ಬ್ಯಾಂಕ್​ ಅಕೌಂಟ್​​ಗೆ ಆಧಾರ್ ಕಾರ್ಡ್​ ಅಪ್​ಡೇಟ್ ಮಾಡಿ ಎನ್ನುವ ಮೆಸೇಜ್​ ಹಾಕಿ 1,85,000 ದೋಚಿದ್ರು! ಹುಷಾರ್ ಸಾರ್!

Rs 1,85,000 stolen by posting 'update Aadhaar card' message in bank account Beware sir!

ಬ್ಯಾಂಕ್​ ಅಕೌಂಟ್​​ಗೆ  ಆಧಾರ್ ಕಾರ್ಡ್​ ಅಪ್​ಡೇಟ್ ಮಾಡಿ ಎನ್ನುವ ಮೆಸೇಜ್​ ಹಾಕಿ 1,85,000  ದೋಚಿದ್ರು!  ಹುಷಾರ್ ಸಾರ್!

KARNATAKA NEWS/ ONLINE / Malenadu today/ May 22, 2023 SHIVAMOGGA NEWS

CEN Police station /  ಆನ್​ಲೈನ್ ವಂಚನೆಗೆ ಸಂಬಂಧಿಸಿದಂತೆ ಮತ್ತೊಂದು ಕೇಸ್ ಶಿವಮೊಗ್ಗದ ಸಿಇಎನ್​ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾಗಿದೆ. ಅಚ್ಚರಿ ಅಂದರೆ, ಆಧಾರ್ ಕಾರ್ಡ್​ಅಪ್​ಡೇಟ್​ ಮಾಡಿಕೊಡುವುದಾಗಿ ಹೇಳಿ ,  ಒಂದು ಲಕ್ಷದ 85 ಸಾವಿರ ರೂಪಾಯಿಗಳನ್ನು ಲಪಟಾಯಿಸಿದ ಬಗ್ಗೆ ವರದಿಯಾಗಿದೆ. 

ನಡೆದಿದ್ದೇನು? 

ಸೊರಬ ತಾಲ್ಲೂಕಿನ ಶಿಂಡ್ಲಿ ಹಳ್ಳಿಯ 71 ವರ್ಷದ ಹಿರಿಯೊಬ್ಬರ ಮೊಬೈಲ್​ಗೆ ಕಳೇದ 18 ರಂದು ಕಸ್ಟಮರ್ ಕೇರ್​ ಹೆಸರಿನ ನಂಬರ್​ನಿಂದ ಮೆಸೆಜ್​ ಬಂದಿದೆ. ಮೆಸೇಜ್​ನಲ್ಲಿ ನಿಮ್ಮ  ಬ್ಯಾಂಕ್ ಖಾತೆಗೆ ಪಾನ್ ಕಾರ್ಡ್, ಆಧಾರ ಕಾರ್ಡ್ ಅಪ್​ಡೇಟ್​  ಮಾಡಬೇಕು.  ಇಲ್ಲದಿದ್ದರೆ 24 ಗಂಟೆಯೊಳಗೆ ನಿಮ್ಮ ಅಕೌಂಟ್ ಬ್ಲಾಕ್​  ಆಗುತ್ತದೆ ಹಾಗೂ ಎಟಿಎಂ ಕಾರ್ಡ್ ಅವಧಿ ಮುಕ್ತಾಯವಾಗುತ್ತದೆ ಎಂದುಬರೆಯಲಾಗಿತ್ತು. ಅಲ್ಲದೆ ಇದಕ್ಕಾಗಿ ಇಂತಹದ್ದೊಂದು ನಂಬರ್​ಗೆ ಕರೆಮಾಡಿ ಎಂದು ತಿಳಿಸಲಾಗಿತ್ತು. 

ಅದರಂತೆ ಹಿರಿಯರು ಮೆಸೇಜ್​ನಲ್ಲಿದ್ದ ನಂಬರ್​ಗೆ ಕರೆಮಾಡಿದ್ದಾರೆ. ಆಕಡೆಯಿಂದ ಕರೆ ಸ್ವೀಕರಿಸಿದ ವ್ಯಕ್ತಿ ಹಿರಿಯರ ಬ್ಯಾಂಕ್​ ಖಾತೆಗೆ ಸಂಬಂಧಿಸಿದ ಮಾಹಿತಿ ಎಲ್ಲವನ್ನು ಪಡೆದುಕೊಂಡು ಒಟಿಪಿ ಕೇಳಿದ್ದಾನೆ. ಅದನ್ನ ಸಹ ಹಿರಿಯರು ನೀಡಿದ್ದಾರೆ. ಒಟಿಪಿ ಕೊಟ್ಟ ತಕ್ಷಣವೇ  ಹಿರಿಯರ ಖಾತೆಯಿಂದ 1,85,000/-ರೂ ಹಣ ಡ್ರಾ ಆಗಿದೆ. ಇದರಿಂದ ಆತಂಕಗೊಂಡು ಸಿಇಎನ್​ ಪೊಲೀಸ್ ಸ್ಠೇಷನ್​ಗೆ ಬಂದು ದೂರು ನೀಡಿದ್ಧಾರೆ. 

ಮಳೆಗಾಳಿಗೆ ರಸ್ತೆಗುರುಳಿದ ಮರ! ಕೊಂಬೆ ಬಿದ್ದು ಬೈಕ್​ ಸವಾರ ಸ್ಥಳದಲ್ಲಿಯೇ ಸಾವು!

ಮೂಡಿಗೆರೆ/ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಿನ್ನೆ ಜೋರು ಮಳೆಯಾಗುತ್ತಿರುವ ಹೊತ್ತಿನಲ್ಲಿ ಮರವೊಂದು ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. 

ಮೂಡಿಗೆರೆ ಬಳಿ ಚಿಕ್ಕಳ್ಳ– ಹಳ್ಳದಗಂಡಿ ಮಾರ್ಗದಲ್ಲಿ ಈ ಘಟನೆ ಸಂಭವಿಸಿದೆ.  ಗಾಳಿಗೆ ಮರ ರಸ್ತೆ ಮೇಲೆಯೇ ಉರುಳಿದೆ. ಅಲ್ಲದೆ, ಅಲ್ಲಿಯೇ ಸಾಗುತ್ತಿದ್ದ ಬೈಕ್​ ಸವಾರನ ಮೇಲೆ ಮರದ ಕೊಂಬೆ ಬಿದ್ದು, ಸ್ಥಳದಲ್ಲಿಯೇ ಅವರು ಸಾವನ್ನಪ್ಪಿದ್ದಾರೆ. 

ನಿನ್ನೆ ಸಂಜೆ ಸಂಜೆ 5.30ರ ಹೊತ್ತಿನಲ್ಲಿ ಈ ಘಟನೆ ಸಂಭವಿಸಿದ್ದು, ಮೃತರನ್ನ ವೇಣುಗೋಪಾಲ್‌ ಎಂದು ಗುರುತಿಸಲಾಗಿದೆ. ಇವರು ಮೂಡಿಗೆರೆಯಿಂದ ಹಳ್ಳದಗಂಡಿಗೆ ಹೋಗುತ್ತಿದ್ದರು. ಘಟನೆ ಸಂಬಂಧ ಮೂಡಿಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ.