರ್ಷವೂ  ನಿರ್ವಹಿಸಲಾಗುತ್ತಿದೆ. 

ಕಳೆದ ವರ್ಷ ಎಲ್ಲೆಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತೋ ಅದನ್ನು ಮುಂದುವರಿಸಲು ಸಂಘಟಕರು ಬಯಸಿದಲ್ಲಿ ಮುಂದುವರಿಸಲಾಗುವುದು.. ಪೊಲೀಸ್ ಇಲಾಖೆಯಿಂದ ಯಾವುದೇ ನಿರ್ಬಂಧವಿಲ್ಲ..

2. ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ ಮಾಡುವ ಸ್ಥಳಗಳಲ್ಲಿ ಕೇಸರಿ ಧ್ವಜ ಮತ್ತು ಬಂಟಿಂಗ್ಸ್ ಹಾಕಲು ನಿರ್ಬಂಧಗಳಿವೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಪೊಲೀಸ್ ಇಲಾಖೆಯಿಂದ ಅಂತಹ ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿಲ್ಲ.

3. ಮಂಗಳ ವಾದ್ಯ ನುಡಿಸದಂತೆ ಪೊಲೀಸ್ ಇಲಾಖೆ ನಿರ್ಬಂಧ ವಿಧಿಸಿದೆ ಎಂದು ಕೆಲವು ಮಾಧ್ಯಮಗಳು ಹೇಳಿಕೊಂಡಿವೆ.. ಇದು ಕೂಡ ಸುಳ್ಳು.. ಪೊಲೀಸ್ ಇಲಾಖೆಯಿಂದ ಅಂತಹ ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿಲ್ಲ.

4. ಎಲ್ಲಾ ಪ್ರಮುಖ ನಾಯಕರು ಮತ್ತು ಸಮಿತಿಯ ಮುಖಂಡರು, ಹಿಂದೂ ಮುಖಂಡರು ಮತ್ತು ಮುಸ್ಲಿಂ ಮುಖಂಡರನ್ನು ಶಾಂತಿ ಸಮಿತಿ ಸಭೆಗಳಿಗೆ ಆಹ್ವಾನಿಸಲಾಗಿದೆ.

ಯಾವುದೇ ಸುಳ್ಳು ಮಾಹಿತಿಯನ್ನು ಹರಡಬಾರದು.. ಯಾವುದೇ ಸ್ಪಷ್ಟೀಕರಣಗಳನ್ನು ಮಾಡಬೇಕಾದರೆ, ದಯವಿಟ್ಟು ಆಯಾ ವ್ಯಾಪ್ತಿಯ ಠಾಣೆಗಳು, ಇನ್ಸ್‌ಪೆಕ್ಟರ್‌ಗಳು ಅಥವಾ ಡಿವೈಎಸ್ಪಿ ಅಥವಾ ನನ್ನನ್ನು ವೈಯಕ್ತಿಕವಾಗಿ ಸಂಪರ್ಕಿಸಿ ಎಂದು ಎಸ್​ಪಿ ಮಿಥುನ್ ಕುಮಾರ್ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. 


ಇನ್ನಷ್ಟು ಸುದ್ದಿಗಳು