ಚಿತ್ರದುರ್ಗದಿಂದ ಕೂಡ್ಲಿಗೆ ಬಂದು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ : 112 ಸಮಯ ಪ್ರಜ್ಞೆಯಿಂದ ಉಳಿತು ಜೀವ

ಹಂಚಿಕೊಳ್ಳಿ
WhatsApp Facebook X Telegram
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ

Shivamogga 112 Police ಶಿವಮೊಗ್ಗ: ಚಿತ್ರದುರ್ಗದಿಂದ ಕೂಡ್ಲಿಗೆ ಬಂದು ತುಂಗಭದ್ರಾ ನದಿಗೆ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಮಹಿಳೆಯೊಬ್ಬರನ್ನು 112 ಪೊಲೀಸ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ. 

ಶಿವಮೊಗ್ಗ: ನಾಗರಪಂಚಮಿಯಲ್ಲಿ ಈತನಿಗೆ ಹಾಲೆರೆಯಲು ನಮಗೆ ಇಷ್ಟವಿಲ್ಲ: ಎಸ್​ ಎನ್​ ಚನ್ನಬಸಪ್ಪ ಹೀಗಂದಿದ್ಯಾಕೆ? 

ಚಿತ್ರದುರ್ಗದ ವ್ಯಕ್ತಿಯೊಬ್ಬರು ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ, ನನ್ನ ಪತ್ನಿ ಹೊಳೆಹೊನ್ನೂರು ಸಮೀಪದ ಕೂಡ್ಲಿಯ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ ಎಂದು  ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಇಆರ್‌ವಿ ಕರ್ತವ್ಯದಲ್ಲಿದ್ದ ಸಿಪಿಸಿ ಅಶೋಕ್ ಕುಮಾರ್ ಹಾಗೂ ಚಾಲಕ ಎಪಿಸಿ ಅಮರೇಶ್ ನಾಯ್ಕ್ ಅವರು ತಕ್ಷಣವೇ ಕೂಡ್ಲಿ ನದಿ ದಂಡೆಯತ್ತ ಧಾವಿಸಿದ್ದಾರೆ. ನದಿಯ ಹತ್ತಿರ ಬಂದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯನ್ನು ಗುರುತಿಸಿ, ಆಕೆಯನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ

ಪೊಲೀಸ್ ಸಿಬ್ಬಂದಿಯ ಈ ತ್ವರಿತ ಸ್ಪಂದನೆ, ಸಮಯಪ್ರಜ್ಞೆ ಮತ್ತು ಕರ್ತವ್ಯ ನಿಷ್ಠೆಯನ್ನು ಮೆಚ್ಚಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಲಾಗಿದೆ. 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor