ಕ್ರೈಸ್ತ ಸನ್ಯಾಸಿನಿಯಾಗಲು ಕಿಡ್ನ್ಯಾಪ್ ಕಥೆ ಹಣೆದ ಯುವತಿಯನ್ನ ಶಿವಮೊಗ್ಗ ಪೊಲೀಸರು ಪತ್ತೆ ಮಾಡಿದ್ದು ಹೇಗೆ ಗೊತ್ತಾ?

Do you know how the Shivamogga police traced a young woman who had created the story of the kidnapping herself to become a nun?

ಕ್ರೈಸ್ತ ಸನ್ಯಾಸಿನಿಯಾಗಲು ಕಿಡ್ನ್ಯಾಪ್ ಕಥೆ ಹಣೆದ ಯುವತಿಯನ್ನ ಶಿವಮೊಗ್ಗ ಪೊಲೀಸರು ಪತ್ತೆ ಮಾಡಿದ್ದು ಹೇಗೆ ಗೊತ್ತಾ?

KARNATAKA NEWS/ ONLINE / Malenadu today/ May 16, 2023 GOOGLE NEWS / SHIVAMOGGA NEWS

 ಶಿವಮೊಗ್ಗ/ ಇಲ್ಲಿನ ಜಯನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಯುವತಿಯೊಬ್ಬಳನ್ನ ಕಿಡ್ನ್ಯಾಪ್ ಮಾಡಿರುವ ಬಗ್ಗೆ ವರದಿಯಾಗಿತ್ತು. ಆದರೆ ಈ ಪ್ರಕರಣ ಬೇರೆಯದ್ದ ಟ್ವಿಸ್ಟ್ ಪಡೆದುಕೊಂಡಿದೆ. ಅಂದುಕೊಂಡ ಹಾಗೆ ರಂಜಿತಾ. ಬಿ, 22 ವರ್ಷ ಎಂಬಾಕೆ ಕಿಡ್ನ್ಯಾಪ್ ಆಗಿರಲಿಲ್ಲ. ಬದಲಾಗಿ ಅಲ್ಲಿ ಬೇರೆಯದ್ದ ಸ್ಟೋರಿಯೊಂದನ್ನು ಆಕೆಯೇ ಚಿತ್ರಕಥೆ ಬರೆದು ನಿರ್ದೇಶಿಸಿದ್ದಳು. ಆದರೆ ಪೊಲೀಸರು, ಇಡೀ ಕಥೆಯ ಕ್ಲೈಮ್ಯಾಕ್ಸ್​ನ್ನ ಬೇರೆ ಮಾಡಿದ್ದಾರೆ. 

ಮೊದಲು ನಡೆದ ಕಥೆ 

ಶಿವಮೊಗ್ಗದಿಂದ ಮೇ 14 ರಂದು ಸಂಜೆ 05 ಗಂಟೆಯಿಂದ ರಾತ್ರಿ 09:30 ರ ಮಧ್ಯಾವಧಿಯಲ್ಲಿ ಯುವತಿಯನ್ನ ಹಣಕ್ಕಾಗಿ ಯಾರೋ ದುಷ್ಕರ್ಮಿಗಳು ಅಪಹರಣ ಮಾಡಿದ್ದಾರೆ ಎಂಬ ಸುದ್ದಿ ಪ್ರಕಟಣೆ ರೂಪದಲ್ಲಿ ಹೊರಬಿದ್ದಿತ್ತು.  ಅಪಹರಣಕ್ಕೊಳಗಾದ ರಂಜಿತಾ.ಬಿ  ಸುಮಾರು 5.1 ಅಡಿ ಎತ್ತರ, ಬಿಳಿ ಮೈಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿದ್ದು, ಕಾಣೆಯಾದ ವೇಳೆ ನೇವಿ ಬ್ಲೂ ಬಣ್ಣದ ಚೂಡಿದಾರ್  ಧರಿಸಿದ್ದಾಳೆ. ಈಕೆಯ ಸುಳಿವು ನೀಡಿ ಎಂದು ಪೊಲೀಸರು ಮನವಿ ಮಾಡಿದ್ದರು.  

ಬಸ್​ನಲ್ಲಿಯೇ ಹೆರಿಗೆ ಮಾಡಿಸಿದ ಲೇಡಿ ಕಂಡಕ್ಟರ್! ಸೈ ಎನ್ನುತ್ತಿದೆ ಕರ್ನಾಟಕ

ಆನಂತರ ನಡೆದಿದ್ದು! (news today)

ರಂಜಿತಾ ಕಿಡ್ನ್ಯಾಪ್​ ಕಥೆಯನ್ನು ಭೇದಿಸಲು ಹೊರಟಿದ್ದ ಪೊಲೀಸರಿಗೆ, ಆಕೆಯ ಪೋಷಕರು ಹೇಳಿದ್ದ ಅಂಶಗಳಲ್ಲಿಸಂಶಯಗಳು ಹುಟ್ಟಿಕೊಂಡಿವೆ. ಅಲ್ದೆ ಯುವತಿ ಕಿಡ್ನ್ಯಾಪ್ ಆಗಿದ್ಧಾಳೆ, 20 ಲಕ್ಷ ರೂಪಾಯಿ ಕೊಡಬೇಕು ಎಂಬ ಮೆಸೇಜ್​ ವೊಂದು ಯುವತಿಯ ಮೊಬೈಲ್​ನಿಂದಲೇ ಆಕೆಯ ಪೋಷಕರಿಗೆ ಬಂದಿತ್ತು. ಇದು ಪೊಲೀಸರಿಗೆ ಅನುಮಾನ ಮೂಡಿಸಿತ್ತು. 

 ರೌಡಿ ನಿಗ್ರಹ ದಳದ ಸಿಬ್ಬಂದಿ ಟೀಂ ರೆಡಿ

ಯುವತಿಯ ಪೋಷಕರಿಗೆ ಬಂದ ಮೇಸೆಜ್ ಹಾಗೂ ಪೋಷಕರು ನೀಡಿದ ವಿವರದಡಿಯಲ್ಲಿ ಶಿವಮೊಗ್ಗ ಪೊಲೀಸರು ಕಲಂ 365, 364 (ಎ) ಐಪಿಸಿ ಅಡಿಯಲ್ಲಿ ಕೇಸ್ ದಾಖಲಿಸಿದ್ದರು. ಅಲ್ಲದೆ, ಪ್ರಕರಣದ ಕ್ಷಿಪ್ರ ತನಿಖೆ ನಡೆಸಲು, ಜಯನಗರ ಪೊಲೀಸ್ ಠಾಣೆಯ ಮತ್ತು ರೌಡಿ ನಿಗ್ರಹ ದಳದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವನ್ನು ಎಸ್​ ಪಿ ಮಿಥುನ್​ ಕುಮಾರ್ ಸಿದ್ಧಪಡಿಸಿದ್ರು. 

ತನಿಖೆ ವೇಳೆ ಸಿಕ್ತು ಮೊದಲ ಕ್ಲೂ

ಪ್ರಕರಣದ ತನಿಖೆಯ ಸಮಯದಲ್ಲಿ ಯುವತಿಯು ತಾನೇ ಖುದ್ದಾಗಿ ಎ.ಟಿ.ಎಂ ನಿಂದ ರೂ 5,000/- ಹಣವನ್ನು ವಿಥ್ ಡ್ರಾ ಮಾಡಿಕೊಂಡು ಹೋಗಿದ್ದು ಪೊಲೀಸರಿಗೆ ಗೊತ್ತಾಗಿದೆ. ಅಲ್ಲದೆ ಯುವತಿ ಮೊಬೈಲ್​ನ್ನ ನಿರಂತರವಾಗಿ ಟ್ರೇಸ್​ ಮಾಡಿದ್ದಾರೆ. ಆಗ ಮೊಬೈಲ್​ ಹುಬ್ಬಳ್ಳಿಯಲ್ಲಿ ಟ್ರೇಸ್ ಆಗಿರುವುದು ಪೊಲೀಸರಿಗೆ ಗೊತ್ತಾಗಿದೆ. ಅಲ್ಲಿಯ ಪೊಲೀಸರ ಸಹಾಯವನ್ನು ಶಿವಮೊಗ್ಗ ಪೊಲೀಸರು ಪಡೆದುಕೊಂಡಿದ್ದಾರೆ. 

ಹುಬ್ಬಳ್ಳಿಯಲ್ಲಿ ಪತ್ತೆಯಾದ ಯುವತಿ

ಅಂತಿಮವಾಗಿ ಮೊಬೈಲ್​ ಟ್ರೇಸಿಂಗ್​ನ ಬೆನ್ನು ಹತ್ತಿದ ಪೊಲೀಸರು ಯುವತಿಯನ್ನ  ಹುಬ್ಬಳ್ಳಿಯ ವಿ.ಆರ್.ಎಲ್ ಬಸ್ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಶಿವಮೊಗ್ಗಕ್ಕೆ ಕರೆತಂದಿದ್ದರು. ಈ ಸಂದರ್ಭದಲ್ಲಿ ಯುವತಿಯನ್ನು ವಿಚಾರಣೆಗೊಳಪಡಿಸಿದಾಗ ಆಕೆ ಬೇರೆಯದ್ದ ಕಥೆಯನ್ನ ಹೇಳಿದ್ಧಾಳೆ. 

ಶಿವಮೊಗ್ಗ ಜಿಲ್ಲೆಗೆ ಯಾರು ಮಿನಿಸ್ಟರ್​? ಪೈಪೋಟಿಯಲ್ಲಿ ಯಾರಿದ್ದಾರೆ? ಏನಿದೆ ಕುತೂಹಲ?

ಕ್ರೈಸ್ತ ಸನ್ಯಾಸಿನಿ ಆಗುವ ಆಸೆ 

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಯುವತಿ ಶಿವಮೊಗ್ಗದಲ್ಲಿ ಓದುತ್ತಿದ್ದಳು. ಈ ಮಧ್ಯೆ ಆಕೆ ಕ್ರಿಶ್ಚಿಯನ್​ ಸ್ಕೂಲ್​ನಲ್ಲಿ ಓದಿದ್ದರಿಂದ ಆ ಧರ್ಮದ ಪ್ರಭಾವಕ್ಕೆ ಒಳಗಾಗಿದ್ದಳಂತೆ. ಕ್ರಿಶ್ಚಿಯನ್ ಸನ್ಯಾಸಿನಿಯರ ಹಾಗೆ, ಸಮಾಜಕ್ಕೆ ಕೈಲಾದುದನ್ನ ನೀಡಬೇಕು ಎಂಬ ಆಸೆಯನ್ನ ಹೊತ್ತಿದ್ದ ಯುವತಿ, ಅಂತಿಮವಾಗಿ ಶಿವಮೊಗ್ಗದ ಕಾಲೇಜೋಂದರಲ್ಲಿ ಫಿಸಿಯೋ ಥೆರಪಿ ಕೋರ್ಸ್​ ಸೇರಿದ್ದಳು. ಈ ಸಂದರ್ಭದಲ್ಲಿ ಆಕೆಗೆ ಕ್ರಿಶ್ಚಿಯನ್​ ವಿದ್ಯಾರ್ಥಿನಿಯರ ಗೆಳತನವಾಗಿದೆ. ಅವರಿಂದ ಮುಂಬೈನ ಕ್ಯಾಥೋಲಿಕ್ ಚರ್ಚೆಗೆ ಹೋಗಿ ಕ್ರಿಶ್ಚಿಯನ್​ ಸನ್ಯಾಸಿನಿಯಾಗಬಹುದು ಎಂದು ತಿಳಿದಿದ್ದಾಳೆ. 

14 ಕ್ಕೆ ಮುಂಬೈಗೆ ಹೊರಟ ಯುವತಿ

ಅದರಂತೆ ಕಳೆದ 14 ರಂದು ಮುಂಬೈಗೆ ಹೊರಟಿದ್ಧಾಳೆ. ಡೈರೆಕ್ಟ್ ಟಿಕೆಟ್ ಬುಕ್ ಮಾಡಲು ಸಾಧ್ಯವಾಗದೇ, ಹುಬ್ಬಳ್ಳಿಯವರೆಗೂ ತಲುಪಿದ್ದಾಳೆ. ಆದರೆ ಕೈಲಿದ್ದ ಹಣ ಸಾಲದಿದ್ದಾಗ, ಮುಂಬೈನಲ್ಲಿ ಉಳಿದುಕೊಳ್ಳಲು ಬೇಕಿರುವ ಹಣಕ್ಕಾಗಿ ತಾನೇ ತನ್ನ ತಂದೆ ತಾಯಿಗೆ 20 ಲಕ್ಷ ರೂಪಾಯಿ ಹಣ ನೀಡಬೇಕು ಎಂದು ಅಪಹರಣದ ಕಥೆ ಬರೆದು ಮೆಸೇಜ್ ಮಾಡಿದ್ದಾಳೆ. ಸತ್ಯ ಹೇಳಿದರೇ ತಂದೆ ತಾಯಿ ತನ್ನ ದಾರಿ ಅಡ್ಡ ಬರುತ್ತಾರೆ ಎಂದು ಈ ರೀತಿ ಮಾಡಿದ್ದಾಳೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. 

ಯುವತಿಗೆ ಸನ್ಯಾಸಿನಿಯಾಗುವ ಆಸೆಗೆ ಪೊಲೀಸರಿಗೆ ಪರದಾಟ

ಆ ಕಡೆ ಯುವತಿ ತನ್ನದೇ ಬದುಕಿನ ಹಾದಿಗೆ ಅಪಹರಣದ ಕಥೆಯನ್ನು ಹೆಣೆಯುತ್ತಿದ್ದರೇ ಈ ಕಡೆ ಪೊಲೀಸರಿಗೆ ಕಿಡ್ನ್ಯಾಪ್ ಪ್ರಕರಣವನ್ನು ಭೇದಿಸುವ ಪರದಾಟ ಎದುರಾಗಿತ್ತು. ಆದರೆ ಪ್ರಕರಣವನ್ನು ತದ್ವಿರುದ್ಧದ ಸಂಶಯದಿಂದಲೇ ನೋಡಿದ ಪೊಲೀಸರಿಗೆ ಇಡೀ ಕೇಸನ್ನು ಸುಲಭವಾಗಿ ಬಿಡಿಸಿದ್ಧಾರೆ. 

ಶಬರಿಮಲೆಯಲ್ಲಿ ಸಂಕ್ರಮಣ ಪೂಜೆ! ಮೇ 19 ರವರೆಗೂ ದೇಗುಲ ಭಕ್ತರಿಗಾಗಿ ಓಪನ್​

ಬೆಂಗಳೂರು/  ಶಬರಿಮಲೆ ಸನ್ನಿಧಾನದಲ್ಲಿ ಸಂಕ್ರಮಣ ಪೂಜೆಗಾಗಿ ಬಾಗಿಲು ತೆರೆಯಲಾಗಿದೆ. ಭಾನುವಾರ ಸಂಜೆ ಸನ್ನಿಧಾನದಲ್ಲಿ ವಿ.ಜಯರಾಮನ್ ನಂಬೂದಿರಿ ಬಾಗಿಲು ತೆರೆದು ದೀಪ ಬೆಳಗಿಸಿದ್ದಾರೆ. ಇದೇ ವೇಳೆ 18ನೇ ಮೆಟ್ಟಿಲಿನ ಎದುರು ಮಾರ್ಗದಲ್ಲಿ ದೀಪಗಳನ್ನು ಬೆಳಗಿಸಲಾಗಿದೆ.  ಅಯ್ಯಪ್ಪ ಭಕ್ತರಿಗೆ ಪ್ರವೇಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಸೋಮವಾರ ಬೆಳಗ್ಗೆ ನಿರ್ಮಾಲ್ಯ ದರ್ಶನ, ನಿತ್ಯ ಅಭಿಷೇಕ, ಗಣಪತಿ ಹೋಮ ನಡೆಯಿತು. ವರ್ಚುವಲ್ ಕ್ಯೂ ಮೂಲಕ ಬುಕ್ಕಿಂಗ್ ಮಾಡುವ ಮೂಲಕ ದರ್ಶನ ಪಡೆಯಲು ಅವಕಾಶವಿದೆ. ನಿಲಕ್ಕಲ್‌ನಲ್ಲಿ ಸ್ಪಾಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಸಹ ಸಿದ್ಧಪಡಿಸಲಾಗಿದೆ. ಐದು ದಿನಗಳ ಪೂಜೆ ಮುಗಿಸಿ ನ.19ರಂದು ರಾತ್ರಿ 10 ಗಂಟೆಗೆ ಬಾಗಿಲು ಮುಚ್ಚಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. 




ಆಟೋ ಚಾಲಕ ಬೆಳಗ್ಗೆ ಹೇಳಿದ್ದ ಹಲ್ಲೆ ಕಥೆಗೆ ಸಂಜೆಯೊಳಗೆ ಟ್ವಿಸ್ಟ್! ಏನೆಲ್ಲಾ ಆಯ್ತು ಗೊತ್ತಾ?

ಶಿವಮೊಗ್ಗ/ ನಿನ್ನೆ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್   ಕಚೇರಿ ಬಳಿ ಆಟೋದಲ್ಲಿ ಬಂದಿದ್ದ ವ್ಯಕ್ತಿಯೊಬ್ಬ , ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಈಶ್ವರಪ್ಪನವರ ಬಳಿ ತನ್ನ ಆಟೋ ಜಖಂ ಮಾಡಿದ್ದು ಹಾಗೂ ತನಗೆ ಹಲ್ಲೆ ಮಾಡಿದ್ದರ ಬಗ್ಗೆ ಅಳಲು ತೋಡಿಕೊಂಡಿದ್ದ. 

ಬಿಜೆಪಿಗೆ ಏಕೆ ವೋಟು ಹಾಕಿದೆ ಎಂದು ಹಲ್ಲೆ ಮಾಡಿದ್ದಾಗಿ ಆತ ತಿಳಿಸಿದ್ದ. ಇನ್ನೂ ಈ ವೇಳೆ ಆಟೋ ಜಖಂ ಆಗಿದ್ಯಲ್ಲಾ ಅದಕ್ಕೆ ಇನ್ಸುರೆನ್ಸ್​ ಬರುತ್ತಾ ಎಂದು ಪ್ರಶ್ನಿಸಿದ ಕೆ.ಎಸ್​.ಈಶ್ವರಪ್ಪ ಆತನಿಗೆ ಸ್ವಲ್ಪ ದುಡ್ಡುಕೊಟ್ಟು ಇದನ್ನ ಇಟ್ಕೊ, ಆಟೋ ರೀಪೇರಿ ಮಾಡಿಸಿಕೋ ಎಂದಿದ್ದರು. 

ಅಲ್ಲದೆ ಘಟನೆ ಬಗ್ಗೆ ಎಸ್​ಪಿ ಮಿಥುನ್ ಕುಮಾರ್​ರವರಿಗೆ ಕರೆ ಮಾಡಿ ತಿಳಿಸಿದ ಈಶ್ವರಪ್ಪ, ಈತನ ಬಗ್ಗೆ ವಿಚಾರಿಸಿ ಎಂದಾಗ, ಎಸ್​ಪಿಯುವರು ತಮ್ಮ ಕಚೇರಿಗೆ ಆತನನ್ನು ಕಳುಹಿಸುವಂತೆ ತಿಳಿಸಿದ್ದರು.  

ಮೊದಲು ಆರೋಪ ನಂತರ ಸಂಧಾನ

ಈ ಮಧ್ಯೆ ಈ ಘಟನೆ ರಾಜಕೀಯವಾಗಿ ವಿವಾಧ ಪಡೆದುಕೊಳ್ಳಲು ಆರಂಭಿಸಿತು. ಅತ್ತ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಕಾಂಗ್ರೆಸ್​ ಮುಖಂಡರು ಮುಂದಾದರು. ಇನ್ನೊಂದೆಡೆ  'ಬಿಜೆಪಿಗೆ ಮತ ಹಾಕಿದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎಂದಿದ್ದ ಆಟೋ ಚಾಲಕ, ಹಲ್ಲೆ ಮಾಡಿದ ಆರೋಪಿಗಳ ಜೊತೆ ಸಂಧಾನ ಮಾಡಿಕೊಂಡಿದ್ದ 

ಕೋಮುಬಣ್ಣಕ್ಕೆ ರಾಜಕೀಯದ ಸುಣ್ಣ

ಅನ್ಯಧರ್ಮದವರ ನಡುವೆ ನಡೆದ ಗಲಾಟೆಯಾದ್ದರಿಂದ, ಘಟನೆ ಬೇರೆಯದ್ದೆ ಸ್ವರೂಪ ಪಡೆದುಕೊಳ್ಳುವ ಸಾದ್ಯತೆ ಇತ್ತು. ಆದರೆ ದೂರುದಾರನೇ ಕುಡಿದು ಬಂದಿದ್ದರಿಂದ ಪ್ರಕರಣ ಬೇರೆಯದ್ದೇ ಆಯಾಮ ಪಡೆದುಕೊಂಡಿತ್ತು.  

ಕುಡಿದು ಟೈಟಾಗಿ ಹಲ್ಲೆ

ಅಬ್ರಾರ್ ಮತ್ತು ನಜ್ರುಲ್ಲಾ ಎಂಬಿಬ್ಬರು ತಮ್ಮ ಮೇಲೆ ಹಲ್ಲೆ ಮಾಡಿದ್ರು ಎಂದಿದ್ದ ಆಟೋ ಚಾಲಕ, ಹರೀಶ್​ ಮೂವರು ಸ್ನೇಹಿತರೇ ಆಗಿದ್ದರು. ಮಧ್ಯಾಹ್ನ ಒಟ್ಟಿಗೆ ಎಣ್ಣೆ ಏರಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ ಹೊಡೆದಾಡಿಕೊಂಡಿದ್ಧಾರೆ. ಅಲ್ಲದೆ ಇದೇ ಕಾರಣಕ್ಕೆ ಹರೀಶನ ಆಟೋ ಜಖಂ ಮಾಡಿದ್ದಾರೆ .

ಎಸ್​ಪಿ ಎದುರು ಆರೋಪ, ಸ್ಟೇಷನ್​ನಲ್ಲಿ ರಾಜಿ

ಆನಂತರ ಹರೀಶ್​ ಎಸ್​ಪಿ ಕಚೇರಿ ಮುಂದೆ, ತನ್ನ ಗೋಳು ಹೇಳಿಕೊಂಡಿದ್ದ. ಅದರ ಬೆನ್ನಲ್ಲೆ ವಿನೋಬನಗರ ಪೊಲೀಸ್ ಸ್ಟೇಷನ್​ನಲ್ಲಿ ಆರೋಪಿಗಳೊಂದಿಗೆ ಸಂಧಾನ ಮಾಡಿಕೊಂಡಿದ್ದ. ಆರೋಪಿಗಳು ಸಹ ಈತನ ಆಟೋ ದುರಸ್ತಿ ಮಾಡಿಕೊಡುವುದಾಗಿ ಹೇಳಿದ್ದರಿಂದ ಪ್ರಕರಣ ರಾಜಿಯಾಗಿತ್ತು.  

FINAL ಫಲಿತಾಂಶ/ ಶಿವಮೊಗ್ಗ ಜಿಲ್ಲೆಯಲ್ಲಿ ಗೆದ್ದವರು ಯಾರು? ಸೋತವರು ಯಾರು?  ಅಂತಿಮ ರಿಸಲ್ಟ್​ನಲ್ಲಿ ಇರುವ ಕುತೂಹಲ ಅಂಶಗಳೇನು ತಿಳಿಯಿರಿ 

Malenadutoday.com Social media