ಮಳೆಗಾಳಿಗೆ ರಸ್ತೆಗುರುಳಿದ ಮರ! ಕೊಂಬೆ ಬಿದ್ದು ಬೈಕ್​ ಸವಾರ ಸ್ಥಳದಲ್ಲಿಯೇ ಸಾವು!

Biker dies on spot after tree falls on him in Mudigere

ಹಂಚಿಕೊಳ್ಳಿ
WhatsApp Facebook X Telegram
ಸುದ್ದಿ ಸಾರಾಂಶ

Biker dies on spot after tree falls on him in Mudigere

KARNATAKA NEWS/ ONLINE / Malenadu today/ May 22, 2023 SHIVAMOGGA NEWS

ಮೂಡಿಗೆರೆ/ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಿನ್ನೆ ಜೋರು ಮಳೆಯಾಗುತ್ತಿರುವ ಹೊತ್ತಿನಲ್ಲಿ ಮರವೊಂದು ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. 

ಮೂಡಿಗೆರೆ ಬಳಿ ಚಿಕ್ಕಳ್ಳ– ಹಳ್ಳದಗಂಡಿ ಮಾರ್ಗದಲ್ಲಿ ಈ ಘಟನೆ ಸಂಭವಿಸಿದೆ.  ಗಾಳಿಗೆ ಮರ ರಸ್ತೆ ಮೇಲೆಯೇ ಉರುಳಿದೆ. ಅಲ್ಲದೆ, ಅಲ್ಲಿಯೇ ಸಾಗುತ್ತಿದ್ದ ಬೈಕ್​ ಸವಾರನ ಮೇಲೆ ಮರದ ಕೊಂಬೆ ಬಿದ್ದು, ಸ್ಥಳದಲ್ಲಿಯೇ ಅವರು ಸಾವನ್ನಪ್ಪಿದ್ದಾರೆ. 

ನಿನ್ನೆ ಸಂಜೆ ಸಂಜೆ 5.30ರ ಹೊತ್ತಿನಲ್ಲಿ ಈ ಘಟನೆ ಸಂಭವಿಸಿದ್ದು, ಮೃತರನ್ನ ವೇಣುಗೋಪಾಲ್‌ ಎಂದು ಗುರುತಿಸಲಾಗಿದೆ. ಇವರು ಮೂಡಿಗೆರೆಯಿಂದ ಹಳ್ಳದಗಂಡಿಗೆ ಹೋಗುತ್ತಿದ್ದರು. ಘಟನೆ ಸಂಬಂಧ ಮೂಡಿಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ. 

ಪ್ರಮುಖ ಸುದ್ದಿ : ಚಾಲಕನಿಗೆ ನಿದ್ರೆ ಮಂಪರು! ಪಲ್ಟಿಯಾದ ಕಾರು!

ಶಿವಮೊಗ್ಗ/ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಮೇಲಿನ ಕುರುವಳ್ಳಿ ಬಳಿಯಲ್ಲಿ ನಿನ್ನೆ ಅಪಘಾತವೊಂದು ಸಂಭವಿಸಿದೆ. ಚಾಲಕನ  ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಹಿನ್ನೆಲೆಯಲ್ಲಿ ಚಾಲಕ ಗಂಭೀರ ಗಾಯಗೊಂಡಿದ್ದಾನೆ. 

ನಡೆದಿದ್ದೇನು? 

ಚಿಕ್ಕಮಗಳೂರಿನ ಮೂಡಿಗೆರೆಯಿಂದ ತೀರ್ಥಹಳ್ಳಿಗೆ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.  ಕಾರು ಮೇಲಿನಕುರುವಳ್ಳಿ ಸಮೀಪದ ತೀರಳೆಬೈಲು ತಿರುವಿನಲ್ಲಿ, ಪಲ್ಟಿಯಾಗಿದೆ. ಡ್ರೈವರ್ ನಿದ್ರೆ ಮಂಪರಿನಲ್ಲಿದ್ದಿದ್ದು ಘಟನೆಗೆ ಕಾರಣ ಎನ್ನಲಾಗುತ್ತಿದೆ. 

 ಪ್ರಮುಖ ಸುದ್ದಿ :  ಇನ್ಯಾರನ್ನ ಮಿನಿಸ್ಟರ್ ಮಾಡ್ತೀರಾ? ಭದ್ರಾವತಿಯಲ್ಲಿ ಜೋರಾಯ್ತು ಸೋಶಿಯಲ್ ಮೀಡಿಯಾ ಅಭಿಯಾನ!?

ಭದ್ರಾವತಿ/ ಶಾಸಕ ಬಿಕೆ ಸಂಗಮೇಶ್​​ಗೆ ಸಚಿವ ಸ್ಥಾನವನ್ನು ಮೊದಲ ಸಂಪುಟ ರಚನೆಯಲ್ಲಿಯೇ ನೀಡಿಲ್ಲ ಎಂದು ತಾಲ್ಲೂಕಿನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಸಂಗಮೇಶ್ವರ್‌ರವರು ಮಿನಿಸ್ಟರ್ ಪಟ್ಟ ಏರಲೇಬೇಕು… ಎಂಬ ಟ್ಯಾಗ್​ಲೈನ್​ ಅಡಿಯಲ್ಲಿ ಅಭಿಯಾನ ನಡೆಯುತ್ತಿದೆ. 

ಭದ್ರಾವತಿಯಲ್ಲಿ 4 ನೇ  ಬಾರಿ ಗೆದ್ದು ಶಾಸಕರಾಗಿ ಆಯ್ಕೆಯಾದ ನಮ್ಮ ಬಿ.ಕೆ ಸಂಗಮೇಶ್ವರ್ ಅವರನ್ನು ಮಿನಿಸ್ಟರ್ ಮಾಡದೆ ಇನ್ಯಾರನ್ನ ಮಾಡುತ್ತೀರಾ..? ಎಂಬ ಪ್ರಶ್ನೆಯನ್ನ ಕಾಂಗ್ರೆಸ್​ಗೆ ಸೋಶಿಯಲ್ ಮೀಡಿಯಾದಲ್ಲಿ ಕೇಳಲಾಗುತ್ತಿದೆ. 

 ಇನ್ನೂ ಭದ್ರಾವತಿಯಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು ಮಾತ್ರವಲ್ಲದೆ ಪಕ್ಷಭೇದ ಮರೆತು ವಿವಿಧ ಸಮುದಾಯಗಳು, ಸಂಘ-ಸಂಸ್ಥೆಗಳು, ಗಣ್ಯರು ಸಹ ಸಂಗಮೇಶ್ವರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಒಕ್ಕೂರಲಿನಿಂದ ಆಗ್ರಹಿಸಿದ್ದಾರೆ.

ಒಂದು ವೇಳೆ ಸಚಿವ ಸ್ಥಾನ ನೀಡಲು ವಿಳಂಬ ಮಾಡಿದ್ದಲ್ಲಿ ಹೋರಾಟ ನಡೆಸುವ ಎಚ್ಚರಿಕೆ ಸಹ ಕೇಳಿ ಬರುತ್ತಿದೆ. ಈಗಾಗಲೇ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಸರ್ಕಾರ ರಚನೆ ಆರಂಭದಲ್ಲಿಯೇ ಸಚಿವ ಸ್ಥಾನ ಸಿಗದಿರುವ ಕುರಿತು ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.  

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor