ಮೀಟರ್ ಇದ್ಯಾ!? ಆಟೋ ಚಾಲಕರಿಗೆ ಶಾಕ್ ಕೊಟ್ಟ ಎಸ್​ಪಿ ಮಿಥುನ್ ಕುಮಾರ್!

SP Mithun Kumar, who himself got down on the road and informed the drivers that auto meters are mandatory in Shivamogga. ಶಿವಮೊಗ್ಗದಲ್ಲಿ ಆಟೋ ಮೀಟರ್ ಕಡ್ಡಾಯ ಎಂದು ಖುದ್ದು ರೋಡಿಗಿಳಿದು ಚಾಲಕರಿಗೆ ತಿಳಿಸಿದ ಎಸ್​ಪಿ ಮಿಥುನ್ ಕುಮಾರ್,

ಮೀಟರ್ ಇದ್ಯಾ!? ಆಟೋ ಚಾಲಕರಿಗೆ ಶಾಕ್ ಕೊಟ್ಟ ಎಸ್​ಪಿ ಮಿಥುನ್ ಕುಮಾರ್!

KARNATAKA NEWS/ ONLINE / Malenadu today/ Aug 23, 2023 SHIVAMOGGA NEWS

ಶಿವಮೊಗ್ಗ ನಗರ ಸಂಚಾರ ವ್ಯವಸ್ಥೆಯಲ್ಲ ಮಹತ್ವದ ಹೆಜ್ಜೆ ಇಡುತ್ತಿರುವ ಶಿವಮೊಗ್ಗ ಪೊಲೀಸ್ ಇಲಾಖೆ (Shimoga Police Department) ಇದೀಗ ಆಟೋ ಮೀಟರ್​ ವಿಚಾರಕ್ಕೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಹಲವು ಸಲ ಸೂಚನೆ ನೀಡಿದ್ರೂ ಸಹ  ಪಾಲಿಸದ ಆಟೋ ಚಾಲಕರಿಗೆ ಎಸ್​ಪಿ ಮಿಥುನ್ ಕುಮಾರ್ ಶಾಕ್ ಕೊಟ್ಟಿದ್ದಾರೆ.  

ಈ ನಿಟ್ಟಿನಲ್ಲಿ ನಿನ್ನೆ ಸ್ವತಃ  ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ರೋಡಿನಲ್ಲಿ ನಿಂತು ಆಟೋಗಳನ್ನು  ತಪಾಸಣೆ ನಡೆಸಿದ್ರು.  ಮೀಟರ್ ಹಾಕದ ಆಟೋಗಳನ್ನು ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದರು.ಆಟೋ ಮೀಟರ್​ಗಳನ್ನು ಅಳವಡಿಸದೇ ಇರೋದಕ್ಕೆ ಇನ್ಮುಂದೆ ಯಾವುದೇ ರಿಯಾಯಿತಿ ಇರಲ್ಲ.ಮೀಟರ್​ ಇಲ್ಲದ ಆಟೋಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಎಸ್​ಪಿ ತಿಳಿಸಿದ್ದಾರೆ. 

ಆಟೋ ಮೀಟರ್​ ಕಡ್ಡಾಯವಾಗಿರಬೇಕು ಎಂದು ಬಾಡಿಗೆಗೆ ಹತ್ತುವ ಗ್ರಾಹಕರು ಸಹ ಚಾಲಕರಿಗೆ ತಿಳಿಸಬೇಕು ಎಂದು ಮಿಥುನ್ ಕುಮಾರ್ ಸಲಹೆ ನೀಡಿದ್ರು. ಇನ್ನೂ ಇದೇ ವೇಳೆ ಆಟೋ ಚಾಲಕರ ಸಂಘದ ಸದಸ್ಯರು ಹಾಗೂ ಮುಖಂಡರ ಮೂಲಕವೂ ಚಾಲಕರಿಗೆ ಆಟೋ ಮೀಟರ್​ ಅಳವಡಿಕೆ ಬಗ್ಗೆ ತಿಳುವಳಿಕೆ ಹೇಳಲಾಯ್ತು./  

ಜೈಲರ್ ಸಿನಿಮಾ ನಡೆಯುತ್ತಿರುವಾಗಲೇ ಕುಸಿದ ತೀರ್ಥಹಳ್ಳಿ ವಿನಾಯಕ ಚಿತ್ರಮಂದಿರದ ಮುಂಭಾಗ

ಸೂಪರ್​ ಸ್ಟಾರ್ ರಜಿನಿಕಾಂತ್  (@rajinikanth) ಅಭಿನಯದ ಜೈಲರ್ ಸಿನಿಮಾ ಪ್ರದರ್ಶನ ಸಂದರ್ಭದಲ್ಲಿ ತೀರ್ಥಹಳ್ಳಿಯ ವಿನಾಯಕ ಚಿತ್ರಮಂದಿರದ ಮುಂಭಾಗದ ಗೋಡೆ ಕುಸಿದು ಬಿದ್ದಿದೆ. ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ. 

ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆ ಸಮೀಪದ ಮಾರ್ಕೆಟ್​ ರೋಡ್​ನಲ್ಲಿರುವ ವಿನಾಯಕ ಚಿತ್ರಮಂದಿರದಲ್ಲಿ ನಿನ್ನೆ ರಾತ್ರಿ ಸೆಕಂಡ್ ಶೋ ಆರಂಭವಾಗಿತ್ತು. ಕೆಲಹೊತ್ತಿನಲ್ಲಿ ಟಾಕೀಸ್​ನ ಮುಂಭಾಗದ ಗೋಡೆ ಕುಸಿದಿದೆ. ಪರಿಣಾಮ ಪಾರ್ಕ್​ ಮಾಡಿದ್ದ 10 ಕ್ಕೂ ಹೆಚ್ಚು ಬೈಕಗಳು ಜಖಂಗೊಂಡಿದೆ. ಅದೃಷ್ಟಕ್ಕೆ ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ. 

ವಿಷಯ ತಿಳಿಯುತ್ತಲೆ ಸುತ್ತಮುತ್ತಲಿನ ಮುಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಇನ್ನೂ ಅಗ್ನಿಶಾಮಕ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ರು. ಯಾವುದೇ ಅಪಾಯ ಆಗದಿರುವುದು ಸ್ಥಳೀಯರಲ್ಲಿ ಸಮಾಧಾನ ಮೂಡಿಸಿತಾದರೂ ಇರುವ ಟಾಕೀಸ್​ವೊಂದರ ಗೋಡೆ ಹೀಗೆ ಕುಸಿದು ಬಿದ್ದಿರುವುದು ಬೇಸರ ತರಿಸಿದೆ.  

ಈಶ್ವರಪ್ಪನವರಿಂದ ಮನಸ್ಸಿಗೆ ನೋವಾಗಿದೆ! ಹಾವೇರಿಯಲ್ಲಿ ಸಿಡಿದ ಬಿಸಿ ಪಾಟೀಲ್​! ಕಾರಣವೇನು ಗೊತ್ತಾ?

 

ಶಿವಮೊಗ್ಗ ನಗರ ಕ್ಷೇತ್ರವನ್ನು ಬಿಟ್ಟುಕೊಟ್ಟು ರಾಜಕೀಯ ನಿವೃತ್ತಿ ತೆಗೆದುಕೊಂಡಿದ್ದ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ (K. S. Eshwarappa) ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಮಗನಿಗೆ ಟಿಕೆಟ್ ನೀಡುವಂತೆ ಪ್ರಯತ್ನಿಸುತ್ತಿರುವುದು ಗೊತ್ತಿರುವ ವಿಚಾರ. ಇದೀಗ ಈ ವಿಚಾರದಲ್ಲಿ ಬಾಂಬೆ ಟೀಂನಿಂದಲೇ ಆಕ್ಷೇಪ ವ್ಯಕ್ತವಾಗಿದೆ.  

ಈಶ್ವರಪ್ಪ ಅವರು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರ ಕಾಂತೇಶನನ್ನು ಮುಂದಿನ ಅಭ್ಯರ್ಥಿ ಎಂದು ಬಿಂಬಿಸುತ್ತಿದ್ದಾರೆ. ಆದರೆ ಕಾಂತೇಶ್ ಅವರಿಗೆ ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷ ಯಾವುದೇ ಸಂದೇಶ ಕೊಟ್ಟಿಲ್ಲ.  ಹೀಗಿದ್ದರೂ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನಾಗಿ ಮಾಡಿದವರನ್ನು ಕರೆದುಕೊಂಡು ಈಶ್ವರಪ್ಪ ಈ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಇಲ್ಲಿಯ ವಾತಾವರಣ ಕೆಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಅಲ್ಲದೆ ಹಾವೇರಿ ಲೋಕಸಭಾ ಚುನಾವಣೆಗೆ ನಾನೂ ಸಹ ಆಕಾಂಕ್ಷಿ ಎಂದಿದ್ದಾರೆ.  

ನಿನ್ನೆ ಈ ಸಂಬಂಧ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಸಿ.ಪಾಟೀಲ್, ಚುನಾವಣೆಗೆ ತಯಾರಿ ಮಾಡಿಕೊಳ್ಳುವಂತೆ ಕಾಂತೇಶ್‌ಗೆ ಪಕ್ಷ ಸೂಚನೆ ಕೊಟ್ಟಿದ್ದರೆ ಕ್ಷೇತ್ರದಲ್ಲಿ ಓಡಾಡಲಿ, ಆದರೆ, ಅಂತಹ ಯಾವುದೇ ಸಂದೇಶ ಪಕ್ಷದಿಂದ ಬಂದಿಲ್ಲ. ಈಶ್ವರಪ್ಪ ಕೂಡ ತಮ್ಮ ಪುತ್ರನೇ ಅಭ್ಯರ್ಥಿ ಎನ್ನುವ ರೀತಿಯಲ್ಲಿ ಓಡಾಡುವುದು ಸರಿಯಲ್ಲ, ಈ ರೀತಿ ಮಾಡಿದರೆ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತದೆ. ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದಲ್ಲಿ ಬಹಳಷ್ಟು ಆಕಾಂಕ್ಷಿಗಳಿದ್ದಾರೆ. ಚುನಾವಣೆ ಎದುರಿಸುವ ಶಕ್ತಿ, ಸಾಮರ್ಥ್ಯ ಇರುವವರೂ ಕೂಡ ಬಹಳಷ್ಟು ಮಂದಿ ಇದ್ದಾರೆ. ಪಕ್ಷ ಅವಕಾಶ ಕೊಟ್ಟರೆ ನಾನೂ ಸ್ಪರ್ಧೆಗೆ ಆಸಕ್ತಿ ಹೊಂದಿದ್ದೇನೆ ಎಂದಿದ್ದಾರೆ. 

 

ಈಶ್ವರಪ್ಪನವರು ನಾವು ಬ೦ದಿದ್ದರಿಂದ ಅಶಿಸ್ತು ಮೂಡಿದೆ ಎಂದಿದ್ದಾರೆ. ಈಶ್ವರಪ್ಪ ಅವರ ಹೇಳಿಕೆಯಿಂದ ನಮ್ಮ ಮನಸ್ಸಿಗೆ ನೋವಾಗಿದೆ. ಪಕ್ಷದ ವರಿಷ್ಠರಾದರೂ ಈಶ್ವರಪ್ಪಅವರಿಗೆ ಬಗ್ಗೆ ಬುದ್ದಿಮಾತು ಹೇಳಬಹುದಿತ್ತು. ಆದರೆ, ಯಾರೂ ಕಿವಿ ಮಾತು ಹೇಳಲಿಲ್ಲ, ಅದೂ ಕೂಡ ನಮಗೆ ಬಹಳಷ್ಟು ಬೇಸರ ಎಂದರು.  ಮನೆಗೆ ಬ೦ದು ಸೊಸೆ ಮೊಳೆ ಬಡಿದ ಮೇಲೆ ಮನೆಯವಳಾಗುತ್ತಾಳೆಯೇ ಹೊರಗಿನವಳಾಗಲ್ಲ, ನಾವು ಬಿಜೆಪಿ ಸದಸ್ಯತ್ವ ಪಡೆದ ಮೇಲೆ ವಲಸಿಗರು, ಮೂಲ ಎಂದು ಹೇಳುವ ಪ್ರಶ್ನೆಯೇ ಇಲ್ಲ. 2004ರ ನಂತರ ಹೊರಗಿನಿಂದ ಬಂದವರೇ ಬಿಜೆಪಿಯಲ್ಲಿ ಜಾಸ್ತಿ ಇದ್ದಾರೆ. ಅನಂತ್ ಕುಮಾರ್, ಯಡಿಯೂರಪ್ಪ ಅವರಂತಹ ಕೆಲ ನಾಯಕರನ್ನು ಬಿಟ್ಟರೆ ಉಳಿದ ಬಹಳಷ್ಟು ಜನ ಜನತಾದಳದಿಂದ  ಬಂದವರಿದ್ದಾರೆ. ನಾವು ಬಂದು 4 ವರ್ಷ ಆಯಿತು. ನಾವೀಗ ವಲಸಿಗರಲ್ಲ ಎಂದಿದ್ದಾರೆ.   

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು