5 ದಿನದ ಮೊಳಕೆ 15 ದಿನವಾದರೂ ಬರಲಿಲ್ಲ! ಆಲೂಗಡ್ಡೆ ನಂಬಿ ಮೋಸ ಹೋದ ರೈತ! ಬಿತ್ತಿದ ಫಸಲ ಮೇಲೆ ಟ್ರ್ಯಾಕ್ಟರ್​ ಹೊಡೆದು ಆಕ್ರೋಶ

The 5-day-old sprout didn't come even for 15 days! A farmer who was cheated by the belief in potatoes!

5 ದಿನದ ಮೊಳಕೆ 15 ದಿನವಾದರೂ ಬರಲಿಲ್ಲ! ಆಲೂಗಡ್ಡೆ ನಂಬಿ ಮೋಸ ಹೋದ ರೈತ! ಬಿತ್ತಿದ ಫಸಲ ಮೇಲೆ ಟ್ರ್ಯಾಕ್ಟರ್​ ಹೊಡೆದು ಆಕ್ರೋಶ

KARNATAKA NEWS/ ONLINE / Malenadu today/ May 30, 2023 SHIVAMOGGA NEWS

ಚಿಕ್ಕಮಗಳೂರು/ ಬಿತ್ತಿದ್ದ ಆಲೂಗಡ್ಡೆ ಬೀಜ ಮೊಳಕೆಯೊಡೆದೆ ನೆಲದಲ್ಲಿ ಕರಗಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಅಲ್ಲದೆ ಇದರಿಂದ ಬೇಸತ್ತ ರೈತ ಬಿತ್ತಿದ ಆಲೂಗಡ್ಡೆ ಮೇಲೆ ಪುನಃ ಟ್ರ್ಯಾಕ್ಟರ್ ಹೊಡೆದಿದ್ಧಾನೆ.  ತಾಲೂಕಿನ ಸಿರ್ಗಾಪುರ ಗ್ರಾಮದಲ್ಲಿ ಈ ಘಟನೆ  ನಡೆದಿದೆ.

ಹಾಸನದ  ಆಲೂಗಡ್ಡೆ ಮಂಡಿಯೊಂದರಿಂದ ರೈತ  ಬೀಜ ತಂದಿದ್ದರು. ಕೇವಲ 5 ದಿನಕ್ಕೆ ಮೊಳಕೆ ಬರಲಿದೆ ಎಂದಿದ್ದರಂತೆ ಖರೀದಿಸುವಾಗ. ಅದನ್ನ ನಂಬಿ ರೈತ ತನ್ನ ಹೊಲದಲ್ಲಿ ಆಲುಗಡ್ಡೆ ನಾಟಿ ಮಾಡಿದ್ಧಾನೆ. ಆದರೆ 15 ದಿನವಾದರೂ ಮೊಳಕೆ ಕಾಣದ ಹಿನ್ನೆಲೆಯಲ್ಲಿ ಬೇಸತ್ತು ಟ್ರ್ಯಾಕ್ಟರ್ ಹೊಡೆದಿದ್ಧಾನೆ. ಬರೋಬ್ಬರಿ 10 ಎಕರೆ ಜಮೀನಿನ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ್ದು, ಸಾವಿರಾರು ರೂಪಾಯಿ ನಷ್ಟವಾಗಿದ್ದಕ್ಕೆ ಹಿಡಿಶಾಪ ಹಾಕಿದ್ಧಾನೆ. ಅಲ್ಲದೆ ಇದೇ ರೀತಿ ಇನ್ನಷ್ಟು ಜನರಿಗೆ ಮೋಸವಾಗಿರುವ ಬಗ್ಗೆ ಆರೋಪಿಸಿದ್ಧಾನೆ. 

ಹಿಡಿದು ಬ್ಯಾಗ್​ನಲ್ಲಿಟ್ಟಿದ್ದ ನಾಗರ ಹಾವು ಕಚ್ಚಿ ಸ್ನೇಕ್​ ನರೇಶ್ ಸಾವು!

ಚಿಕ್ಕಮಗಳೂರು/ ಜಿಲ್ಲೆಯಲ್ಲಿ ಹಾವು ಹಿಡಿಯುವ ತಜ್ಞರೊಬ್ಬರು ಹಾವು ಕಚ್ಚಿ ಸಾವನ್ನಪ್ಪಿದ್ಧಾರೆ.  ಸ್ನೇಕ್ ನರೇಶ್ (51) ಮೃತ ದುರ್ದೈವಿ.ಇವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಕಷ್ಟು ಪ್ರಖ್ಯಾತಿ ಪಡೆದುಕೊಂಡಿದ್ದರು, ತಾವೆ ಹಿಡಿದು ಇಟ್ಟಿದ್ದ ನಾಗರಹಾವು ಕಚ್ಚಿದ್ದರಿಂದ ಇವರು ಸಾವನ್ನಪ್ಪಿದ್ಧಾರೆ. 

ನಡೆದಿದ್ದೇನು?

ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್​ ಬಳಿಯಲ್ಲಿ ನಾಗರ ಹಾವೊಂದು ಕಾಣಸಿಕ್ಕಿತ್ತು. ಅದನ್ನ ಹಿಡಿದಿದ್ದ ಸ್ನೇಕ್​ ನರೇಶ್, ಮತ್ತೊಂದು ಹಾವನ್ನ ಹಿಡಿಯಲು ತೆರಳಿದ್ದಾರೆ. ಈ ವೇಳೆ ತಮ್ಮ ಸ್ಕೂಟಿಯಲ್ಲಿ ಬ್ಯಾಗ್​ವೊಂದಕ್ಕೆ ಮೊದಲು ಹಿಡಿದಿದ್ದ ನಾಗರಹಾವನ್ನ ಹಾಕಿ ಇಟ್ಟಿದ್ದರು. 

ಇನ್ನೊಂದು ಹಾವನ್ನ ಹಿಡಿಯಲು ಹೋಗಿದ್ದ ವೇಳೆ ನರೇಶ್, ತಾವು ಸ್ಕೂಟಿಯಲ್ಲಿದ್ದ ಬ್ಯಾಗ್​ನ್ನ ತೆಗೆಯಲು ಮುಂದಾಗಿದ್ಧಾರೆ.  ಈ ವೇಳೇ ಅದರಲ್ಲಿದ್ದ ನಾಗರ ಹಾವು ನರೇಶ್​ರಿಗೆ ಕಚ್ಚಿದೆ. ತಕ್ಷಣವೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳೀಯರು ರವಾನಿಸಿದ್ದರು. ಆದರೆ ಹಾವಿನ ವಿಷ ದೇಹದ ತುಂಬಾ ವ್ಯಾಪಿಸಿದ್ದರಿಂದ ನರೇಶ್ ಸಾವನ್ನಪ್ಪಿದ್ಧಾರೆ. ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಇವರು ಈ ಹಿಂದೊಮ್ಮೆ ವಿಧಾನಸಭಾ ಎಲೆಕ್ಷನ್​ಗೂ ನಿಂತು ಅಚ್ಚರಿ ಮೂಡಿಸಿದ್ದರು.