SHIVAMOGGA NEWS / ONLINE / Malenadu today/ Nov 22, 2023 NEWS KANNADA
Shivamogga| Malnenadutoday.com | ಶಿವಮೊಗ್ಗ ರೈಲ್ವೆ ನಿಲ್ದಾಣ (shivamogga railway station) ಆಗಾಗ ತನ್ನದೆ ವಿಶೇಷ ಕಾರಣಕ್ಕೆ ಸುದ್ದಿಯಾಗುತ್ತಿರುತ್ತದೆ. ಇತ್ತೀಚೆಗೆ ರೈಲ್ವೆ ನಿಲ್ದಾಣದಲ್ಲಿ ಅನುಮಾನಸ್ಪದ ಬಾಕ್ಸ್ ಪತ್ತೆಯಾಗಿತ್ತು. ಅದರಲ್ಲಿ ಕೊನೆಗೆ ಉಪ್ಪು ಸಿಕ್ಕಿತ್ತು.
ಇದೀಗ ರೈಲ್ವೆ ನಿಲ್ದಾಣ ಮತ್ತೆ ಸುದ್ದಿಯಾಗಿದ್ದು ಕಳೆದ 30 ದಿನದಲ್ಲಿ ಶಿವಮೊಗ್ಗದ ರೈಲ್ವೆ ಸ್ಟೇಷನ್ನಲ್ಲಿ ಮೂರು ಮಕ್ಕಳು ಪತ್ತೆಯಾಗಿದ್ದಾರೆ. ರೈಲ್ವೆ ಪೊಲೀಸ್ ಇಲಾಖೆ #OperationNanheFariste ಅಭಿಯಾನದ ಅಂಗವಾಗಿ, ಸ್ಟೇಷನ್ನಲ್ಲಿ ಅನುಮಾನಸ್ಪದವಾಗಿ ಓಡಾಡುವ ಮಕ್ಕಳನ್ನು ವಿಚಾರಿಸಲಾಗುತ್ತಿದೆ. ಅವರು ಯಾವುದೋ ಕಾರಣಕ್ಕೆ ಮನೆಬಿಟ್ಟು ಬಂದಿರುತ್ತಾರೆ! ಅಥವಾ ಅವರನ್ನ ಇನ್ಯಾರೋ ಅವರ ದುರುದ್ದೇಶಕ್ಕೆ ಬಳಸಿಕೊಳ್ಳುವ ಸಲುವಾಗಿ ಕರೆದೊಯ್ಯುತ್ತಿರುತ್ತಾರೆ! ಇಂತಹ ಪ್ರಕರಣಗಳ ಮೇಲೆ ಕಣ್ಣಿರಿಟ್ಟುವ ರೈಲ್ವೆ ಪೊಲೀಸರು ಕಳೆದೊಂದು ವಾರದ ಅವಧಿಯಲ್ಲಿ ಇಬ್ಬರು ಮಕ್ಕಳನ್ನ ರಕ್ಷಣೆ ಮಾಡಿದ್ದಾರೆ.
READ :ಬನಶಂಕರಿ ದೇವಸ್ಥಾನದ ಬಳಿ ಕಾಣಿಸಿಕೊಂಡ ಮೂರು ಮೂರು ಚಿರತೆಗಳು!
ಮೊದಲ ಪ್ರಕರಣ!
ಕಳೆದ 21 ರಂದು SMET Railway station ದಲ್ಲಿ 14 ವರ್ಷದ ಬಾಲಕಿಯನ್ನು ರಕ್ಷಣೆ ಮಾಡಿದ್ದರು. ಆಕೆಯ ಪೂರ್ವಪರವನ್ನು ವಿಚಾರಿಸಿ ಸುರಭಿ ಉಜ್ವಲ ಕೇಂದ್ರಕ್ಕೆ ಆಕೆಯನ್ನು ರವಾನಿಸಿದ್ದರು.
ಎರಡನೇ ಪ್ರಕರಣ
ಇನ್ನೂ ನಿನ್ನೆ RPF/Shivamogga (Railway Protection Force (RPF) S.W.Railway) ಪೊಲೀಸರು 16 ವರ್ಷದ ಬಾಲಕನನ್ನು ರಕ್ಷಣೆ ಮಾಡಿದ್ದು, ಆತನನ್ನು ಮಕ್ಕಳ ಕಲ್ಯಾಣ ಕೇಂದ್ರದ ಜವಾಬ್ದಾರಿಗೆ ಒಪ್ಪಿಸಿ ಪೊಲೀಸರು ಮುಂದಿನ ಕ್ರಮಕ್ಕೆ ಅನುವು ಮಾಡಿಕೊಟ್ಟಿದ್ದಾರೆ
