ಕಾಂಗ್ರೆಸ್ ಸರ್ಕಾರದ ವಿರುದ್ಧ ಶಿವಮೊಗ್ಗದಲ್ಲಿ ಬಿಜೆಪಿ ಪ್ರತಿಭಟನೆ ! ಕಾರಣವೇನು?

BJP protests in Shimoga against Congress government What is the reason?

ಕಾಂಗ್ರೆಸ್ ಸರ್ಕಾರದ ವಿರುದ್ಧ ಶಿವಮೊಗ್ಗದಲ್ಲಿ ಬಿಜೆಪಿ ಪ್ರತಿಭಟನೆ ! ಕಾರಣವೇನು?

KARNATAKA NEWS/ ONLINE / Malenadu today/ Jun 5, 2023 SHIVAMOGGA NEWS

ರಾಜ್ಯ  ಸರ್ಕಾರ ಗೃಹಬಳಕೆಯ ವಿದ್ಯುತ್‌ ದರ ವನ್ನು ಏರಿಕೆ ಮಾಡಿರುವುದರ ವಿರುದ್ಧ ಶಿವಮೊಗ್ಗ ಜಿಲ್ಲಾ ಬಿಜೆಪಿ   ಇವತ್ತು ಖಾಸಗಿ ಬಸ್​ ನಿಲ್ದಾಣದ ಬಳಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.  

200 ಯೂನಿಟ್ ಫ್ರೀ ವಿದ್ಯುತ್ ಕೊಡ್ತೇವೆ ಎಂದು ಕಾಂಗ್ರೆಸ್ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಕನಿಷ್ಟ ದರವನ್ನು 125 ರೂ. ನಿಂದ 200 ರೂ ಗೆ ಹೆಚ್ಚಿಸಿದೆ. ರೈತ ಹಾಗೂ ಜನರಿಗೆ ಈ ಮೂಲಕ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡ್ತಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ರು. 

ರೈತರಿಗೆ ಬಿಜೆಪಿ ಸರ್ಕಾರ ನೀಡುತ್ತಿದ್ದ ಹಾಲಿನ ರೂ. ಪ್ರೋತ್ಸಾಹಧನವನ್ನು 15ರೂ ಕಡಿತಗೊಳಿಸು ವುದಾಗಿ ಸಿಎಂ ಹೇಳಿದ್ದಾರೆ  ತೀವ್ರ ಪ್ರತಿಭಟನೆಯ ನಂತರ ಈಗ ಹಿಂದೆ ಸರಿದಿದ್ದಾರೆ. ಜನವಿರೋಧಿ ನೀತಿ ಯನ್ನು ಕಾಂಗ್ರೆಸ್‌ ಮುಂದುವರಿಸಿದರೆ ವಿರೋಧ ಪಕ್ಷವಾಗಿ ಬಿಜೆಪಿ ಸುಮ್ಮನೆ ಕೂರುವುದಿಲ್ಲ. ಕಾಂಗ್ರೆಸ್‌ ಹುನ್ನಾರವನ್ನು ರಾಜ್ಯದ ಬಡವರು ಅರ್ಥ ಮಾಡಿಕೊ೦ಡಿದ್ದಾರ ಎಂದು ಜಿಲ್ಲಾಧ್ಯಕ್ಷ ಮೇಘರಾಜ್ ಹೇಳಿದ್ಧಾರೆ. 

ಇನ್ನೂ ಇದೇ ವೇಳೆ ಮಾತನಾಡಿದ ಶಾಸಕ ಎಸ್‌.ಎನ್‌. ಚನ್ನಬಸಪ್ಪ ಇಷ್ಟು ಬೇಗ ಸರ್ಕಾರದ ವಿರುದ್ಧ ಹೋರಾಟ ಮಾಡುವ ಪರಿಸ್ಥಿತಿ ಬರುತ್ತದೆ ಅಂದುಕೊಂಡಿರಲಿಲ್ಲ. ಒ೦ದೆಡೆ ಉಚಿತ ಎನ್ನುವುದು ಇನ್ನೊಂದೆಡ ಏರಿಕೆಮಾಡುವುದು. ಇದು ಕಾಂಗ್ರೆಸ್‌ನ ನೀತಿ ಎಂದು ವ್ಯಂಗ್ಯವಾಡಿದ್ರು. 

ಗೋಹತ್ಯೆ ನಿಷೇಧ ಕಾನೂನನ್ನು ವಾಪಾಸು ಪಡೆಯಲು ಹೊರಟಿದ್ದೀರಿ. ಈ ಕಾನೂನು ಮುಟ್ಟಲು ಹೋದರೆ ರಾಜ್ಯದ ಜನತೆ ಸುಮ್ಮನಿರುವುದಿಲ್ಲ ಎಂದ ಅವರು, ಚಕ್ರವರ್ತಿ ಸೂಲಿಬೆಲೆ ಒಬ್ಬ ರಾಷ್ಟ್ರಭಕ್ತ

ರಾಗಿದ್ದು, ಅವರನ್ನು ಬಂಧಿಸುವುದಾಗಿ ನಿಮ್ಮ ಸಚಿವರೊಬ್ಬರು ಹೇಳುತ್ತಾರೆ. ತಾಕತ್ತಿದ್ದರೆ ಬಂಧಿಸಿ ನೋಡಿ, ಲಕ್ಷಾಂತರ ಚಕ್ರವರ್ತಿ ಸೂಲಿಬೆಲೆ ರಾಜ್ಯದಲ್ಲಿ ಇದ್ದಾರ. ನಿಮ್ಮ ಜೈಲುಗಳು ಸಾಕಾಗುವುದಿಲ್ಲ. ಎಂದು ಆಕ್ರೋಶ ಹೊರಹಾಕಿದ್ರು 

ದಾವಣಗೆರೆ ಆನೆ ಅಭಿಮನ್ಯು! ಚಿಕ್ಕಮಗಳೂರು ಆನೆ ಕೃಷ್ಣ! ಕುಂತಿ ಪುತ್ರ ಧೃವ ! ಸಕ್ರೆಬೈಲ್​ ಆನೆ ಬಿಡಾರದಲ್ಲಿ ವಿಶೇಷ ಕಾರ್ಯಕ್ರಮ

ಸಕ್ರೆಬೈಲ್ ಆನೆ ಬಿಡಾರ (sakrebylu elephant camp) ನ ಮೂರು ಆನೆಗಳಿಗೆ ಇವತ್ತು ವಿಶ್ವ ಪರಿಸರ ದಿನಾಚರಣೆಯ ಹಿನ್ನೆಲೆಯಲ್ಲಿ ನಾಮಕರಣ ಮಾಡಲಾಯ್ತು. ಕೃಷ್ಣ ಹಾಗೂ ಅಭಿಮನ್ಯು ಮತ್ತು ಧೃವ ಎಂಬ ಹೆಸರುಗಳನ್ನು ಆನೆಗಳಿಗೆ ಇಡಲಾಯ್ತು. ಮಾಜಿ ಸಚಿವ ಆರಗ ಜ್ಞಾನೇಂದ್ರ  ರವರ ಸಮ್ಮುಖದಲ್ಲಿ ಅಧಿಕಾರಿಗಳು ಆನೆಗಳಿಗೆ ಹೆಸರಿಟ್ಟರು. 

ಚಿಕ್ಕಮಗಳೂರಿನಲ್ಲಿ ಸೆರೆಸಿಕ್ಕ ಆನೆಗೆ ಕೃಷ್ಣ ಎಂದು ಹೆಸರು

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಭಾಗದಲ್ಲಿ ಇನ್ನಿಲ್ಲದ ಕಾಟ ಕೊಟ್ಟು ಸೆರೆಯಾದ ಆನೆಯನ್ನು ಸಕ್ರೆಬೈಲ್ ಆನೆ ಬಿಡಾರದಲ್ಲಿ ಪಳಗಿಸಲಾಗಿದೆ. ಈ ಆನೆಗೆ ಕೃಷ್ಣ ಎಂದು ಹೆಸರಿಡಲಾಗಿದೆ. ಕಾಫಿತೋಟಗಳಲ್ಲಿ ಇನ್ನಿಲ್ಲದ ಹಾನಿ ಮಾಡುತ್ತಿದ್ದ ಈ ಆನೆ ಇದೀಗ ಸೈಲೆಂಟ್ ಆಗಿದ್ದು, ಪ್ರವಾಸಿಗರ ಎದುರು ಸಹ ಕಾಣಿಸಿಕೊಳ್ಳುತ್ತಿದೆ.  

BREAKING / ಕುಂತಿ ಪುತ್ರನ ಜನನ/ ಸಕ್ರೆಬೈಲ್ ಬಿಡಾರದಲ್ಲಿ ಸಂತಸ/…

ಕುಂತಿ ಮಗನಿಗೆ ಧೃವ ಎಂದು ಹೆಸರು

ಸಕ್ರೆಬೈಲ್ ಆನೆ ಬಿಡಾರದ ಹೆಮ್ಮೆಯ ಆನೆ ಎಂದರೇ ಕುಂತಿ ಆನೆ, ಬಿಡಾರದಲ್ಲಿ ಸೀನಿಯರ್ ಆನೆ  ಕಳೆದ ಡಿಸೆಂಬರ್​ನಲ್ಲಿ  ಮರಿ ಹಾಕಿತ್ತು. ಮುದ್ದು ಮುದ್ಧಾದ ಈ  ಮರಿಯಾನೆಯ ತುಂಟಾಟ ಇಡೀ ಸಕ್ರೆಬೈಲ್ ಬಿಡಾರಕ್ಕೆ ಹೊಸ ಕಳೆ ತಂದಿದೆ.  ಹಾಗಾಗಿ ಮರಿಯಾನೆ ಧೃವ ಎಂದು ಹೆಸರಿಡಲಾಗಿದೆ. 

ನರಹಂತಕನಿಗೆ ಅಭಿಮನ್ಯು!

ಇನ್ನೂ ಡಾಕ್ಟರ್ ವಿನಯ್​ ಮೇಲೆ ದಾಳಿ ನಡೆಸಿದ್ದ  ಆನೆಯನ್ನು ಸಹ ಸಕ್ರೆಬೈಲ್​ ಬಿಡಾರದ ಕ್ರಾಲ್​ ನಲ್ಲಿ ಇರಿಸಲಾಗಿದ್ದು, ಅದನ್ನು ಪಳಗಿಸಲಾಗುತ್ತಿದೆ. ಚನ್ನಗಿರಿಯಲ್ಲಿ ಓರ್ವ ಮಹಿಳೆಯನ್ನು ಬಲಿ ಪಡೆದಿದ್ದ ಈ ಆನೆಗೂ ಇವತ್ತು ವಿಶ್ವಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಹೆಸರನ್ನ ಇಡಲಾಗಿದೆ. ಅಭಿಮನ್ಯು ಎಂಧು ಹೆಸರಿಟ್ಟಿದ್ದು, ಆನೆಯು ಇನ್ನಷ್ಟು ಪಳಗಬೇಕಿದೆ. ಸದ್ಯ ಒಟ್ಟು ಸಕ್ರೆಬೈಲ್​ ಆನೆ ಬಿಡಾರದಲ್ಲಿ 20 ಆನೆಗಳಿದ್ದು, ಅವುಗಳ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸಲಾಗುತ್ತಿದೆ.