ದಾವಣಗೆರೆ ಆನೆ ಅಭಿಮನ್ಯು! ಚಿಕ್ಕಮಗಳೂರು ಆನೆ ಕೃಷ್ಣ! ಕುಂತಿ ಪುತ್ರ ಧೃವ ! ಸಕ್ರೆಬೈಲ್​ ಆನೆ ಬಿಡಾರದಲ್ಲಿ ವಿಶೇಷ ಕಾರ್ಯಕ್ರಮ

Davanagere elephant Abhimanyu! Chikkamagaluru Elephant Krishna! Kunti's son Dhruva! Special programme at Sakrebail Elephant Camp

ದಾವಣಗೆರೆ ಆನೆ ಅಭಿಮನ್ಯು! ಚಿಕ್ಕಮಗಳೂರು ಆನೆ ಕೃಷ್ಣ! ಕುಂತಿ ಪುತ್ರ ಧೃವ ! ಸಕ್ರೆಬೈಲ್​ ಆನೆ ಬಿಡಾರದಲ್ಲಿ ವಿಶೇಷ ಕಾರ್ಯಕ್ರಮ

KARNATAKA NEWS/ ONLINE / Malenadu today/ Jun 5, 2023 SHIVAMOGGA NEWS

ಸಕ್ರೆಬೈಲ್ ಆನೆ ಬಿಡಾರ (sakrebylu elephant camp) ನ ಮೂರು ಆನೆಗಳಿಗೆ ಇವತ್ತು ವಿಶ್ವ ಪರಿಸರ ದಿನಾಚರಣೆಯ ಹಿನ್ನೆಲೆಯಲ್ಲಿ ನಾಮಕರಣ ಮಾಡಲಾಯ್ತು. ಕೃಷ್ಣ ಹಾಗೂ ಅಭಿಮನ್ಯು ಮತ್ತು ಧೃವ ಎಂಬ ಹೆಸರುಗಳನ್ನು ಆನೆಗಳಿಗೆ ಇಡಲಾಯ್ತು. ಮಾಜಿ ಸಚಿವ ಆರಗ ಜ್ಞಾನೇಂದ್ರ  ರವರ ಸಮ್ಮುಖದಲ್ಲಿ ಅಧಿಕಾರಿಗಳು ಆನೆಗಳಿಗೆ ಹೆಸರಿಟ್ಟರು. 

ಚಿಕ್ಕಮಗಳೂರಿನಲ್ಲಿ ಸೆರೆಸಿಕ್ಕ ಆನೆಗೆ ಕೃಷ್ಣ ಎಂದು ಹೆಸರು

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಭಾಗದಲ್ಲಿ ಇನ್ನಿಲ್ಲದ ಕಾಟ ಕೊಟ್ಟು ಸೆರೆಯಾದ ಆನೆಯನ್ನು ಸಕ್ರೆಬೈಲ್ ಆನೆ ಬಿಡಾರದಲ್ಲಿ ಪಳಗಿಸಲಾಗಿದೆ. ಈ ಆನೆಗೆ ಕೃಷ್ಣ ಎಂದು ಹೆಸರಿಡಲಾಗಿದೆ. ಕಾಫಿತೋಟಗಳಲ್ಲಿ ಇನ್ನಿಲ್ಲದ ಹಾನಿ ಮಾಡುತ್ತಿದ್ದ ಈ ಆನೆ ಇದೀಗ ಸೈಲೆಂಟ್ ಆಗಿದ್ದು, ಪ್ರವಾಸಿಗರ ಎದುರು ಸಹ ಕಾಣಿಸಿಕೊಳ್ಳುತ್ತಿದೆ.  

BREAKING / ಕುಂತಿ ಪುತ್ರನ ಜನನ/ ಸಕ್ರೆಬೈಲ್ ಬಿಡಾರದಲ್ಲಿ ಸಂತಸ/…

ಕುಂತಿ ಮಗನಿಗೆ ಧೃವ ಎಂದು ಹೆಸರು

ಸಕ್ರೆಬೈಲ್ ಆನೆ ಬಿಡಾರದ ಹೆಮ್ಮೆಯ ಆನೆ ಎಂದರೇ ಕುಂತಿ ಆನೆ, ಬಿಡಾರದಲ್ಲಿ ಸೀನಿಯರ್ ಆನೆ  ಕಳೆದ ಡಿಸೆಂಬರ್​ನಲ್ಲಿ  ಮರಿ ಹಾಕಿತ್ತು. ಮುದ್ದು ಮುದ್ಧಾದ ಈ  ಮರಿಯಾನೆಯ ತುಂಟಾಟ ಇಡೀ ಸಕ್ರೆಬೈಲ್ ಬಿಡಾರಕ್ಕೆ ಹೊಸ ಕಳೆ ತಂದಿದೆ.  ಹಾಗಾಗಿ ಮರಿಯಾನೆ ಧೃವ ಎಂದು ಹೆಸರಿಡಲಾಗಿದೆ. 

ನರಹಂತಕನಿಗೆ ಅಭಿಮನ್ಯು!

ಇನ್ನೂ ಡಾಕ್ಟರ್ ವಿನಯ್​ ಮೇಲೆ ದಾಳಿ ನಡೆಸಿದ್ದ  ಆನೆಯನ್ನು ಸಹ ಸಕ್ರೆಬೈಲ್​ ಬಿಡಾರದ ಕ್ರಾಲ್​ ನಲ್ಲಿ ಇರಿಸಲಾಗಿದ್ದು, ಅದನ್ನು ಪಳಗಿಸಲಾಗುತ್ತಿದೆ. ಚನ್ನಗಿರಿಯಲ್ಲಿ ಓರ್ವ ಮಹಿಳೆಯನ್ನು ಬಲಿ ಪಡೆದಿದ್ದ ಈ ಆನೆಗೂ ಇವತ್ತು ವಿಶ್ವಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಹೆಸರನ್ನ ಇಡಲಾಗಿದೆ. ಅಭಿಮನ್ಯು ಎಂಧು ಹೆಸರಿಟ್ಟಿದ್ದು, ಆನೆಯು ಇನ್ನಷ್ಟು ಪಳಗಬೇಕಿದೆ. ಸದ್ಯ ಒಟ್ಟು ಸಕ್ರೆಬೈಲ್​ ಆನೆ ಬಿಡಾರದಲ್ಲಿ 20 ಆನೆಗಳಿದ್ದು, ಅವುಗಳ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸಲಾಗುತ್ತಿದೆ.