ಮಂಜಿದೆ...ಮುಂಗಾರಿಲ್ಲ! ಜೋಗ ಜಲಪಾತ ಹೇಗೆ ಕಾಣ್ತಿದೆ ನೋಡಿ! ಪ್ರವಾಸಕ್ಕಿದು ಸೂಕ್ತ ಸಮಯವಾ?

Shimoga's world famous Jog falls without rain

ಮಂಜಿದೆ...ಮುಂಗಾರಿಲ್ಲ!  ಜೋಗ ಜಲಪಾತ ಹೇಗೆ ಕಾಣ್ತಿದೆ ನೋಡಿ! ಪ್ರವಾಸಕ್ಕಿದು ಸೂಕ್ತ ಸಮಯವಾ?

KARNATAKA NEWS/ ONLINE / Malenadu today/ Jun 24, 2023 SHIVAMOGGA NEWS

ಜೋಗ ಜಲಪಾತ ಮಳೆಯಿಲ್ಲದೇ ಸೊರಗುತ್ತಿದೆ. ಹೀಗಾಗಿ ಜೋಗದ ಸಿರಿಯನ್ನು ಸವಿಯಲು ಬರುತ್ತಿರುವ ಪ್ರವಾಸಿಗರು ಬರೀ ಕಲ್ಲುಬಂಡೆಗಳಿಂದಲೇ ತುಂಬಿಕೊಂಡಿರುವ ಜೋಗವನ್ನು ನೋಡುವ ಸನ್ನಿವೇಶ ಎದುರಾಗಿದೆ.  

 

 ಒಂದು ಕಡೆ ಶರಾವಿತ ಹಿನ್ನೀರು ಬತ್ತಿ ಮುಳುಗಡೆ ಪ್ರದೇಶಗಳೆಲ್ಲಾ, ಬಿರುಕುಬಿಟ್ಟ ಮಣ್ಣಿನ ಹೆಂಟೆಯೊಂದಿಗೆ ಬರಗಾಲ ಸೂಚನೆ ನೀಡುತ್ತಿದೆ. ಇನ್ನೊಂದೆಡೆ ಮಳೆಯಿಲ್ಲದೇ ರಾಜ, ರಾಣಿ, ರಾಕೇಟ್, ರೋರರ್​ ಜಲಪಾತಗಳು ಗಾಂಭಿರ್ಯ ಕಳೆದುಕೊಂಡಿವೆ. ಶ್ವೇತ ರೇಖೆಗಳಂತೆ ತೆಳ್ಳಗೆ ನೆಲಕ್ಕುರುಳುತ್ತಿರುವ ಜಲಧಾರೆಗಳು ಪ್ರವಾಸಿಗರನ್ನ ಸೆಳೆಯುತ್ತಿಲ್ಲ. ಇಷ್ಟೊತ್ತಿಗಾಗಲೇ ಛತ್ರಿ, ರೈನ್​ ಕೋಟ್​ ಆಶ್ರಯದಲ್ಲಿ ಜೋಗ ನೋಡಲು ಮುಗಿಬೀಳುತ್ತಿದ್ದ ಪ್ರವಾಸಿಗರು, ಜೋಗದತ್ತ ಬರುತ್ತಿಲ್ಲ. ಬಂದವರಿಗೆ ನೀರಿಲ್ಲದ ಕಾರ್ಗಲ್ಲಿನ ಜಲಪಾತದ ದರ್ಶನವಾಗುತ್ತಿದೆ. 


ಜೂನ್ 20 ಕಳೆದರೂ ಶರಾವತಿ ಜಲಾನಯನ ಪ್ರದೇಶ ಹಾಗೂ ಜೋಗ ಜಲಪಾತ ಪ್ರದೇಶದಲ್ಲಿ ಮಳೆಪ್ರಮಾಣ  ನಿರೀಕ್ಷೆಯನ್ನು ಸಹ ಮುಟ್ಟುತ್ತಿಲ್ಲ  ವರುಣ ಕೃಪೆ ತೋರಿದರಷ್ಟೆ ಜೋಗದ ಚೆಲುವು ಮತ್ತೆ  ಕಾಣಲು ಸಾಧ್ಯ…