ಉಪತಹಶೀಲ್ದಾರ್​ ಕೋರ್ಟ್​ಗೆ ಬಂದ ಕಕ್ಷಿದಾರರ ಕಿಡ್ನಾಪ್! ದಾಖಲಾಯ್ತು ಕೇಸ್​

Malenadu Today

 MALENADUTODAY.COM | SHIVAMOGGA  | #KANNADANEWSWEB

ಉಪ ತಹಶೀಲ್ದಾರ್​ರವರ ಕೋರ್ಟ್​ಗೆ ಬಂದು ವಾಪಸ್ ಹೋಗುವಾಗ  ಊರಿಗೆ ಹೊಗುವಾಗ ಎದುರಾಳಿ ಕಡೆಯವರು ಮಹಿಳೆಯೊಬ್ಬರನ್ನ ಕಿಡ್ನ್ಯಾಪ್​ ಮಾಡಿದ್ದಾರೆ ಎಂದು  ವಕೀಲರೊಬ್ಬರು ಆರೋಪಿಸಿದ್ದಾರೆ. ತಮ್ಮ ಕಕ್ಷಿದಾರರನ್ನ ಕಿಡ್ನ್ಯಾಪ್​ ಮಾಡಿಕೊಂಡು ಹೋಗಿರುವ ಬಗ್ಗೆ ವಕೀಲರು ದೂರು ನೀಡಿದ್ದು ಈ ಸಂಬಂಧ ಎಫ್​ಐಆರ್​ ಆಗಿದೆ. 

READ : ಆತಂಕ ಮೂಡಿಸಿದ ಕೆಂಜಿಗಾಪುರ ಭಟ್ಟರ ಮನೆಯ ರಾಬರಿ ಕೇಸ್!ಒಬ್ಬರೇ ಟಾರ್ಗೆಟ್! ಒಂದೇ ವಾರದಲ್ಲಿ 2 ಸಲ ರಾಬರಿ ₹5 ಲಕ್ಷಕ್ಕೂ ಹೆಚ್ಚು ರಾಬರಿ! ಸಾಗರ ಪೊಲೀಸರಿಗೆ ಸವಾಲಾಯ್ತಾ ಕೇಸ್​

ಹೊಳೆಹೊನ್ನೂರಿನಲ್ಲಿರುವ ನಾಡಕಚೇರಿಗೆ ಹೋಗಿದ್ದ ಸಂದರ್ಭದಲ್ಲಿ ವಕೀಲರ ಕಕ್ಷಿದಾರರು ಕೋರ್ಟ್ಗೆ ಸಂಬಂಧಿಸಿದ ದಾಖಲಾತಿ ನೀಡಿ ಹೊರಬಂದು ಊರಿಗೆ ಹೊರಡಲು ಅಣಿಯಾಗಿದ್ದಾರೆ. ಅಷ್ಟರಲ್ಲಿ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದವರು ಕಕ್ಷಿದಾರರನ್ನು ಎಳೆದಾಡಿ ಒಮಿನಿ ಕಾರಿನಲ್ಲಿ ಎಳೇದೊಯ್ದಿದ್ಧಾರೆ ಅಂತಾ ಆರೋಪಿಸಿದ್ದಾರೆ.  ಈ ಸಂಬಂಧ ಕೇಸ್​ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸ್ತಿದ್ಧಾರೆ. 

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #

Share This Article