ಬಸ್​ನಲ್ಲಿ ಸಿಕ್ಕ ಲೇಡಿ ಅರೆಸ್ಟ್! ರೂಂ ನಂಬರ್​ 304 ಕೇಸ್ನಲ್ಲಿ ಸಿಕ್ಕವಳಿಗೆ ಇದೆ 3 ಲಿಂಕ್!

Shimoga: Woman arrested in theft case at lodge Doddapet police station

ಬಸ್​ನಲ್ಲಿ ಸಿಕ್ಕ ಲೇಡಿ ಅರೆಸ್ಟ್! ರೂಂ ನಂಬರ್​ 304 ಕೇಸ್ನಲ್ಲಿ ಸಿಕ್ಕವಳಿಗೆ ಇದೆ 3 ಲಿಂಕ್!
Doddapet police station, theft case at lodge,ಬಸ್​ನಲ್ಲಿ ಸಿಕ್ಕ ಲೇಡಿ ಅರೆಸ್ಟ್, ಬಸ್​ನಲ್ಲಿ ಸಿಕ್ಕ ಲೇಡಿ ಅರೆಸ್ಟ್

SHIVAMOGGA  |  Jan 7, 2024  | ಬಸ್​ನಲ್ಲಿ ಸೀಟ್​ ಪಕ್ಕ ಕುಳಿತವನನ್ನ ಲಾಡ್ಜ್​ ರೂಮ್​ಗೆ ಕರೆದುಕೊಂಡು ಹೋಗಿದ್ದ ಯುವತಿ ಅರೆಸ್ಟ್ ಆಗಿದ್ದಾಳೆ. ರೂಂ ನಂಬರ್ 304 ನ ಕೇಸ್ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ಗೆ ಹೊಸದಾಗಿ ಕಂಡಿತ್ತು. 

ಹೊನ್ನಾವರ TO  ಶಿವಮೊಗ್ಗ

ಅಲ್ಲಿವರೆಗೂ ಶಿವಮೊಗ್ಗ ಬಸ್​ ನಿಲ್ದಾಣದಲ್ಲಿ ಕಳ್ಳತನಗಳು ದಾರಾಳವಾಗಿ ನಡೆಯುತ್ತಿದ್ದವು. ಆದರೆ ಈ ಕೇಸ್​ ಬೇರೆಯದ್ದು.    ಹೊನ್ನಾವರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ವ್ಯಕ್ತಿಗೆ ಯುವತಿಯೊಬ್ಬಳು ಸಿಕ್ಕಿದ್ದಳು..ಅದು ಸಹ ಬಸ್​ನಲ್ಲಿ ವ್ಯಕ್ತಿ ಕೂತಿದ್ದ ಸೀಟಿನ ಪಕ್ಕದ ಸೀಟಿನಲ್ಲಿ. ಬಸ್​ ಸಾಗುತ್ತಿದ್ದಂತೆ ಯುವತಿ ಪರಿಚಯ ಆಗಿದ್ದಳು. ಶಿವಮೊಗ್ಗಕ್ಕೆ ಬರುವಷ್ಟರಲ್ಲಿ ಯುವತಿ ವ್ಯಕ್ತಿಯ ಸಲಿಗೆ ಗಟ್ಟಿಮಾಡಿಕೊಂಡಿದ್ದಳು.  ಮಿಲನದ ಆಹ್ವಾನ ಕೊಟ್ಟಿದ್ದಳು. ಆ ವ್ಯಕ್ತಿಯು ಸಮ್ಮತಿಸಿದ್ದ.  

ಶಿವಮೊಗ್ಗ ಬಸ್ ನಿಲ್ದಾಣ

ಶಿವಮೊಗ್ಗ ಬಸ್​ ನಿಲ್ದಾಣದಲ್ಲಿ ಬಸ್​​ನಿಂದ ಇಳಿದವಳು ಆತನನ್ನು  ಲಾಡ್ಜ್​ವೊಂದಕ್ಕೆ ಕರೆದುಕೊಂಡು ಹೋಗಿದ್ದಳು. ರೂಂ ನಂಬರ್  304 ರಲ್ಲಿ ಇಬ್ಬರು ಸೇರಿಕೊಂಡಿದ್ದರು. ಆದರೆ ಅಲ್ಲಿ ನಡೆದಿದ್ದು ಬೇರೆಯಾಗಿತ್ತು. ಯುವತಿಯನ್ನ ಆ ವ್ಯಕ್ತಿ ಪೂರ್ತಿಯಾಗಿ ನಂಬಿದ್ದ. ಇವಳು ನಂಬಿಕೆ ದ್ರೋಹ ಮಾಡಿದ್ದಳು. ಚಿನ್ನದುಡ್ಡು ತೆಗೆದು ಇಡುವಂತೆ ಆಕೆ ಹೇಳಿದ್ದನ್ನ ಈತ ಪಾಲಿಸಿದ್ದ. ಅಲ್ಲದೆ ಹಸಿವು ಎಂದ ಅವಳ ಮಾತು ನಂಬಿ ಊಟ ತರಲು ಲಾಡ್ಜ್​ನಿಂದ ಹೊರಬಂದಿದ್ದ. ಲಂಚ್​​ ಐಟಂ ತೆಗೆದುಕೊಂಡು ಲಾಡ್ಜ್​ಗೆ ಹೋಗುವಷ್ಟರಲ್ಲಿ ಆಕೆ ಅಲ್ಲಿಂದ ಚಿನ್ನ ದುಡ್ಡು ತೆಗೆದುಕೊಂಡು ಮಾಯವಾಗಿದ್ದಳು.. 

ಇದನ್ನೂ ಸಹ ಓದಿ : ಬಸ್ಸಿನಲ್ಲಿ ಪಕ್ಕದ ಸೀಟಲ್ಲಿ ಸಿಕ್ಕಿ ಲೇಡಿ, ಲಾಡ್ಜ್​ಗೆ ಕರೆದೊಯ್ದಳು! ರೂಮ್​ನಲ್ಲಿ ನಡೆದಿದ್ದು ರೋಮ್ಯಾನ್ಸ್​ ಅಲ್ಲ! ಶಾಕ್?

ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್​

ದೊಡ್ಡಪೇಟೆ ಪೊಲೀಸ್ ಸ್ಟೇಷನ್​

ಪರ ಊರಿನ ವ್ಯಕ್ತಿ ಇದ್ದುದೆಲ್ಲ ಕಳೆದುಕೊಂಡು ಮರ್ಯಾದೆಗೆ ಅಂಜಿ ಕುಳಿತಿದ್ದ. ಕೊನೆಗೆ ದೈರ್ಯ ಮಾಡಿ ದೊಡ್ಡಪೇಟೆ ಪೊಲೀಸರಿಗೆ ದೂರು ನೀಡಿದ್ದ. ಪೊಲೀಸರಿಗೂ ಈ ಪ್ರಕರಣ ಶಾಕ್ ಆಗಿತ್ತು. ಅದಾಗಲೇ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ಪೊಲೀಸರು ಬಸ್​ ಸ್ಟ್ಯಾಂಡ್ ಕಳ್ಳರನ್ನ ಹಿಡಿಯುತ್ತಿಲ್ಲ ಅಂತಾ ಶಿವಮೊಗ್ಗವೇ ಮಾತನಾಡಿಕೊಳ್ತಿತ್ತು. ಸಾಲದ್ದಕ್ಕೆ ಈ ಪ್ರಕರಣ ಇಂಟ್ರಸ್ಟಿಂಗ್ ಆಗಿದ್ದಷ್ಟೆ ಅಲ್ಲದೆ ವಿಶೇಷವೆನಿಸಿತ್ತು.. 

ಪೊಲೀಸ್ ತನಿಖಾ ತಂಡ

ದಿನಾಂಕ:-15-12-2023 ರಂದು ನಡೆದಿದ್ದ ಘಟನೆ ಸಂಬಂಧ  ಪೊಲೀಸ್ ಇನ್ಸ್‌ಪೆಕ್ಟರ್  ರವಿ ಪಾಟೀಲ್,  ಶ್ರೀನಿವಾಸ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್, ಪಾಲಾಕ್ಷ ನಾಯ್ಕ -ಸಿಹೆಚ್ಸಿ-448, ಲಚ್ಚಾ ನಾಯ್-ಸಿಹೆಚ್‌ಸಿ-288, ಚಂದ್ರ ನಾಯ್ಸ್, ಸಿಪಿಸಿ-1321, ನಿತಿನ್ ಸಿಪಿಸಿ-1504, ಪುನೀತ್ ರಾವ್ ಸಿಪಿಸಿ-1666, ಮಹಿಳಾ ಸಿಬ್ಬಂದಿ ಶ್ರೀಮತಿ ಸುಮಿತಾಬಾಯಿ ಮಪಿಸಿ-1267  ರವರ ತಂಡ ತನಿಖೆ ನಡೆಸ್ತಿತ್ತು. ತನಿಖೆ ಈಗ ಫಲಪ್ರಧಗೊಂಡಿದೆ. 

ಶಿವಮೊಗ್ಗದಲ್ಲಿಯೇ ಮೂರು ಕಳ್ಳತನ ಕೇಸ್​ 

ಪ್ರಕರಣದ ಬೆನ್ನುಬಿದ್ದ ದೊಡ್ಡಪೇಟೆ ಪೊಲೀಸರು ಸಣ್ಣ ಸಣ್ಣ ಸಾಕ್ಷ್ಯಗಳನ್ನು ಕಲೆಹಾಕಿ ಯುವತಿಯ ಮೂಲವನ್ನ ಹುಡುಕಿದ್ದಾರೆ. ರೂಪಕ್ಕೆ ಹೋಲುವ ಹೆಸರಿಟ್ಟುಕೊಂಡಿದ್ದ ಯುವತಿಯನ್ನ ಬಂಧಿಸಿ ಅಂದರ್​​ ಮಾಡಿದ್ದಾರೆ ದೊಡ್ಡಪೇಟೆ ಪೊಲೀಸರು. ಈಕೆ ಮೂಲತಃ ಆಯನೂರು ಕಡೆಯವಳು, ಗಂಡನ ಮನೆ ಚಳ್ಳಕರೆಯ ಒಂದು ಗ್ರಾಮ. 

ಇದನ್ನೂ ಸಹ ಓದಿ : ಪೊಲೀಸ್​ಗೆ ಫೋಟೋ ಕೊಟ್ಟ ಪ್ರಯಾಣಿಕ! ಬಸ್​ ಚಾಲಕನಿಗೆ ಬಿತ್ತು 5 ಸಾವಿರ ರೂಪಾಯಿ ಫೈನ್​



ವಿಶೇಷ ಅಂದರೆ ಈಕೆಯನ್ನ ಬಂಧಿಸಿದ್ದ ಪೊಲೀಸರು ಇನ್ನೂ ಮೂರು ಪ್ರಕರಣ ಪತ್ತೆಯಾಗಿದೆ. ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದ ಒಳಗಡೆ ಇರುವ ಶೌಚಾಲಯದ ಸಮೀಪ ನಡೆದಿದ್ದ 8 ಗ್ರಾಂ ಬಂಗಾರದ ಕಳ್ಳತನ ಹಾಗೂ ಪ್ಲಾಟ್ ಫಾರಂ 9 ರಲ್ಲಿ ನಡೆದಿದ್ದ 2 ಪ್ರಕರಣಗಳಲ್ಲಿ ಈಕೆ ಆರೋಪಿಯಾಗಿದ್ದಳು