SHIVAMOGGA | Dec 12, 2023 | ಶಿವಮೊಗ್ಗ ನಗರ ದಲ್ಲಿ ಸ್ಮಾರ್ಟ್ ಸಿಟಿ ಮೂಲಕ ಐಟಿಎಂಎಸ್ ಅಂದರೆ ಇಂಟಿಗ್ರೆಟೆಡ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ ನ್ನ ಅಳವಡಿಸಿರುವುದು ಗೊತ್ತೆ ಇದೆ. ಈ ವ್ಯವಸ್ಥೆಯು ನಿರ್ದಿಷ್ಟ ಟ್ರಾಫಿಕ್ ಸಿಗ್ನಲ್ಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಕ್ಯಾಮರಾ ಕಣ್ಣಿಟ್ಟು, ಅವರ ಮನೆ ಬಾಗಿಲಿಗೆ ದಂಡದ ನೋಟಿಸ್ ಕೊಡುವ ಕೆಲಸ ಮಾಡುತ್ತದೆ.
ಇದೀಗ ವಿಷಯ ಏನೇಂದರೆ ಈ ಸಿಸ್ಟಂನ ಮೂಲಕ ಮೂರು ತಿಂಗಳಿನಲ್ಲಿ ಬರೋಬ್ಬರಿ 70 ಸಾವಿರ ಮಂದಿಗೆ ದಂಡ ವಿಧಿಸಲಾಗಿದ್ದು ಬರೋಬ್ಬರಿ ಐದು ಕೋಟಿ ರೂಪಾಯಿ ಫೈನ್ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ರಾಜ್ಯಮಟ್ಟದ ಮಾದ್ಯಮವೊಂದು ವರದಿ ಮಾಡಿದೆ.
ಹೆಲ್ಮೆಟ್ ಹಾಕದೆ ಬೈಕ್ ಓಡಿಸಿದ ಪ್ರಕರಣ ಹಾಗೂ ಡ್ರಂಕ್ ಆ್ಯಂಡ್ ಡ್ರೈವ್ ಕೇಸ್, ಓವರ್ ಸ್ಪೀಡ್ ಸೇರಿದಂತೆ ಮೊಬೈಲ್ ನಲ್ಲಿ ಮಾತನಾಡ್ತಾ ವಾಹನ ಚಲಾಯಿಸಿದ ಪ್ರಕರಣಗಳ ಸಂಬಂಧ ಹೆಚ್ಚು ಕೇಸ್ಗಳನ್ನ ದಾಖಲಿಸಲಾಗಿದೆ. ಅಡ್ವಾನ್ಸ್ ಸಿಸ್ಟಂನ ಮೂಲಕ ವಾಹನ ಸವಾರರ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಫೋಟೋಗಳನ್ನ ಕ್ಲಿಕ್ಕಿಸಿ ಅವರ ವೆಹಿಕಲ್ ದಾಖಲೆಯನ್ನ ಪರಿಶೀಲಿಸಿ, ವಾಹನ ಸವಾರರ ಮೊಬೈಲ್ಗೆ ದಂಡದ ನೋಟಿಸ್ ನೋಡಲಾಗುತ್ತಿದೆ. ಮತ್ತು ಮನೆ ಬಾಗಿಲಿಗೆ ಫೈನ್ ನೋಟಿಸ್ ಕಳುಹಿಸಲಾಗುತ್ತಿದೆ.
ಇನ್ನೂ ಲಭ್ಯ ಮಾಹಿತಿ ಪ್ರಕಾರ, ಕಳೆದ ಮೂರು ತಿಂಗಳಿನಲ್ಲಿ ಸಿಗ್ನಲ್ ಜಂಪ್ ಪ್ರಕರಣ ಸಂಬಂಧವೇ ಬರೋಬ್ಬರಿ 4.33 ಕೋಟಿ ರೂಪಾಯಿ ದಂಡ ವಿಧಿಸಲಾಗಿದ್ದು, 60 ಸಾವಿರ ಪ್ರಕರಣಗಳು ಸಿಗ್ನಲ್ ಜಂಪ್ ಕುರಿತಾಗಿಯೇ ದಾಖಲಾಗಿದೆ.
ಟ್ರಾಫಿಕ್ ಫೈನ್ಲ್ಲಿ ಹಲವು ವಿಷಯಗಳಿಗೆ 500 ರೂಪಾಯಿ ದಂಡ ವಿಧಿಸಲಾಗುತ್ತಿದ್ದು ಟ್ರಾಫಿಕ್ ಸಿಗ್ನಲ್ ಉಲ್ಲಂಘನೆಗೆ ಮುಖ್ಯವಾಗಿ ಫೈನ್ ಹಾಕಲಾಗುತ್ತದೆ. ಇದಷ್ಟೆ ಅಲ್ಲದೆ, ನಂಬರ್ ಪ್ಲೇಟ್ ಇಲ್ಲದಿರುವುದಕ್ಕೆ, ಒನ್ ವೇ, ರಾಂಗ್ ಸೈಡ್ ನಲ್ಲಿ ಸಂಚರಿಸಿದ್ದಕ್ಕೆ ಹಾಗೂ ಸೀಟ್ ಬೆಲ್ಟ್ ಹಾಕದೇ ವಾಹನ ಚಲಾಯಿಸಿದರೇ 500 ರೂಪಾಯಿ ಫೈನ್ ಬೀಳುತ್ತದೆ.
ಡಿಎಲ್, ಇನ್ಸುರೆನ್ಸ್ ತ್ರಿಬ್ಬಲ್ ರೈಡ್ ಇತ್ಯಾದಿಗಳಿಗೆ ಸಂಬಂಧಿಸಿದಂತೆ 1000 ರೂಪಾಯಿ ಫೈನ್ ಬೀಳುತ್ತದೆ. ಮುಖ್ಯವಾಗಿ ಗಾಡಿ ಚಲಾಯಿಸುತ್ತಾ ಫೋನ್ನಲ್ಲಿ ಮಾತನಾಡ್ತಿದ್ದರೇ 1500 ರೂಪಾಯಿ ಫೈನ್ ಬೀಳುತ್ತದೆ ಹೀಗೆ 500 ರೂಪಾಯಿಯಿಂದ ಹಿಡಿದು 10 ಸಾವಿರ ರೂಪಾಯಿಯವರೆಗೂ ಫೈನ್ ಹಾಕಬಹುದಾಗಿದೆ. ಅಪ್ರಾಪ್ತ ವಯಸ್ಸಿನವರಿಗೆ ಗಾಡಿಕೊಟ್ಟರೇ 25 ಸಾವಿರ ರೂಪಾಯಿವರೆಗೂ ಪೋಷಕರಿಗೆ ದಂಡ ವಿಧಿಸಲಾಗುತ್ತದೆ
