KARNATAKA NEWS/ ONLINE / Malenadu today/ Oct 20, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ವಿವಿದೆಡೆ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಶಿರಾಳಕೊಪ್ಪ ಉಪ-ವಿಭಾಗದ 220/110/11 ಕೆವಿ ವಿತರಣಾ ಬಳ್ಳಿಗಾವಿ ಕೇಂದ್ರ ದಿ೦ದ ಸರಬರಾಜು ಆಗುವ ಫೀಡರ್‌ಗಳಿಗೆ ದಿ. 20-10-2023 ರಂದು ವಿದ್ಯುತ್ ಸರಬರಾಜಲ್ಲಿ ವ್ಯತ್ಯಯವಾಗಲಿದೆ. ದಿ. 20ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಆಗುವ ಫೀಡ್ಗಳಲ್ಲಿ ಪರಿವರ್ತಕಗಳ ಮಾಸಿಕ ನಿರ್ವಹಣೆ ಕಾರ್ಯ ನಡೆಯಲಿದೆ.
ಹೀಗಾಗಿ 220/110/ ಕೆ.ವಿ.ಯ ಬಳ್ಳಿಗಾವಿ ಮುಳಕೊಪ್ಪ, ಬಿಸಲಹಳ್ಳಿ, ಹುಲಗಿನಕೊಪ್ಪ, ಬಸವನಂದಿಹಳ್ಳಿ, ಕಾನಹಳ್ಳಿ, ಬಿಳಕಿ, ತಾಳಗುಂದ, ಮುರಾರ್ಜಿಹಕ್ಕಳಿ, ಶಿರಳ್ಳಿ, ಕೇದಾರೇಶ್ವರ ಫೀಡರ್‌ಗಳಿಗೆ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆನಂದಪುರ ಸುತ್ತಮುತ್ತ ವಿದ್ಯುತ್ ವ್ಯತ್ಯಯ
ಸಮೀಪದ ಗೌತಮಪುರ ಗ್ರಾಮ ಪಂಚಾಯಿತಿ ಮಾದರಿ ಗ್ರಾಮ ಯೋಜನೆ ಅಡಿಯಲ್ಲಿ ಕಾಮಗಾರಿ ಪ್ರಯುಕ್ತ ಅ. 20 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಗೌತಮಪುರ, ಮಧ್ಯ ಕಣ್ಣೂರು, ತಳಗೇರಿ, ನರಸೀಪುರ, ಬೈರಾಪುರ ,ದೊಡ್ಡಬ್ಯಾಣ, ಡ್ಯಾಮ್ ಹೊಸೂರ್, ಮತ್ತು ತ್ಯಾಗರ್ತಿ ಸುತ್ತಮುತ್ತ ಭಾಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ ಎಂದು ಮೆಸ್ಕಾ ಎಂಜಿನಿಯರ್ ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL
ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ
