ಶಿವಮೊಗ್ಗದ ಬೀರನಕೆರೆಯ ಬಳಿಯಲ್ಲಿ ಹೊತ್ತಿ ಉರಿದ ಡಸ್ಟರ್ ಕಾರು

Malenadu Today

ಶಿವಮೊಗ್ಗ ತಾಲ್ಲೂಕು ಅಬ್ಬಲಗೆರೆಯಿಂದ ಮುಂದಕ್ಕೆ ಸಾಗಿದರೆ ಸಿಗುವ ಬೀರನಕೆರೆ ಸಮೀಪ ಇವತ್ತು ಕಾರೊಂದು ಬೆಂಕಿ ಅನಾಹುತಕ್ಕೆ ತುತ್ತಾಗಿದೆ. ನಿನ್ನೆ ಕತ್ತಲು ಕವಿದ ಬಳಿಕ ನಡೆದ ಘಟನೆಯಲ್ಲಿ ಕಾರೊಂದು ಸಂಪೂರ್ಣ ಬೆಂಕಿಯಲ್ಲಿ ಸುಟ್ಟು ಹೋಗಿದೆ. ಘಟನೆ ಸಂಬಂಧ ಪೊಲೀಸ್​ ಇಲಾಖೆಗೆ ಮಾಹಿತಿ ಸಿಕ್ಕಿ, ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. 

ಇದನ್ನು ನೋಡಿ : ಅಯ್ಯಪ್ಪನ ಸನ್ನಿಧಿ ಶಬರಿಮಲೆಯಲ್ಲಿ ರಶ್​ ಹೇಗಿದೆ ಗೊತ್ತಾ/ ವಿಡಿಯೋ ನೋಡಿ

ಇನ್ನೂ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಅರ್ಧಗಂಟೆಗೂ ಅಧಿಕ ಕಾಲ ಶ್ರಮಪಟ್ಟು ಬೆಂಕಿಯನ್ನು ನಂದಿಸಿದ್ದಾರೆ. ಅಷ್ಟರಲ್ಲಿ ಕಾರು ಬಹುತೇಕ ಸುಟ್ಟು ಹೋಗಿತ್ತು. ಇನ್ನೂ ಸುಟ್ಟಿರುವ ಕಾರು ಡಸ್ಟರ್ ಎಂಬುದು ಗೊತ್ತಾಗಿದೆ. ಅಲ್ಲದೆ ಮಲೆನಾಡು ಟುಡೆ ತಂಡಕ್ಕೆ ಸಿಕ್ಕ ಮೂಲಗಳ ಪ್ರಕಾರ, ಕಾರಿನಲ್ಲಿರುವ ಬ್ಯಾಟರಿ ವಯರ್ ಶಾರ್ಟ್​ ಸರ್ಕಿಟ್ ಆಗಿರಬಹುದು ಎಂದು ಹೇಳಲಾಗುತ್ತಿದೆ. ಕಾರು ಕೂಡ ಹಳೆಯದಾಗಿದ್ದು, ಬೇರೆ ಕಡೆಯ ಪಾಸಿಂಗ್ ಹೊಂದಿದೆ ಎನ್ನುತ್ತಿದ್ದಾರೆ. 

ಇದನ್ನು ನೋಡಿ : ಶಿವಮೊಗ್ಗದಲ್ಲಿ ಮಾಂಡೌಸ್ ಚಂಡಮಾರುತದ ಎಫೆಕ್ಟ್ ಹೇಗಿದೆ ಗೊತ್ತಾ? ವಿಡಿಯೋ ನೋಡಿ

ಸದ್ಯ ಸ್ಥಳೀಯರು ಹೇಳುವ ಪ್ರಕಾರ, ಕಾರಿನಲ್ಲಿ ಬೆಂಕಿ ಕಾಣುತ್ತಲೇ ಕಾರಿನಲ್ಲಿದ್ದವರು ಅಲ್ಲಿಂದ ಇಳಿದು ಹೊರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಆದಾಗ್ಯು ಕಾರಿನ ಪೂರ್ವಪರದ ಬಗ್ಗೆ ಇನ್ನಷ್ಟೆ ಮಾಹಿತಿ ಸಿಗಬೇಕಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

Share This Article