7 ಲಕ್ಷದ ಸಾಗುವಾನಿ ಸೀಜ್​!ಮರಕ್ಕೆ ಕಾರು ಡಿಕ್ಕಿ! ಕಾರನ್ನ ಎಳೆದೊಯ್ದ ಟಿಪ್ಪರ್​! ಅನುಮಾನಸ್ಪದ ವ್ಯಕ್ತಿಗಳ ಓಡಾಟ! TODAY @ NEWS

7 ಲಕ್ಷದ ಸಾಗುವಾನಿ ಸೀಜ್​!ಮರಕ್ಕೆ ಕಾರು ಡಿಕ್ಕಿ! ಕಾರನ್ನ ಎಳೆದೊಯ್ದ ಟಿಪ್ಪರ್​! ಅನುಮಾನಸ್ಪದ ವ್ಯಕ್ತಿಗಳ ಓಡಾಟ! TODAY @ NEWS Rs 7 lakh saguvani seized! Car collides with a tree! Tipper pulls the car away! The movement of suspicious people! TODAY @ NEWS

7 ಲಕ್ಷದ ಸಾಗುವಾನಿ ಸೀಜ್​!ಮರಕ್ಕೆ ಕಾರು ಡಿಕ್ಕಿ! ಕಾರನ್ನ ಎಳೆದೊಯ್ದ ಟಿಪ್ಪರ್​!  ಅನುಮಾನಸ್ಪದ ವ್ಯಕ್ತಿಗಳ ಓಡಾಟ! TODAY @ NEWS

KARNATAKA NEWS/ ONLINE / Malenadu today/ Jul 18, 2023 SHIVAMOGGA NEWS

ಬಾಡಿಗೆದಾರ ಮತ್ತು ಮಾಲಿಕನ ನಡುವೆ ಕಿತ್ತಾಟ

ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಬರುವ ಸ್ಥಳವೊಂದರಲ್ಲಿ ಬಾಡಿಗೆದಾರರು ಹಾಗೂ ಮಾಲೀಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಜಗಳ ತಾರಕಕ್ಕೇರಿದ ಬೆನ್ನಲ್ಲೆ  ಸ್ಥಳಕ್ಕೆ ಪೊಲೀಸರು ಆಗಮಿಸಿ ವಿಚಾರಣ ನಡೆಸಿದ್ದಾರೆ. ಎರಡು ಕಡೆಯವರಿಗೂ ಸಮಾಧಾನ ಹೇಳಿ ಜಗಳವಾಡದಂತೆ ಎಚ್ಚರಿಕೆ ನೀಡಿದ್ದಾರೆ. 

ಮರಕ್ಕೆ ಗುದ್ದಿದ ಕಾರು!

ತುಂಗಾನಗರ ಪೊಲೀಸ್ ಸ್ಟೇಷನ್​  ವ್ಯಾಪ್ತಿಯಲ್ಲಿರುವ ಶಾಂತಿನಗರದ ತಿರುವಿನಲ್ಲಿ ಕಾರೊಂದು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿಮರವೊಂದಕ್ಕೆ ಗುದ್ದಿದೆ, ಅಲ್ಲದೆ ಬೇಲಿಯೊಳಗೆ ಕಾರಿನ ಮುಂಬಾಗ ಸಿಲುಕಿಕೊಂಡಿದೆ. ಇನ್ನೂ ಘಟನೆಯಲ್ಲಿ ಕಾರಿನಲ್ಲಿದ್ದವರು ಗಾಯಗೊಂಡಿದ್ದರು, ಅವರನ್ನ ಸ್ಥಳೀಯರು ಪೊಲೀಸರ ಸಹಾಯದೊಂದಿಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನೂ ಕಾರು ಪೂರ್ತಿಯಾಗಿ ಜಖಂಗೊಂಡಿದೆ. 

ಸವಳಂಗ ರಸ್ತೆಯಲ್ಲಿ ಅನುಮಾನಸ್ಪದ ವ್ಯಕ್ತಿಗಳ ಓಡಾಟ

ಇತ್ತ ವಿನೋಬನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಬರುವ  ಸವಳಂಗ ರಸ್ತೆಯ ಬಳಿ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿರುವುದಾಗಿ ಪೊಲೀಸರಿಗೆ ಸ್ಥಳೀಯರು ದೂರುಕೊಟ್ಟಿದ್ದಾರೆ. ಬಳಿಕ ಸ್ಥಳಕ್ಕೆ ಬಂದ   112 ಪೊಲೀಸರು ಅನುಮಾನಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಿ ಸ್ಟೇಷನ್​ ಕರೆದೊಯ್ದಿದ್ಧಾರೆ. ಅಲ್ಲಿನ SHO  ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಸಾಗುವಾನಿ ನಾಟ ವಶಕ್ಕೆ 

ತರೀಕೆರೆ: ತಾಲ್ಲೂಕಿನ ಜಮೀನುಗಳಿಂದ ಅಕ್ರಮವಾಗಿ ಕಡಿತಲೆ ಮಾಡಿ ಸಂಗ್ರಹಿಸಿಟ್ಟಿದ್ದ ಸಾಗುವಾನಿ ಮರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಆರೋಪಿ ದುಗ್ಲಾಪುರದ ನಾಗರಾಜ್ ನನ್ನ ಬಂಧಿಸಿದ್ಧಾರೆ. ಈ ಸಂಬಂಧ ರೈತರು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಅಂದಾಜು ₹7 ಲಕ್ಷ  ಮೌಲ್ಯದ ಸಾಗುವಾನಿ ತಂಡುಗಳನ್ನು ವಶಕ್ಕೆ ಪಡೆಯಲಾಗಿದೆ. 

ಕಾರನ್ನ ಎಳೆದೊಯ್ದ ಟಿಪ್ಪರ್​! ಸಾಗರ ಮೂಲದವರಿಗೆ ಗಾಯ

ನಿನ್ನೆ ಪಡುಬಿದ್ರಿಯ ಸಮೀಪದ ಹೆಜಮಾಡಿ ಟೋಲ್​ ಬಳಿ ಟಿಪ್ಪರ್ ಲಾರಿಯೊಂದು ಕಾರೊಂದನ್ನೆ ಗೊತ್ತಾಗದೇ ಎಳೆದೊಯ್ದ ಘಟನೆಯಲ್ಲಿ ಅಪಘಾತಕ್ಕೀಡಾದವರು ಶಿವಮೊಗ್ಗ ಜಿಲ್ಲೆ ಸಾಗರ ಮೂಲದವರು ಎಂದು ತಿಳಿದುಬಂದಿದೆ. ಹಿಂದಿನಿಂದ ಡಿಕ್ಕಿ ಹೊಡೆದ ಕಾರನ್ನು ಟಿಪ್ಪರ್ ಸುಮಾರು ಒಂದು ಕಿ.ಮೀವರೆಗೂ ಎಳೆದೊಯ್ದಿತ್ತು. ಬಳಿಕ, ಹಿಂದಿನಿಂದ ಬರುತ್ತಿದ್ದ ಇನ್ನೊಂದು ವಾಹನ ಟಿಪ್ಪರ್​ನ್ನ ಚೇಸ್ ಮಾಡಿ ಚಾಲಕನಿಗೆ ವಿಷಯ ತಿಳಿಸಿದ್ಧಾನೆ. ಆನಂತರ, ಕಾರಿನಲ್ಲಿದ್ದವರನ್ನ ಆಸ್ಪತ್ರೆಗೆ ರವಾನಿಸಲಾಗಿದೆ.  ಗಾಯಗೊಂಡವರನ್ನ  ಸಾಗರ ಮೂಲದ ಜಾಫರ್ ಖಾನ್, ಶಾಹಿನಾ, ಯಾಸಿರ್ ಖಾನ್ ಎಂದು ತಿಳಿದುಬಂದಿದೆ

.  


ಶಿವಮೊಗ್ಗ ಬಸ್​ಸ್ಟ್ಯಾಂಡ್​ನಲ್ಲಿ ನಡೆದಿದ್ದ ಕಿಡ್ನ್ಯಾಪ್​ ಕೇಸ್​ಗೆ ಟ್ವಿಸ್ಟ್! ಅಸಲಿಗೆ ಇಡೀ ದಿನ ನಡೆದಿದ್ದೇನು?

ನಮ್ಮ ಹತ್ರ ಬೇಡ! ಕಿಚ್ಚ ಸುದೀಪ್​ ರವರ ಪರವಾಗಿ ಶಿವಮೊಗ್ಗದಲ್ಲಿ ಅಭಿಮಾನಿಗಳ ವಾರ್ನಿಂಗ್!

  

ಅಪ್ಪುರವರು 50 ಡಿಪ್ಸ್​ ಹೊಡೆದ ಈ ಜಾಗ ಯಾವುದು ಗೊತ್ತಾ? ಗೆಸ್ ಮಾಡಿ! ವೈರಲ್​ ಆಗ್ತಿದೆ ಪುನೀತ್​ರ ಹಳೆಯ ವಿಡಿಯೋ!