ಪೊಲೀಸ್ ಪ್ರಕಟಣೆ : ಇವತ್ತಿನಿಂದ ITMS ಫೈನ್ ಜಾರಿ! ಕಣ್ಣಿಗೆ ಕಾಣುವ ಸಂಚಾರ ನಿಯಮ ಉಲ್ಲಂಘನೆಯಲ್ಲಿ ಯಾವುದಕ್ಕೆ ಎಷ್ಟಿದೆ ಗೊತ್ತಾ ದಂಡ!?

The system of levying traffic penalty through ITMS will be implemented in Shivamogga city from today , ITMS ಮೂಲಕ ಟ್ರಾಫಿಕ್​ ಫೈನ್ ವಿಧಿಸುವ ವ್ಯವಸ್ಥೆಯು ಶಿವಮೊಗ್ಗ ನಗರದಲ್ಲಿ ಇವತ್ತಿನಿಂದ ಜಾರಿಯಾಗಲಿದೆ

ಪೊಲೀಸ್ ಪ್ರಕಟಣೆ : ಇವತ್ತಿನಿಂದ  ITMS ಫೈನ್ ಜಾರಿ! ಕಣ್ಣಿಗೆ ಕಾಣುವ ಸಂಚಾರ ನಿಯಮ ಉಲ್ಲಂಘನೆಯಲ್ಲಿ ಯಾವುದಕ್ಕೆ  ಎಷ್ಟಿದೆ ಗೊತ್ತಾ ದಂಡ!?

KARNATAKA NEWS/ ONLINE / Malenadu today/ Aug 28, 2023 SHIVAMOGGA NEWS 

ಶಿವಮೊಗ್ಗ ನಗರದಲ್ಲಿ ಇಂದಿನಿಂದ  ಸ್ಮಾರ್ಟ್‌ಸಿಟಿಯ  ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ ಜಾರಿಯಾಗುತ್ತಿದ್ದು, ಪೊಲೀಸ್ ಇಲಾಖೆ ಸ್ಮಾರ್ಟ್​ ವ್ಯವಸ್ಥೆಯನ್ನು ಬಳಸಿಕೊಂಡು ಟ್ರಾಫಿಕ್ ಫೈನ್ ವಿಧಿಸಲು ಮುಂದಾಗಿದೆ. ಮೇಲಾಗಿ ಈ ಸಂಬಂಧ ಪೊಲೀಸ್ ಪ್ರಕಟಣೆಯನ್ನು ಸಹ ಹೊರಡಿಸಿದೆ. 

 

ಪ್ರಕಟಣೆಯಲ್ಲಿ ಏನಿದೆ

ಶಿವಮೊಗ್ಗ ನಗರದಲ್ಲಿ ಸುಗಮ ಮತ್ತು ಅಪಘಾತ ಮುಕ್ತ ಸಂಚಾರ ವ್ಯವಸ್ಥೆಯನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ Integrated Traffic Management System (ITMS) ನ ಅಡಿಯಲ್ಲಿ ಶಿವಮೊಗ್ಗ ನಗರದ ಪ್ರಮುಖ 13  ವೃತ್ತಗಳಲ್ಲಿ Adaptive Traffic Control System (ATCS) ಗಳನ್ನು 72 -Red Light Violation Detection (RLVD) ಕ್ಯಾಮರಾಗಳನ್ನು,  30 -Speed Violation Detection (SVD) ಕ್ಯಾಮರಾಗಳನ್ನು,  38 -Pan Tilt Zooming (PTZ) ಕ್ಯಾಮರಾಗಳನ್ನು,  08 -Average Speed Violation Detection (ASVD) ಕ್ಯಾಮರಾಗಳನ್ನು,  10 -Smart Pole 360* Panoramic ಕ್ಯಾಮರಾಗಳನ್ನು, 44 -Automatic Number Plate Recognition (ANPR) ಕ್ಯಾಮರಾಗಳನ್ನು ಅಳವಡಿಸಲಾಗಿದೆ.  

 

ಸದರಿ ಕ್ಯಾಮೆರಾಗಳು, ವಾಹನ ಸವಾರರು Without Helmet, Triple Riding, Mobile Riding, One Way, No Entry, No Parking, Signal Jump, Over Speed ಮುಂತಾದ ಕಣ್ಣಿಗೆ ಕಾಣುವ  ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದಾಗ ಅಂತಹ ವಾಹನಗಳ ಫೊಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿ ಕೂಡಲೇ Command and Control Center ಗೆ ಕಳುಹಿಸಲಿದ್ದು, ಅವುಗಳನ್ನು ಪರಿಶೀಲಿಸಿ  ದಿನಾಂಕಃ 28-08-2023  ರಿಂದ ITMS ತಂತ್ರಾಂಶದ ಸಹಾಯದಿಂದ ನೋಟೀಸ್ ಗಳನ್ನು SMS /  ಅಂಚೆ ಮುಖಾಂತರ ವಾಹನ ಮಾಲೀಕರಿಗೆ/ಸವಾರರಿಗೆ ನೋಟೀಸ್ ಗಳನ್ನು ಕಳುಹಿಸಲಾಗುತ್ತದೆ. ಆದ್ದರಿಂದ ವಾಹನ ಸವಾರರು ಸಂಚಾರ ನಿಯಮವನ್ನು ಉಲ್ಲಂಘನೆ ಮಾಡದೆ, ಕಡ್ಡಾಯವಾಗಿ ಸಂಚಾರ  ನಿಯಮಗಳನ್ನು ಪಾಲನೆ ಮಾಡಿ ವಾಹನ ಚಲಾಯಿಸುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಯಾವುದಕ್ಕೆ ಎಷ್ಟೆಷ್ಟು ಫೈನ್​!

ಟ್ರಾಫಿಕ್​ ಫೈನ್​ಲ್ಲಿ ಹಲವು ವಿಷಯಗಳಿಗೆ 500 ರೂಪಾಯಿ ದಂಡ ವಿಧಿಸಲಾಗುತ್ತಿದ್ದು ಟ್ರಾಫಿಕ್​ ಸಿಗ್ನಲ್​ ಉಲ್ಲಂಘನೆಗೆ ಮುಖ್ಯವಾಗಿ ಫೈನ್​ ಹಾಕಲಾಗುತ್ತದೆ. ಇದಷ್ಟೆ ಅಲ್ಲದೆ,  ನಂಬರ್ ಪ್ಲೇಟ್​ ಇಲ್ಲದಿರುವುದಕ್ಕೆ, ಒನ್​ ವೇ, ರಾಂಗ್​ ಸೈಡ್​ ನಲ್ಲಿ ಸಂಚರಿಸಿದ್ದಕ್ಕೆ  ಹಾಗೂ ಸೀಟ್​ ಬೆಲ್ಟ್​ ಹಾಕದೇ ವಾಹನ ಚಲಾಯಿಸಿದರೇ 500 ರೂಪಾಯಿ ಫೈನ್ ಬೀಳುತ್ತದೆ. 

 

ಡಿಎಲ್​, ಇನ್ಸುರೆನ್ಸ್  ತ್ರಿಬ್ಬಲ್​ ರೈಡ್​ ಇತ್ಯಾದಿಗಳಿಗೆ ಸಂಬಂಧಿಸಿದಂತೆ 1000 ರೂಪಾಯಿ ಫೈನ್​ ಬೀಳುತ್ತದೆ. ಮುಖ್ಯವಾಗಿ ಗಾಡಿ ಚಲಾಯಿಸುತ್ತಾ ಫೋನ್​ನಲ್ಲಿ ಮಾತನಾಡ್ತಿದ್ದರೇ 1500 ರೂಪಾಯಿ ಫೈನ್ ಬೀಳುತ್ತದೆ ಹೀಗೆ 500 ರೂಪಾಯಿಯಿಂದ ಹಿಡಿದು 10 ಸಾವಿರ ರೂಪಾಯಿಯವರೆಗೂ ಫೈನ್ ಹಾಕಬಹುದಾಗಿದೆ. ಅಪ್ರಾಪ್ತ ವಯಸ್ಸಿನವರಿಗೆ ಗಾಡಿಕೊಟ್ಟರೇ 25 ಸಾವಿರ ರೂಪಾಯಿವರೆಗೂ ಪೋಷಕರಿಗೆ ದಂಡ ವಿಧಿಸಲಾಗುತ್ತದೆ  


ಇನ್ನಷ್ಟು ಸುದ್ದಿಗಳು