ಕ್ರೈಂ ಕಂಟ್ರೋಲ್​ಗೆ ಶಿವಮೊಗ್ಗ ಪೊಲೀಸ್ ಇಲಾಖೆಯ ಹೊಸ ಪ್ಲ್ಯಾನ್​! ಹಳ್ಳಿ ಹಳ್ಳಿಗೆ ‘ಯುವಪಡೆ ’ ರಚಿಸಲು ಮುಂದಾದ ಎಸ್​ಪಿ! ಏನಿದು ಗೊತ್ತಾ?

Shimoga police department's new plan for crime control SP to form 'Youth Force'! Do you know what it is? / SP Mithun Kumar

ಕ್ರೈಂ ಕಂಟ್ರೋಲ್​ಗೆ ಶಿವಮೊಗ್ಗ ಪೊಲೀಸ್ ಇಲಾಖೆಯ ಹೊಸ ಪ್ಲ್ಯಾನ್​! ಹಳ್ಳಿ ಹಳ್ಳಿಗೆ ‘ಯುವಪಡೆ ’ ರಚಿಸಲು ಮುಂದಾದ ಎಸ್​ಪಿ! ಏನಿದು ಗೊತ್ತಾ?

KARNATAKA NEWS/ ONLINE / Malenadu today/ Jun 1, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಎಸ್​ಪಿ ಮಿಥುನ್​ ಕುಮಾರ್ ರವರು ಜಿಲ್ಲೆಯಲ್ಲಿ ಕ್ರೈಂ ಕಂಟ್ರೋಲ್ ಮಾಡಲು ಸಾಕಷ್ಟು ವಿಧವಿಧವಾದ ಪ್ರಯತ್ನ ನಡೆಸ್ತಿದ್ದಾರೆ .ಅಲ್ಲದೆ ಇದಕ್ಕಾಗಿ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. 

ಗ್ರಾಮಗಳಲ್ಲಿ ಬರಲಿದೆ ಯುವಪಡೆ

ಈ ನಿಟ್ಟಿನಲ್ಲಿ ಜಿಲ್ಲೆ ಗ್ರಾಮಗಳಲ್ಲಿ 20-30 ಹುಡುಗರ ಗುಂಪನ್ನ ರಚಿಸಿ ಅವರನ್ನೆ ಗ್ರಾಮದಲ್ಲಿ ಪೊಲೀಸ್ ಡ್ಯೂಟಿ ನಿರ್ವಹಿಸಲು ಅವಕಾಶ ಮಾಡುವಂತ ಯೋಜನೆಯನ್ನ ಜಾರಿಗೆ ತರುತ್ತಿದ್ದಾರೆ. ಇದಕ್ಕೆ ಪೂರಕವಾಗಿ ನ  ನೇತೃತ್ವದಲ್ಲಿ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಯಡೇಹಳ್ಳಿ ಗ್ರಾಮದ ಅಶೋಕ್ ನಗರದಲ್ಲಿ  ಜನ ಸಂಪರ್ಕ ಸಭೆ ನಡೆಸಿದ ಅವರು, ಐದು ಅಂಶಗಳನ್ನು ಗ್ರಾಮಗಳಲ್ಲಿ ಕ್ರೈಂ ಕಂಟ್ರೋಲ್​ ಮಾಡುವ ನಿಟ್ಟಿನಲ್ಲಿ ವಿವರಿಸಿದರು. 

ಮಿಥುನ್ ಕುಮಾರ್ ಹೇಳಿದ್ದೇನು? 

1) ಪ್ರತೀ ಗ್ರಾಮಗಳಿಗೂ ಬೀಟ್ ಸಿಬ್ಬಂಧಿಗಳನ್ನು ನೇಮಕ ಮಾಡಲಾಗಿದ್ದು, ನಿರಂತರವಾಗಿ ತಮ್ಮ ಗ್ರಾಮಕ್ಕೆ ಭೇಟಿ ನೀಡಲಿದ್ದು, ಯಾವಾಗಲೂ ನಿಮ್ಮ ಸಂಪರ್ಕದಲ್ಲಿತ್ತಾರೆ, ಅದೇ ರೀತಿ ನೀವುಗಳೂ ಸಹಾ ನಿಮ್ಮ ಗ್ರಾಮದ ಬೀಟ್ ಸಿಬ್ಬಂಧಿಯವರೊಂದಿಗೆ ಸಂಪರ್ಕದಲ್ಲಿರುವುದು. 

2) ಗ್ರಾಮದಲ್ಲಿ ಯಾವುದಾದರೂ ಅಕ್ರಮ ಚಟುವಟಿಕೆಗಳು ಕಂಡಲ್ಲಿ ಕೂಡಲೇ  ಬೀಟ್ ಸಿಬ್ಬಂಧಿ / ಪಿಎಸ್ಐ /  ಠಾಣಾಧಿಕಾರಿಯವರಿಗೆ ಮಾಹಿತಿ ನೀಡುವುದು.

3) ಗ್ರಾಮದಲ್ಲಿರುವ ಯುವಕರನ್ನು ಗುರುತಿಸಿ, 20 ರಿಂದ 30  ಜನ ಯುವಕರ ಪಡೆಯನ್ನು ರಚಿಸಿ, ಬೀಟ್ ಸಿಬ್ಬಂಧಿಯವರೊಂದಿಗೆ ಗಸ್ತು ಮಾಡುವುದು ಮತ್ತು ಯಾವದೇ ಅಕ್ರಮ ಚಟುವಟಿಗಳು ಕಂಡು ಬಂದಲ್ಲಿ / ಯಾವುದೇ ಮಾಹಿತಿಗಳಿದ್ದಲ್ಲಿ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸುವುದು. 

4) ಯಾವುದೇ ಸಮಾಜ ಘಾತುಕ / ಅಕ್ರಮ ಚಟುವಟಿಕಯಲ್ಲಿ ತೊಡಗುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು. 

5) ಯಾವುದೇ ತುರ್ತು ಸಂದರ್ಭದಲ್ಲಿ ERSS – 112  ಸಹಾಯವಾಣಿಗೆ ಕರೆಮಾಡಿ ಪೊಲೀಸ್ ಸಹಾಯ ಪಡೆದುಕೊಳ್ಳುವುದು. 

ಶಿವಮೊಗ್ಗ ಜಿಲ್ಲೆಯಾದ್ಯಂತ ಒಂದೇ ದಿನ 1587 COTPA ಕೇಸ್​ ದಾಖಲು ! ಏನಿದು!?

ಶಿವಮೊಗ್ಗ/ ಜಿಲ್ಲೆಯಾದ್ಯಂತ ಒಂದೇ ದಿನ ಬರೋಬ್ಬರಿ 1587 COTPA  ಪ್ರಕರಣಗಳನ್ನ ದಾಖಲು ಮಾಡಲಾಗಿದೆ. ನಿನ್ನೆ ಅಂದರೆ, ದಿನಾಂಕಃ-31-05-2023  ರಂದು ವಿಶ್ವ ತಂಬಾಕು ವಿರೋಧಿ ದಿನ ಆಚರಿಸಲಾಗಿತ್ತು. 

ಇದನ್ನು ಸಹ ಓದಿ :  ಚೀಲೂರು ಡಬ್ಬಲ್​ ಅಟ್ಯಾಕ್! ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲಿನ ದಾಳಿಯಲ್ಲಿ ಯಾರೆಲ್ಲಾ ಆರೋಪಿಗಳು ಗೊತ್ತಾ? ಫಿಟ್ ಆದನಾ ಹೆಬ್ಬೆಟ್ಟು ಮಂಜಾ?

ಈ ಹಿನ್ನೆಲೆಯಲ್ಲಿ  ಶಿವಮೊಗ್ಗ ಜಿಲ್ಲಾದ್ಯಂತ ಕಾನೂನು ಬಾಹೀರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಪೆಟ್ಟಿ ಅಂಗಡಿ, ಜೆರಾಕ್ಸ್ ಅಂಗಡಿ ಮತ್ತು ಬೇಕರಿಗಳ ಮೇಲೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ಧಾರೆ.

ಈ ವೇಳೆ  ಶಿವಮೊಗ್ಗ - ಎ ಉಪ ವಿಭಾಗ ವ್ಯಾಪ್ತಿಯಲ್ಲಿ 273, ಶಿವಮೊಗ್ಗ - ಬಿ ಉಪ ವಿಭಾಗ ವ್ಯಾಪ್ತಿಯಲ್ಲಿ 238, ಸಾಗರ ಉಪ ವಿಭಾಗ ವ್ಯಾಪ್ತಿಯಲ್ಲಿ 374, ಭದ್ರಾವತಿ ಉಪ ವಿಭಾಗ ವ್ಯಾಪ್ತಿಯಲ್ಲಿ 81, ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯಲ್ಲಿ 351 ಮತ್ತು ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯಲ್ಲಿ  270 ಸೇರಿ, ಜಿಲ್ಲೆಯಾದ್ಯಂತ  ಒಟ್ಟು 1587 ಕೋಟ್ಪಾ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. 

ಇದೇ ಜೂನ್ 3 ಕ್ಕೆ ನಾ ಕಂಡಂತೆ ತೇಜಸ್ವಿ-ಶಾಮಣ್ಣ

ಶಿವಮೊಗ್ಗ ಬಹುಮುಖಿ ಶಿವಮೊಗ್ಗ ಹಾಗೂ ಅಭಿರುಚಿ ಪ್ರಕಾಶನ ಮೈಸೂರುನ ಸಹಯೋಗದೊಂದಿಗೆ ಜೂನ್​ 3 ನೇ ತಾರೀಖು  ಸಂಜೆ 5 ಗಂಟೆಗೆ ನಗರದ ಕುವೆಂಪು ರಂಗ ಮಂದಿರದಲ್ಲಿ ಲೇಖಕ ಕಡಿದಾಳ ಪ್ರಕಾಶ್‌ ರವರು ಬರೆದಿರುವ "ನಾ ಕಂಡಂತೆ ತೇಜಸ್ವಿ- ಶಾಮಣ್ಣ'' ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಬಗ್ಗೆ ಬಹುಮುಖಿಯ ನಾಗಭೂಷಣ್ ತಿಳಿಸಿದ್ದಾರೆ. 

ವನ್ಯಜೀವಿ ತಜ್ಞರು ಹಾಗೂ ಛಾಯಾಗ್ರಹಕರಾದ ಕೃಪಾಕರ- ಸೇನಾನಿಯವರು ಪ್ರಸ್ತಕ ಬಿಡುಗಡೆ ನೆರವೇರಿಸಲಿದ್ದಾರೆ. ಸಾಹಿತಿ ಪುಟ್ಟಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಖ್ಯಾತ ಸಾಹಿತಿ ಜಯಂತ್‌ ಕಾಯ್ಕಿಣಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ನಂತರ ಅತಿಥಿಗಳೊಂದಿಗೆ ಸಂವಾದ ಕಾರ್ಯಕ್ರಮವು ಇರಲಿದೆ.  

ನಾಡಿನ ಕಲೆ -ಸಾಹಿತ್ಯದ ಇಬ್ಬರು ದಿಗ್ಗಜರು ಪೂರ್ಣಚಂದ್ರ ತೇಜಸ್ವಿ ಹಾಗೂ ಕಡಿದಾಳ್ ಶಾಮಣ್ಣ ಹತ್ತು ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ಇವರಿಬ್ಬರು ನಮ್ಮ ನಡುವೆ ದಂತ ಕತೆಯಾಗಿ ಬೆಳೆದವರು.  . ಕಡಿದಾಳ್‌ ಪ್ರಕಾಶ್  ಇಬ್ಬರ ಬಗ್ಗೆ ಒಂದೇ ಪುಸ್ತಕದಲ್ಲಿ ಬರೆದಿದ್ದು ಇದೊಂದು ವಿಶೇಷ ಕೃತಿ ಎನಿಸಿಕೊಳ್ಳಲಿದೆ.