ಕೆಂಡ ತುಳಿಯುವ ವೇಳೆ ಎಡವಿದರೂ ದೇವಿಯನ್ನ ನೆಲಕ್ಕಿಳಿಸದೇ ಹೊತ್ತು ಸಾಗಿದ ಭಕ್ತರು ! ವೈರಲ್‌ ವಿಡಿಯೋ

The devotees stumbled while trampling on the fire but did not bring the goddess to the ground. Viral video

ಕೆಂಡ ತುಳಿಯುವ ವೇಳೆ ಎಡವಿದರೂ ದೇವಿಯನ್ನ ನೆಲಕ್ಕಿಳಿಸದೇ ಹೊತ್ತು ಸಾಗಿದ ಭಕ್ತರು ! ವೈರಲ್‌ ವಿಡಿಯೋ
doddamma jaladurgama festival shivamogga

SHIVAMOGGA | MALENADUTODAY NEWS | May 24, 2024  ಮಲೆನಾಡು ಟುಡೆ

 ಶಿವಮೊಗ್ಗ ನಗರದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ದೊಡ್ಡಮ್ಮ ಜಲದುರ್ಗಮ್ಮ ಜಾತ್ರೆ ವಿಶೇಷ ಹಾಗೂ ಸಂಭ್ರಮ ಸಡಗರದಿಂದ ಯಶಸ್ವಿಯಾಗಿ ನಡೆದಿದೆ. ಈ ನಡುವೆ ಜಾತ್ರೆಯ ಕೆಂಡೋತ್ಸವದ ಸಂದರ್ಭದಲ್ಲಿ ನಡೆದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.



 ಅಮ್ಮನ ಉತ್ಸವ ಮೂರ್ತಿ ಇರುವ ಪಲ್ಲಕಿಯನ್ನ ಹೊತ್ತ ಭಕ್ತರು ಕೆಂಡ ದಾಟಿಸುವಾಗ, ಎಡವಿದರೂ ಸಹ ಮೂರ್ತಿಯನ್ನ ನೆಲಕ್ಕೆ ಬೀಳದಂತೆ ತಡೆದು ಮುಂದಕ್ಕೆ ಸಾಗಿದ ದೃಶ್ಯ ವಿಡಿಯೋದಲ್ಲಿ ರೆಕಾರ್ಡ್‌ ಆಗಿದೆ. 

 

ಕೆಂಡೋತ್ಸವದ ಸಂದರ್ಭದಲ್ಲಿ ಅಮ್ಮನ ಮೂರ್ತಿಯ ಪಲ್ಲಕ್ಕಿಗೆ ಹೆಗಲು ಕೊಟ್ಟ ಭಕ್ತರು ಶಾಸ್ತ್ರೋಕ್ತವಾಗಿ ಕೆಂಡ ಹಾಯುತ್ತಾರೆ. ದೇವರ ಕೆಂಡ ಹಾಯಿಸುವ ಇಂತಹ ಕ್ಷಣದಲ್ಲಿ ಕೆಲವು ವಿಶೇಷತೆಗಳು ಕಾಣಸಿಗುತ್ತದೆ. 

ಅಂತಹ ಘಟನೆಯೊಂದದು ಕೆಂಡೋತ್ಸವದ ಸಂದರ್ಭದಲ್ಲಿ ನಡೆದಿದೆ. ಭಕ್ತರು ಕೆಂಡ ಹಾಯುಲು ಮುಂದೆ ಬರುತ್ತಲೇ ಪಲ್ಲಕ್ಕಿ ಸಾಗುವ ವೇಗ ಹೆಚ್ಚಾಗಿದೆ. ಕೆಂಡ ತುಳಿದು ಮುಂದಕ್ಕೆ ಸಾಗುವಾಗ ಒಂದು ಬದಿಯಲ್ಲಿ ಮುಂದೆ ಹೆಗಲು ಕೊಟ್ಟಿದ್ದ ಭಕ್ತರೊಬ್ಬರು ಮುಗ್ಗರಿಸುತ್ತಾರೆ. 

ಅವರ ಬಟ್ಟೆಗೆ ಕೆಂಡ ತಾಗುತ್ತದೆ. ಇನ್ನೊಂದೆಡೆ ಪಲ್ಲಕ್ಕಿ ಒಂದು ಕಡೆಗೆ ವಾಲುತ್ತದೆ. ಅಷ್ಟರಲ್ಲಿ ಅಲ್ಲಿದ್ದ ಭಕ್ತರೆಲ್ಲರು ಕೆಂಡದ ಮೇಲೆ ಕಾಲಿಟ್ಟು ಪಲ್ಲಕಿಗೆ ಬೆನ್ನುಕೊಟ್ಟು ಉತ್ಸವ ಮೂರ್ತಿ ಕೆಳಕ್ಕಿಳಿಯದಂತೆ ತಡೆಯುತ್ತಾರೆ. ಆ ಬಳಿಕ ಮತ್ತೆ ಉತ್ಸವ ಮುಂದಕ್ಕೆ ಸಾಗುತ್ತದೆ. ಕೆಲವು ಕ್ಷಣದಲ್ಲಿ ನಡೆದ ದೃಶ್ಯ ಸೋಶಿಯಲ್‌ ಮಿಡಿಯಾಗಳಲ್ಲಿ ಹರಿದಾಡುತ್ತಿದೆ.