ಬಸ್​ ಮತ್ತು ಟಿಲ್ಲರ್ ನಡುವೆ ಡಿಕ್ಕಿ | ಅನುಮಾನಸ್ಪದ ವ್ಯಕ್ತಿ ಓಡಾಟ, ಪೊಲೀಸರ ವಾರ್ನಿಂಗ್ | ಎರಡು ಕಾರುಗಳ ನಡುವೆ ಅಪಘಾತ

Malenadu Today

KARNATAKA NEWS/ ONLINE / Malenadu today/ Oct 18, 2023 SHIVAMOGGA NEWS’

ಬಸ್​ ಹಾಗೂ ಟಿಲ್ಲರ್ ನಡುವೆ ಡಿಕ್ಕಿ

ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಬರುವ ಲಕ್ಷ್ಮೀಪುರದಲ್ಲಿ  ಬಸ್ ಹಾಗೂ ಟಿಲ್ಲರ್ ನಡುವೆ ಅಪಘಾತವಾಗಿದೆ. ನಿನ್ನೆ ಸಂಭವಿಸಿದ ಅಪಘಾತದಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 

ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್​ ಸಿಬ್ಬಂದಿ ವಾಹನಗಳನ್ನು ತೆರವುಗೊಳಿಸಿ ಸ್ಟೇಷನ್​ಗೆ ರವಾನಿಸಿದ್ದಾರೆ. ಅಪಘಾತದಲ್ಲಿ ಬಸ್​ನ ಒಂದು ಭಾಗ ಜಖಂಗೊಂಡಿದೆ. 

ಅನುಮಾನಸ್ಪದ ವ್ಯಕ್ತಿಯ ಓಡಾಟ ಪೊಲೀಸರ ವಾರ್ನಿಂಗ್ 

ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅನುಮಾನಸ್ಪದವಾಗಿ ಅಪರಿಚಿತ ವ್ಯಕ್ತಿಯೊಬ್ಬ ಓಡಾಡುತ್ತಿರುವ ಬಗ್ಗೆ ಪೊಲೀಸರಿಗೆ ಸ್ಥಳೀಯರು ದೂರು ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ  112 ಸಿಬ್ಬಂದಿ ಅಪರಿಚಿತ ವ್ಯಕ್ತಿಯನ್ನು ವಿಚಾರಿಸಿದ್ದಾರೆ.  ವ್ಯಕ್ತಿಯು ಅದೇ ಗ್ರಾಮದವನಾಗಿದ್ದು, ಗ್ರಾಮಸ್ಥರಿಗೂ ಹಾಗೂ ಆತನಿಗೂ ಸೂಕ್ತ ತಿಳುವಳಿಕೆ  ನೀಡಿ ವಾಪಸ್ ಆಗಿದ್ದಾರೆ.  

ಕಾರುಗಳ ನಡುವೆ ಡಿಕ್ಕಿ  

ಮಾಳೂರು ಠಾಣಾ ವ್ಯಾಪ್ತಿಯ ಕುಡುಮಲ್ಲಿಗೆ ಬಳಿ 2 ಕಾರುಗಳ ನಡುವೆ ಅಪಘಾತವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಇನ್ನೂ ಘಟನೆಯಲ್ಲಿ ಯಾರಿಗೂ  ಗಾಯಗಳಾಗಿಲ್ಲ. ಈ ಸಂಬಂಧ ಎರಡು ಕಾರುಗಳ ಚಾಲಕರು ದೂರು ಕೊಡಲು ಮುಂದಾಗಿದ್ದಾರೆ.  


ಇನ್ನಷ್ಟು ಸುದ್ದಿಗಳು 

ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ


 

Share This Article