ಶಿವಮೊಗ್ಗದಲ್ಲಿ ಎರಡು ದಿನ ಹಲವು ಭಾಗಗಳಲ್ಲಿ ಇರೋದಿಲ್ಲ ವಿದ್ಯುತ್! ಎಲ್ಲೆಲ್ಲಿ? ಯಾವಾಗ? ವಿವರ ಇಲ್ಲಿದೆ

There will be no electricity in many parts of Shivamogga for two days. Where? When? Here's the details ಶಿವಮೊಗ್ಗದಲ್ಲಿ ಎರಡು ದಿನ ಹಲವು ಭಾಗಗಳಲ್ಲಿ ಇರೋದಿಲ್ಲ ವಿದ್ಯುತ್! ಎಲ್ಲೆಲ್ಲಿ? ಯಾವಾಗ? ವಿವರ ಇಲ್ಲಿದೆ

ಶಿವಮೊಗ್ಗದಲ್ಲಿ ಎರಡು ದಿನ ಹಲವು ಭಾಗಗಳಲ್ಲಿ ಇರೋದಿಲ್ಲ ವಿದ್ಯುತ್! ಎಲ್ಲೆಲ್ಲಿ? ಯಾವಾಗ? ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Aug 23, 2023 SHIVAMOGGA NEWS

ಆ.25 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ 11 ಕೆವಿ ಮಾರ್ಗದ ಕಾಮಗಾರಿ ಕೆಲಸ ಇರುವುದರಿಂದ 11 ಕೆವಿ ಮಾರ್ಗ ಮುಕ್ತತೆ ನೀಡುವುದರಿಂದ ಬೊಮ್ಮನಕಟ್ಟೆ, ಎ ಬ್ಲಾಕ್, ನಿಗಡೆ ಲೇ ಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆ.25 ರ ಬೆಳಗ್ಗೆ 10-00 ರಿಂದ ಸಂಜೆ 06-00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಆ.24 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ ಎಂ.ಆರ್.ಎಸ್ 110/11 ಕೆವಿ ವಿವಿ ಕೇಂದ್ರದ ಎಫ್ -7 ಪಿಳ್ಳಂಗಿರಿ ಎನ್.ಜೆ.ವೈ ವಿದ್ಯುತ್ ಮಾರ್ಗದಲ್ಲಿ  ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ಮಾರ್ಗದಲ್ಲಿ ವಿದ್ಯುತ್ ಸರಬರಾಜು ಪಡೆಯುವ ಕೆಳಕಂಡ ಗ್ರಾಮಗಳಲ್ಲಿ ಆ.24 ರ ಬೆಳಗ್ಗೆ 09:00 ರಿಂದ ಸಂಜೆ 05:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಎಲ್ಲೆಲ್ಲಿ?

ಹೊಳೆಬೇನವಳ್ಳಿ, ದೊಡ್ಡತಾಂಡ, ಹೊಸಮನೆತಾಂಡ, ಪಿಳ್ಳಂಗಿರಿ, ಜಾವಳ್ಳಿ, ತಿರುವಳ್ಳಿ, ಅಬ್ಬರಘಟ್ಟ, ತರಗನಹಳ್ಳಿ ಕ್ರಾಸ್, ಹಾರೋಬೆನವಳ್ಳಿ, ಹಾರೋಬೆನವಳ್ಳಿ ತಾಂಡ, ಗೌಡನಾಯ್ಕನಹಳ್ಳಿ, ಬಿ.ಬೀರನಹಳ್ಳಿ, ಹೊಯ್ಸನಹಳ್ಳಿ, ಯಲವಟ್ಟಿ, ಹಸೂಡಿ, ಹಸೂಡಿ ಫಾರಂ, ವೀರಭದ್ರ ಕಾಲೋನಿ, ಸದಾಶಿವಪುರ, ಬಂಗಾರಪ್ಪ ಕಾಲೋನಿ, ಜಿ.ಜಿ.ಕ್ಯಾಂಪ್, ಚಿಕ್ಕಮರಡಿ, ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ರೈಲ್ವೆ ಇಲಾಖೆಯಿಂದ ಶಿವಮೊಗ್ಗದ ಎರಡು ಸ್ಟೇಷನ್​ಗಳ ವಿಚಾರದಲ್ಲಿ ಮಹತ್ವದ ನಿರ್ಧಾರ! ಏನದು?

ಶಿವಮೊಗ್ಗ ರೈಲ್ವೆ ವಿಚಾರದಲ್ಲಿ ಆಗಿಂದಾಗ್ಗೆ ಒಂದಲ್ಲ ಒಂದು ಬದಲಾವಣೆಗಳು ಆಗುತ್ತಲೇ ಇವೆ. ಇದಕ್ಕೆ ಪೂರಕವಾಗಿ, ಇದೀಗ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ  ( Hosanagar taluk) ಅರಸಾಳು ಹಾಗೂ ಶಿವಮೊಗ್ಗ ತಾಲ್ಲೂಕು ಕುಂಸಿ ನಿಲ್ದಾಣದಲ್ಲಿ ಇಂಟರ್‌ಸಿಟಿ ರೈಲುಗಳ ನಿಲುಗಡೆಗೆ ರೈಲ್ವೆ ಇಲಾಖ ಅವಕಾಶ ನೀಡಿದೆ. ಎರಡು ತಿಂಗಳು ಪ್ರಾಯೋಗಿಕವಾಗಿ ಈ ನಿಲ್ದಾಣಗಳಲ್ಲಿ ರೈಲು ನಿಲುಗಡೆಗೆ  ಅವಕಾಶ ಕಲ್ಪಿಸಲಾಗಿದೆ. ಆದರೆ ರೈಲು ನಿಲುಗಡೆಯ ದಿನಾಂಕ ಖಚಿತಪಡಿಸಿಲ್ಲ.‌ ಈ ಬಗ್ಗೆ  ಆದೇಶ ವಾರದೊಳಗೆ ಜಾರಿಗೆ ಬರಲಿದೆ ಎಂದು ತಿಳಿದು ಬಂದಿದೆ. 

ರೈಲು ಸಂಖ್ಯೆ 16205/16206 ತಾಳಗುಪ್ಪ- ಮೈಸೂರು ಇಂಟರ್‌ಸಿಟಿ ರೈಲು (mysuru-talguppa-intercity-express-16206/13976/1430/3906) ತಾಳಗುಪ್ಪ ರೈಲು ನಿಲ್ದಾಣದಿಂದ ಹೊರಟು ಅರಸಾಳು ರೈಲು ನಿಲ್ದಾಣಕ್ಕೆ ಸಂಜೆ 4.30ಕ್ಕೆ ತಲುಪುತ್ತದೆ. ಕುಂಸಿ ನಿಲ್ದಾಣಕ್ಕೆ 4.19ಕ್ಕೆ ತಲುಪುತ್ತದೆ. ಮರುದಿನ ಇದೇ ರೈಲು ಕುಂಸಿ ನಿಲ್ದಾಣಕ್ಕೆ ಬೆಳಿಗ್ಗೆ 11.30ಕ್ಕೆ ತಲುಪಲಿದೆ. ನಂತರ ಅರಸಾಳು ನಿಲ್ದಾಣಕ್ಕೆ ಬೆಳಿಗ್ಗೆ 11.46ಕ್ಕೆ ತಲುಪಲಿದೆ.

ರೈಲು ಸಂಖ್ಯೆ 16227/16228 ಬೆಂಗಳೂರು ಇಂಟರ್‌ಸಿಟಿ ರೈಲು ತಾಳಗುಪ್ಪದಿಂದ ಹೊರಟು ಅರಸಾಳು ರೈಲು ನಿಲ್ದಾಣಕ್ಕೆ ರಾತ್ರಿ 10 ಗಂಟೆ 6 ನಿಮಿಷಕ್ಕೆ ತಲುಪುವುದು.. ಕುಂಸಿ ರೈಲು ನಿಲ್ದಾಣಕ್ಕೆ 10.24ಕ್ಕೆ ತಲುಪುವುದು.. ಮರುದಿನ ಈ ರೈಲು ಬೆಳಿಗ್ಗೆ 5.30ಕ್ಕೆ ಕುಂಸಿ ನಿಲ್ದಾಣ ತಲುಪಲಿದೆ. ನಂತರ ಬೆಳಿಗ್ಗೆ 5.45ಕ್ಕೆ ಅರಸಾಳು ರೈಲು ನಿಲ್ದಾಣ ತಲುಪಲಿದೆ.

ಮೀಟರ್ ಇದ್ಯಾ!? ಆಟೋ ಚಾಲಕರಿಗೆ ಶಾಕ್ ಕೊಟ್ಟ ಎಸ್​ಪಿ ಮಿಥುನ್ ಕುಮಾರ್!

ಶಿವಮೊಗ್ಗ ನಗರ ಸಂಚಾರ ವ್ಯವಸ್ಥೆಯಲ್ಲ ಮಹತ್ವದ ಹೆಜ್ಜೆ ಇಡುತ್ತಿರುವ ಶಿವಮೊಗ್ಗ ಪೊಲೀಸ್ ಇಲಾಖೆ (Shimoga Police Department) ಇದೀಗ ಆಟೋ ಮೀಟರ್​ ವಿಚಾರಕ್ಕೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಹಲವು ಸಲ ಸೂಚನೆ ನೀಡಿದ್ರೂ ಸಹ  ಪಾಲಿಸದ ಆಟೋ ಚಾಲಕರಿಗೆ ಎಸ್​ಪಿ ಮಿಥುನ್ ಕುಮಾರ್ ಶಾಕ್ ಕೊಟ್ಟಿದ್ದಾರೆ.  

ಈ ನಿಟ್ಟಿನಲ್ಲಿ ನಿನ್ನೆ ಸ್ವತಃ  ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ರೋಡಿನಲ್ಲಿ ನಿಂತು ಆಟೋಗಳನ್ನು  ತಪಾಸಣೆ ನಡೆಸಿದ್ರು.  ಮೀಟರ್ ಹಾಕದ ಆಟೋಗಳನ್ನು ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದರು.ಆಟೋ ಮೀಟರ್​ಗಳನ್ನು ಅಳವಡಿಸದೇ ಇರೋದಕ್ಕೆ ಇನ್ಮುಂದೆ ಯಾವುದೇ ರಿಯಾಯಿತಿ ಇರಲ್ಲ.

ಮೀಟರ್​ ಇಲ್ಲದ ಆಟೋಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಎಸ್​ಪಿ ತಿಳಿಸಿದ್ದಾರೆ. 

ಆಟೋ ಮೀಟರ್​ ಕಡ್ಡಾಯವಾಗಿರಬೇಕು ಎಂದು ಬಾಡಿಗೆಗೆ ಹತ್ತುವ ಗ್ರಾಹಕರು ಸಹ ಚಾಲಕರಿಗೆ ತಿಳಿಸಬೇಕು ಎಂದು ಮಿಥುನ್ ಕುಮಾರ್ ಸಲಹೆ ನೀಡಿದ್ರು. ಇನ್ನೂ ಇದೇ ವೇಳೆ ಆಟೋ ಚಾಲಕರ ಸಂಘದ ಸದಸ್ಯರು ಹಾಗೂ ಮುಖಂಡರ ಮೂಲಕವೂ ಚಾಲಕರಿಗೆ ಆಟೋ ಮೀಟರ್​ ಅಳವಡಿಕೆ ಬಗ್ಗೆ ತಿಳುವಳಿಕೆ ಹೇಳಲಾಯ್ತು./  

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು