ಬನಶಂಕರಿ ದೇವಸ್ಥಾನದ ಬಳಿ ಕಾಣಿಸಿಕೊಂಡ ಮೂರು ಮೂರು ಚಿರತೆಗಳು!

SHIVAMOGGA NEWS / ONLINE / Malenadu today/ Nov 22, 2023 NEWS KANNADA

Shivamogga|  thirthahalli | Malnenadutoday.com | ಈಗೀಗ ಚಿರತೆ ಅನ್ನುವುದು ಬೆಕ್ಕಿನ ರೀತಿಯಂತಾಗಿದೆ ಎಲ್ಲಂದರಲ್ಲಿ ಓಡಾಡುವುದು ಕಂಡುಬರುತ್ತಲೇ ಇದೆ. ಇದಕ್ಕೆ ಪೂರಕವಾಗಿ ಇದೀಗ ತೀರ್ಥಹಳ್ಳಿ ತಾಲ್ಲೂಕು ಕಮ್ಮರಡಿ ಬಳಿಯಲ್ಲಿ ಚಿರತೆ ಕಾಣಿಸಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. 

ಇಲ್ಲಿನ  ಕೆಸಲೂರು ಎಂಬಲ್ಲಿ ಒಂದಲ್ಲ ಎರಡಲ್ಲ ಮೂರು ಚಿರತೆಗಳು ಕಾಣಿಸಿದೆ. ಈ ಸಂಬಂಧ ಸ್ಥಳೀಯರು ತೆಗೆದ ಪೋಟೋವೊಂದು ಹೊರಬಿದ್ದಿದೆ. ಇಲ್ಲಿನ ಬನಶಂಕರಿ ದೇವಾಲಯದ ಬಳಿ ಮೂರು ಚಿರತೆ ಮರಿ ಪತ್ತೆಯಾಗಿದೆ. 

ಲಭ್ಯ ಮಾಹಿತಿ ಪ್ರಕಾರ, ಮೂರು ಚಿರತೆಗಳು ಇನ್ನೂ ಮರಿಯಾಗಿದ್ದು ಇದರ ತಾಯಿ ಕೂಡ ಇಲ್ಲಿಯೆ ಓಡಾಡುತ್ತಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.    

READ: ತೀರ್ಥಹಳ್ಳಿ ತಾಲ್ಲೂಕಿನ ವ್ಯಕ್ತಿ ವಿರುದ್ಧ ಸೈಬರ್ ಟಿಪ್​ ಲೈನ್​ ಕೇಸ್! ಅಶ್ಲೀಲ ವಿಡಿಯೋ ಅಪಾಯಕಾರಿ!

ಕಾಡು ಪ್ರಾಣಿ ಎಂದರೆ ಸಹಜವಾಗಿಯೇ ಭಯವಾಗುತ್ತದೆ. ಅಂತ್ರದಲ್ಲಿ ಇಲ್ಲಿ ಮೂರು ಮೂರು ಚಿರತೆಗಳು ಕಾಣಿಸಿಕೊಂಡಿರುವುದು ಆತಂಕ ತುಸು ಹೆಚ್ಚೆ ಮೂಡಿಸುತ್ತಿದೆ. ಸದ್ಯ ಜನರು ವಾಹನಗಳಲ್ಲಿಯೇ ಈ ಭಾಗದಲ್ಲಿ ಓಡಾಡುತ್ತಿದ್ದು ನಡೆದುಕೊಂಡು ಹೋಗುವುದಕ್ಕೆ ಭಯ ಪಡುತ್ತಿದ್ದಾರೆ. 

ಇತ್ತೀಚೆಗೆ ಮೀಗೇರಿಯಲ್ಲಿ ನಾಯಿಯೊಂದನ್ನ ಚಿರತೆ ಕಚ್ಚಿಕೊಂಡು ಹೋಗಿತ್ತು ಎನ್ನುವ ಸ್ಥಳೀಯರು ಚಿರತೆಯನ್ನ ಬೇರೆಕಡೆಗಾದರೂ ಬೆರೆಸಿ ಎಂದು ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.  .


Leave a Comment