liquor ban/ ಎಲ್ಲಿ ಹುಡುಕಿದರೂ ಸಿಗೋದಿಲ್ಲ ಮದ್ಯ! ಮೂರುವರೆ ದಿನ ರಾಜ್ಯದೆಲ್ಲೆಡೆ ಲಿಕ್ಕರ್ ಬ್ಯಾನ್

Liquor ban imposed across the state for three-and-a-half days/ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟವನ್ನು ನಿಷೇಧಗೊಳಿಸಲಾಗಿದೆ. ನಿನ್ನೆ ಸಂಜೆಯಿಂದಲೇ ಈ ಆದೇಶ ಜಾರಿಯಲ್ಲಿದ್ದು ಮೆ 11 ರ ಬೆಳಗ್ಗೆ ಆರು ಗಂಟೆಯವರೆಗೂ ಆದೇಶ ಜಾರಿಯಲ್ಲಿ ಇರಲಿದೆ ಮತ್ತು ಫಲಿತಾಂಶದ ದಿನ 24 ಗಂಟೆ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ

liquor ban/ ಎಲ್ಲಿ ಹುಡುಕಿದರೂ ಸಿಗೋದಿಲ್ಲ ಮದ್ಯ! ಮೂರುವರೆ ದಿನ ರಾಜ್ಯದೆಲ್ಲೆಡೆ ಲಿಕ್ಕರ್ ಬ್ಯಾನ್

KARNATAKA NEWS/ ONLINE / Malenadu today/ May 7, 2023 GOOGLE NEWS 

ಶಿವಮೊಗ್ಗ/ ನಿನ್ನೆ ಕರ್ನಾಟಕ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡ ಬೆನ್ನಲ್ಲೆ , ರಾಜ್ಯದೆಲ್ಲೆಡೆ ಮದ್ಯ ಮಾರಾಟವನ್ನು ಕೂಡ ಸ್ಥಗಿತಗೊಳಿಸಲಾಗಿದೆ.  ಮೇ 10 ರಂದು ಮತದಾನ ನಡೆಯಲಿರುವ ಹಿನ್ನಲೆಯಲ್ಲಿ ನಿನ್ನೆಯಿಂದಲೇ ಮದ್ಯ ಮಾರಾಟ ನಿಷೇಧಗೊಳಿಸಿ ಆದೇಶಿಸಲಾಗಿದೆ.

MISSING /  ಇವರಿಬ್ಬರನ್ನ ಎಲ್ಲಾದರೂ ಕಂಡೀದ್ದೀರಾ? ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ 

ಎಲ್ಲಿವರೆಗೂ ಈ ನಿರ್ಬಂಧ 

  • ಮೇ 08 ಸಂಜೆ 5 ಗಂಟೆಯಿಂದ ಗುರುವಾರ ಅಂದರೆ ಮೇ 11 ರ ಬೆಳಗ್ಗೆ  6 ಗಂಟೆವರೆಗೆ ರಾಜ್ಯದಲ್ಲಿ ಮದ್ಯ ಮಾರಾಟವ  ನೀಷೇಧವಿರಲಿದೆ. 

  • ಇನ್ನೂ   ಚುನಾವಣಾ ಫಲಿತಾಂಶದ ಅಂದರೆ 13 ಮೇ 2023 ರಂದು  ಬೆಳಿಗ್ಗೆ 6 ಗಂಟೆಯಿಂದ ಮರುದಿನ 14 ಮೇ 2023ರ ಬೆಳಿಗ್ಗೆ  6 ಗಂಟೆವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಇರುವುದಿಲ್ಲ 

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ/ ಇಬ್ಬರ ದುರ್ಮರಣ

 ಮತದಾನದ ಮೇಲೆ ಪರಿಣಾಮ ಬೀರದಿರಲಿ ಎಂಬ ಕಾರಣಕ್ಕೆ ಹಾಗೂ ಅಹಿತಕರ ಘಟನೆಗೆ ಆಸ್ಪದವಾಗದಂತೆ ಮದ್ಯ ಮಾರಾಟವನ್ನು ನಿಷೇಧಗೊಳಿಸಲಾಗಿದೆ. ಅಲ್ಲದೆ ನಿಷೇದಿತ ದಿನಗಳನ್ನು ಶುಷ್ಕದಿನವನ್ನಾಗಿಸಲಾಗಿದೆ. 

 

SSLC  ಶಿವಮೊಗ್ಗದಲ್ಲಿ 624 ಅಂಕ ತೆಗೆದವರು ಯಾರು ಗೊತ್ತಾ? ಜಿಲ್ಲೆಯ Rank  ಕುಸಿಯಲು  ಕಾರಣ ಏನು? ಯಾವ ತಾಲ್ಲೂಕಿನಲ್ಲಿದೆ ಕಡಿಮೆ ಫಲಿತಾಂಶ?

ತೀರ್ಥಹಳ್ಳಿ/ ಶಿವಮೊಗ್ಗ ಇಲ್ಲಿನ ಚಿಟ್ಟೆಬೈಲಿನಲ್ಲಿರುವ ಪ್ರಜ್ಞಾಭಾರತಿ ಆಂಗ್ಲ‌ ಮಾಧ್ಯಮ ಶಾಲೆಯ ವಿದ್ಯಾರ್ಥಿ ಎಚ್.ಎಸ್.ಅಮಿತ್ ಶಾಸ್ತ್ರಿ 624 ಅಂಕ ಗಳಿಸಿದ್ದಾರೆ.

MISSING /  ಇವರಿಬ್ಬರನ್ನ ಎಲ್ಲಾದರೂ ಕಂಡೀದ್ದೀರಾ? ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ

ಇವರು ಶಿವಪ್ರಸಾದ್ ಮತ್ತು ವೀಣಾ ಅವರ ಪುತ್ರರಾಗಿದ್ದಾರೆ. ತಂದೆ ತಾಯಿ ಇಬ್ಬರು ಶಿಕ್ಷಕರಾಗಿದ್ದಾರೆ.  ಇನ್ನೂ  ಬೆಂಗಳೂರಿನ ಹೊಸೂರು‌ ರಸ್ತೆಯಲ್ಲಿರುವ ನ್ಯೂ ಮೆಕಾಲೆ ಇಂಗ್ಲಿಷ್ ಶಾಲೆಯ ಭೂವಿಕಾ ಪೈ, ಚಿಕ್ಕಬಳ್ಳಾಪುರದ ಬಾಲಗಂಗಾಧರನಾಥ ಶಾಲೆಯ ಯಶಸ್ ಗೌಡ, ಸವದತ್ತಿಯ ಕುಮಾರೇಶ್ವರ ಶಾಲೆಯ ಅನುಪಮಾ ಶ್ರೀಶೈಲ್, ಮುದ್ದೇಬಿಹಾಳದ ಆಕ್ಸ್ ಫರ್ಡ್ ಇಂಗ್ಲೀಷ್ ಶಾಲೆಯ ಭೀಮನಗೌಡ ಹನುಮಂತಗೌಡ ಪಾಟೀಲ್ 625 ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ.

ಮಲೆನಾಡಿನಲ್ಲಿ ಕಮ್ಮಿಯಾಯ್ತು ಸ್ಕೋರ್​!?

ಇನ್ನೂ ಈ ಸಲ  ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶಿವಮೊಗ್ಗ  29 ನೇ ಸ್ಥಾನ ಪಡೆದುಕೊಂಡಿದೆ.  ಯಾವಾಗಲು 15 ರೊಳಗೆ ಇರುತ್ತಿದ್ದ ಸ್ಥಾನ ಈ ಸಲ ಮತ್ತಷ್ಟು ಕುಸಿದಿದ್ದು, ಜಿಲ್ಲೆಯಲ್ಲಿ ಶಿಕ್ಷಣದ ಗುಣಮಟ್ಟದ ಬಗ್ಗೆ ಚಿಂತನೆ ಮಾಡಬೇಕಾದ ಪ್ರಶ್ನೆ ಮೂಡಿದೆ. 

ಭದ್ರಾವತಿ ಮತ್ತು ಶಿಕಾರಿಪುರ ತಾಲೂಕಿನ ಫಲಿತಾಂಶಗಳಲ್ಲಿ ಗಣನೀಯವಾಗಿ ಇಳಿಮುಖವಾಗಿದೆ,  ಭದ್ರಾವತಿಯಲ್ಲಿ ಶೇ. 75ರಷ್ಟು ಫಲಿತಾಂಶ ಹೊರಬಿದ್ದಿದೆ. ಇನ್ನೂ ಸ್ಥಾನ ಶಿಕಾರಿಪುರ ತಾಲೂಕಿನಲ್ಲಿ, ಶೇ. 81ರಷ್ಟು, ಶಿವಮೊಗ್ಗ ಸಾಗರ-85, ಸೊರಬ-86, ತೀರ್ಥಹಳ್ಳಿ ಮತ್ತು ಹೊಸನಗರ-91 ರಷ್ಟು ಫಲಿತಾಂಶ ಬಂದಿದೆ. 

ಭದ್ರಾವತಿಯ ಉರ್ದು ಶಾಲೆಯೊಂದರಲ್ಲಿ 152 ಮಕ್ಕಳು ಎಸ್ ಎಸ್ ಎಲ್‌ ಸಿ ಪರೀಕ್ಷೆ ಬರೆದಿದ್ದು, ಆ ಪೈಕಿ 56 ಮಕ್ಕಳು ಕನ್ನಡ ವಿಷಯದಲ್ಲಿ ಅನುತ್ತೀರ್ಣರಾಗಿದ್ದಾರೆ. ವಿಶೇಷ ಅಂದರೆ,  71 ಶಾಲೆಗಳಲ್ಲಿ ನೂರರಷ್ಟು ಸಾಧನೆಯಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ. 

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Malenadutoday.com Social media