ಕುವೆಂಪು ವಿವಿಯಲ್ಲಿ ಎರಡು ವರ್ಷಗಳ ಅವಧಿಯ ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ

ಹಂಚಿಕೊಳ್ಳಿ
WhatsApp Facebook X Telegram
Shivamogga Job ಸಾಂದರ್ಭಿಕ ಚಿತ್ರ
Shivamogga Jobಸಾಂದರ್ಭಿಕ ಚಿತ್ರ

Kuvempu University ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟ, ಕುವೆಂಪು ವಿಶ್ವವಿದ್ಯಾಲಯ, ಜ್ಞಾನಸಹ್ಯಾದ್ರಿಯ ಸ್ನಾತಕೋತ್ತರ ಅನ್ವಯಿಕ ಪ್ರಾಣಿಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗಕ್ಕೆ ಮಾಲಿಕ್ಯುಲರ್ ಜೆನೆಟಿಕ್ ಸ್ಟಡಿ ಆಫ್ ಸಿದ್ಧಿ ಟೈಬಲ್ ಪಾಪ್ಯುಲೇಷನ್ ಎಂಬ ಶೀರ್ಷಿಕೆಗೆ ಎರಡು ವರ್ಷಗಳ ಅವಧಿಗೆ ಒಂದು ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಯನ್ನು ಭರ್ತಿ ಮಾಡಲು ಎಂಎಸ್ಸಿ, ಪ್ರಾಣಿಶಾಸ್ತ್ರ ವಿಷಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಹಾಗೂ ಮಾಲಿಕ್ಯುಲರ್ ಬಯೋಲಜಿ ಟೆಕ್ನಿಕ್ ನಲ್ಲಿ ಅನುಭವ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿ ವಿಶ್ವ ಆನೆ ದಿನಾಚರಣೆ ಸಂಭ್ರಮ: ಬಿಡಾರ ಓಪನಿಂಗ್​​ ಬಗ್ಗೆ ಅಧಿಕಾರಿಗಳು ಹೇಳಿದ್ದೇನು

ಆಸಕ್ತರು ಅರ್ಜಿ ನಮೂನೆಯನ್ನು ಹಾಗೂ ಇತರೆ ವಿವರಗಳನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್ www.kuvempu.ac.in ನಿಂದ ಪಡೆದು, ಭರ್ತಿ ಮಾಡಿದ ತಮ್ಮ ಅರ್ಜಿಯನ್ನು ಸ್ವವಿವರಗಳು, ವಿದ್ಯಾರ್ಹತೆ, ಅನುಭವ ಇವುಗಳಿಗೆ ಸಂಬಂಧಿಸಿದ ದೃಢೀಕೃತ ಜೆರಾಕ್ಸ್ ದಾಖಲೆಗಳೊಂದಿಗೆ ಆ.31 ರೊಳಗಾಗಿ ಪ್ರೊ. ನಾಗರಾಜ, ಪ್ರಧಾನ ಸಂಶೋಧಕರು, ಸ್ನಾತಕೋತ್ತರ ಅನ್ವಯಿಕ ಪ್ರಾಣಿಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ, ಅಥವಾ ಇ-ಮೇಲ್ [email protected]  ಮೂಲಕ ಸಲ್ಲಿಸುವುದು. 

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಹೆಯಾನ ರೂ. 25000/-ಗಳನ್ನು ನೀಡಲಾಗುವುದು. ಸಂದರ್ಶನದ ದಿನಾಂಕವನ್ನು ಮುಂದಿನ ದಿನಗಳಲ್ಲಿ ಅರ್ಹ ಅಭ್ಯರ್ಥಿಗಳಿಗೆ ತಿಳಿಸಲಾಗುವುದು ಎಂದು ಕುವೆಂಪು ವಿವಿಯ ಪ್ರಧಾನ ಸಂಶೋಧಕರಾದ ಪ್ರೊ. ನಾಗರಾಜ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor