SHIVAMOGGA | Jan 7, 2024 | ವೀಲಿಂಗ್ ಮಾಡುವುದು ಅಪರಾಧ! ಎಲ್ಲರಿಗೂ ಗೊತ್ತಿರೋ ವಿಚಾರವೇ ಇದು. ಆದರೂ ಮಾಡುತ್ತಾರೆ, ಕಾರಣ ವೀಲಿಂಗ್ ಮಾಡುವವರಿಗೆ ಗೊತ್ತು. ಈಗ್ಯಾಕೆ ಈ ವಿಚಾರ ಅಂದರೆ, ಶಿವಮೊಗ್ಗ ಸಿಟಿಯಲ್ಲಿ ಮತ್ತೊಂದು ವೀಲಿಂಗ್ ಪ್ರಕರಣ ವಿಡಿಯೋ ರೂಪದಲ್ಲಿ ಹೊರಬಂದಿದೆ. ವೀಲಿಂಗ್ ಮಾಡುತ್ತಿರುವ ಯುವಕನ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ದೊಡ್ಡ ಸಾಧನೆ ಎಂಬಂತೆ ಹರಿದಾಡುತ್ತಿದೆ.
ವೀಲಿಂಗ್ ಮಾಡುವುದು ಅಪರಾಧ! /Wheeling is a crime!
ನೈಟ್ ಹೊತ್ತಿನಲ್ಲಿ ಈ ವೀಲಿಂಗ್ ಮಾಡಿದ್ದಾನೆ. ಅದು ಸಹ ಶಿವಮೊಗ್ಗ ಸಿಟಿ ಮೇನ್ ರೋಡ್ನಲ್ಲಿಯೇ ವೀಲಿಂಗ್ ಮಾಡಿ ಅದನ್ನ ತನ್ನಿಂದೆ ಬರುತ್ತಿರುವವರ ಬಳಿಯಲ್ಲಿ ಶೂಟ್ ಮಾಡಿಸಿದಂತಿದೆ. ವೀಲಿಂಗ್ ಸ್ಟಂಟ್ಗೆ ಹಾಡೊಂದನ್ನ ಸೇರಿಸಿ ಎಡಿಟೆಡ್ ವಿಡಿಯೋವನ್ನ ಅಪ್ಲೋಡ್ ಮಾಡಲಾಗಿದೆ.
ಬಸ್ನಲ್ಲಿ ಸಿಕ್ಕ ಲೇಡಿ ಅರೆಸ್ಟ್! ರೂಂ ನಂಬರ್ 304 ಕೇಸ್ನಲ್ಲಿ ಸಿಕ್ಕವಳಿಗೆ ಇದೆ 3 ಲಿಂಕ್!
ವಿಡಿಯೋದಲ್ಲಿ ಎದುರುಗಡೆಯಲ್ಲಿರುವ ವಾಹನಗಳು ಸಹ ಕಾಣುತ್ತಿವೆ. ಅಷ್ಟೊಂದು ವಾಹನಗಳು ಇದ್ದಾಗಲೂ ಯಾವುದೇ ಕೇರ್ ಇಲ್ಲದೆ ಯುವಕ ಡಿಯೋ ಬೈಕ್ನಲ್ಲಿ ವೀಲಿಂಗ್ ಮಾಡಿದ್ದಾನೆ. ಡಿವೈಡರ್ ಪಕ್ಕದಲ್ಲಿ ವೀಲಿಂಗ್ ಮಾಡುವ ಯುವಕ ರೋಡಲ್ಲಿ ಸಾಗುವ ಇತರೇ ವಾಹನಗಳಿಗೆ ಭಯ ಮೂಡಿಸಿದ್ದ. ಇದುವರೆಗೂ ಈ ವಿಡಿಯೋ ಸಂಬಂಧ ಪೊಲೀಸರು ಕ್ರಮ ಕೈಗೊಂಡಿಲ್ಲ. ಪರಿಶೀಲನೆ ನಡೆಸ್ತಿದ್ದಾರೆ ಎಂಬ ಮಾಹಿತಿ ಇದೆ.