ಎಸ್ಟೇಟ್​ ಸೂಪರ್​ವೈಸರ್ & ರೈಟರ್​ರಿಂದ ಸಾಗುವಾನಿ ನಾಟಾ ಕಳ್ಳತನ | ಅರಣ್ಯ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಆರೋಪಿಗಳು

The forest guards have arrested two accused who were stealing and transporting teak woodತೇಗದ ಮರ ಕಳ್ಳತನ ಮಾಡಿ ಸಾಗುಸುತ್ತಿದ್ದ ಇಬ್ಬರು ಆರೋಪಿಗಳನ್ನ ಅರಣ್ಯ ಸಿಬ್ಬಂದಿ ಬಂಧಿಸಿದ್ದಾರೆ

ಎಸ್ಟೇಟ್​ ಸೂಪರ್​ವೈಸರ್ & ರೈಟರ್​ರಿಂದ ಸಾಗುವಾನಿ ನಾಟಾ ಕಳ್ಳತನ |  ಅರಣ್ಯ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಆರೋಪಿಗಳು



KARNATAKA NEWS/ ONLINE / Malenadu today/ Oct 17, 2023 SHIVAMOGGA NEWS

ಚಿಕ್ಕಮಗಳೂರು ಜಿಲ್ಲೆ  ಬಾಳೆಹೊನ್ನೂರು ವಲಯ ಅರಣ್ಯ ವ್ಯಾಪ್ತಿಯಯಲ್ಲಿ ಬರುವ ದೇವದಾನ ಮೀಸಲು ಅರಣ್ಯ ಪ್ರದೇಶದಲ್ಲಿ ಸಾಗುವಾನಿ ಮರ ಕದ್ದವರ ಮೇಲೆ ಅರಣ್ಯ ಇಲಾಖೆ ದಾಳಿ ನಡೆಸಿದೆ. ಈ ಸಂಬಂಧ  ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಬಂಧಿಸಿದೆ.  



ದೇವದಾನ ಎಸ್ಟೇಟ್‌ನ ಸೂಪರ್‌ವೈಸರ್ ಎ.ಎ.ಇಲಿಯಾಸ್ ಹಾಗೂ ರೈಟರ್ ಸಿ.ಜೆ.ರಿನೋ ಬಂಧಿತ ಆರೋಪಿಗಳು.ಇವರಿಬ್ಬರ ಮೇಲೆ ನಾಲ್ಕು ಸಾಗುವಾನಿ ಮರ ಕದ್ದ ಆರೋಪವಿದೆ. 



ಅರಣ್ಯ ಸಿಬ್ಬಂದಿ ಗಸ್ತಿನ ವೇಳೆ ಸಾಗುವಾನಿ ಮರಗಳನ್ನು ಕಡಿತಲೆ ಮಾಡಿರುವುದು ಕಂಡುಬಂದಿದ್ದು,  ಸ್ಥಳೀಯ ಎಸ್ಟೇಟ್‌ನಲ್ಲಿ ಸೂಪರ್‌ವೈಸರ್, ರೈಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇಲಿಯಾಸ್, ರಿನೋ ಅವರು ಮರವನ್ನು ಕಡಿತಲೆ ಮಾಡಿರುವ ಮಾಹಿತಿ ಲಭ್ಯವಾಗಿದೆ.

ಸದ್ಯ ಪ್ರಕರಣದಲ್ಲಿ ಆರೋಪಿಗಳಿಂದ 2.381 ಕ್ಯೂಬಿಕ್ ಮೀಟರ್ ಸಾಗುವಾನಿ ಮರದ ನಾಟಾ, ತುಂಡುಗಳನ್ನು ಹಾಗೂ ಮರ ಕೊಯ್ಯಲು ಬಳಸಿದ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ, ಆರೋಪಿಗಳನ್ನು ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಆರ್‌ಎಫ್‌ಓ ಎಂ. ಸಂದೀಪ್ ತಿಳಿಸಿದ್ದಾರೆ. 


ಇನ್ನಷ್ಟು ಸುದ್ದಿಗಳು 

ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ