ಶಿವಮೊಗ್ಗ ನಗರದಲ್ಲಿ ನಾಳೆ ನೀರು ಬರುವುದು ಡೌಟ್! ಕಾರಣವೇನು ತಿಳಿಯಿರಿ

Water supply in Shivamogga city to be disrupted tomorrow Find out the reason

ಶಿವಮೊಗ್ಗ ನಗರದಲ್ಲಿ ನಾಳೆ ನೀರು ಬರುವುದು ಡೌಟ್! ಕಾರಣವೇನು ತಿಳಿಯಿರಿ
Water supply in Shivamogga city

shivamogga Mar 22, 2024  ಶಿವಮೊಗ್ಗ ನಾಗರಿಕರ ಗಮನಕ್ಕೆ, ಶಿವಮೊಗ್ಗ ನಗರದಲ್ಲಿ ನಾಳೆ ಅಂದರೆ ಮಾರ್ಚ್ 23 ರಂದು ಕುಡಿಯುವ ನೀರಿನ ಪೂರೈಕೆಯಲ್ಲಿ ವತ್ಯಾಸ ಆಗುವ ಸಾಧ್ಯತೆ ಇದೆ. ಏಕೆಂದರೆ ಶಿವಮೊಗ್ಗದ ನೀರು ಪೂರೈಕಾ ಘಟಕಕ್ಕೆ ವಿದ್ಯುತ್ ಪೂರೈಕೆ ಸ್ಥಗಿತ ಮಾಡುವ ಹಿನ್ನೆಲೆಯಲ್ಲಿ ನಾಳೆ ಒಂದು ದಿನ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ಪ್ರಕಟಣೆ ನೀಡಲಾಗಿದೆ. 

ಕುಡಿಯುವ ನೀರು ವ್ಯತ್ಯಯ: ಸಹಕರಿಸಲು ಮನವಿ

ಕೃಷ್ಣರಾಜೇಂದ್ರ ಜಲಶುದ್ಧಿಕರಣ ಘಟಕಕ್ಕೆ ವಿದ್ಯುತ್ ಪೂರೈಕೆಯನ್ನು ನಿಲುಗಡೆ ಮಾಡುವುದರಿಂದ ಮಾ.23 ರಂದು ಶಿವಮೊಗ್ಗ ನಗರದ ದೈನಂದಿನ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

----------------------

ನೀರಿನ ಕಂದಾಯ ವಸೂಲಾತಿಗೆ ವಿಶೇಷ ಕೌಂಟರ್

ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ಮಾ.24 ರ ಭಾನುವಾರದಂದು 2023-24 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಿ ನಗರದ ಗುಡ್‍ಲಕ್ ಸರ್ಕಲ್ ಹತ್ತಿರ ಸ್ವಾಮಿವಿವೇಕಾನಂದ ಬಡಾವಣೆ, ರಾಮಣ್ಣ ಶ್ರೇಷ್ಠಿ ಪಾರ್ಕ್ ಹತ್ತಿರ ಗಾಂಧೀಬಜಾರ್, ಗುಂಡಪ್ಪ ಶೆಡ್ ಪಾರ್ಕ್ ಮಾಸ್ತಂಬಿಕ ದೇವಸ್ಥಾನದ ಪಾರ್ಕ್ ಹತ್ತಿರ, ಇಲಿಯಾಸ್ ನಗರ ಮುಖ್ಯರಸ್ತೆ ಸೂಪರ್ ಸ್ಟಾರ್ ಮಾಲ್ ಹತ್ತಿರ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹತ್ತಿರ ಗಾಡಿಕೊಪ್ಪ” ಈ ಎಲ್ಲಾ ಕಡೆಗಳಲ್ಲಿ ವಿಶೇಷ ನೀರಿನ ಕಂದಾಯ ವಸೂಲಾತಿ ಕೌಂಟರ್‍ಗಳನ್ನು ತೆರೆಯಲಾಗಿದೆ. 

ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದು ಅನಿವಾರ್ಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   

------------------