ಅರವಿಂದ್ ಕೇಜ್ರಿವಾಲ್ ಪರವಾಗಿ ಶಿವಮೊಗ್ಗದಲ್ಲಿ ಪ್ರತಿಭಟನೆಗೆ ಸಿದ್ಧತೆ ! ವಿವರ ಇಲ್ಲಿದೆ
ಅರವಿಂದ್ ಕೇಜ್ರಿವಾಲ್ ಬಂಧನ, Arvind Kejriwal arrested

Shivamogga Mar 28, 2024 ಇದೇ ಮಾರ್ಚ್ 31ರಂದು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ಬಂದಿಸಿರುವುದನ್ನು ವಿರೋಧಿಸಿ ಜಿಲ್ಲಾ ಆಮ್ ಆದ್ಮಿ ಪಾರ್ಟಿ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಬೃಹತ್ ಪ್ರತಿಭಟನೆ ಕೈಗೊಂಡಿದೆ.
ಈ ಕುರಿತಾಗಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಜೀರ್ ಅಹಮದ್ ಆಮ್ ಆದ್ಮಿ ಪಕ್ಷದ ಸ್ಥಾಪಕರಾದ ಹಾಗೂ ದೆಹಲಿಯ ಮುಖ್ಯಮಂತ್ ಅರವಿಂದ್ ಕೇಜ್ರಿವಾಲ್ ಬಂಧನದ ಕುರಿತು ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು
ಸರ್ಕಾರದ ಜಾರಿ ನಿರ್ದೇಶನಾಲಯ (ಇ.ಡಿ.) ಹಾಗೂ ಸಿ.ಬಿ.ಐ ಕೇಂದ್ರದ ಕೈಗೊಂಬೆಯಾಗಿದ್ದು, ಅಕ್ರಮವಾಗಿ ಲೋಕಸಭೆಯ ಚುನಾವಣೆ ನಡೆಯುವ ಸಂದರ್ಭದಲ್ಲಿ ಬಿಜೆಪಿಗೆ ಹಿನ್ನಡೆ ಆಗುವುದೆಂದು ಆಮ್ ಆದ್ಮಿ ಪಕ್ಷದ ಸಾಲು ಸಾಲು ಪ್ರಮುಖ ನೇತಾರರನ್ನೆಲ್ಲಾ ಪ್ರಚಾರಕ್ಕೆ ಬರದಂತೆ ತಡೆದು ದೌರ್ಜನ್ಯದಿಂದ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಹಗರಣ ಇಲ್ಲದಿದ್ದರೂ ಲಿಕ್ಕರ್ ಹಗರಣದಲ್ಲಿ ಸಿಲುಕಿಸಿ ಬಂಧಿಸಿದ್ದಾರೆ.
ಅವರದ್ದೇ ಸರ್ಕಾರದ ಮಂತ್ರಿಗಳು ಸಾಕಷ್ಟು ಭ್ರಷ್ಟಾಚಾರಗಳಲ್ಲಿ ಮುಳುಗಿದ್ದರೂ ಅವರ ಮೇಲೆ ಯಾವುದೇ ರೀತಿ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದ ಮುಖಂಡರು, ಕೇಜ್ರಿವಾಲ್ ರವರು ದೆಹಲಿಯಲ್ಲಿ ಮಾಡಿರುವ ಅಭಿವೃದ್ಧಿಯನ್ನು ದೇಶವೇ ಮೆಚ್ಚಿ 4 ರಿಂದ 5 ರಾಜ್ಯಗಳಲ್ಲಿ ತಮ್ಮ ಛಾಪು ಮೂಡಿಸಿದೆ.
ಇದೇ ರೀತಿ ಪಂಜಾಬ್ ನಲ್ಲೂ ತಮ್ಮದೇ ಪಕ್ಷದ ಆಡಳಿತ ರೂಪಿಸಿರುತ್ತದೆ. ಇದನ್ನೆಲ್ಲಾ ಸಹಿಸದ ಕೇಂದ್ರ ಸರ್ಕಾರದ ಈ ಸರ್ವಾಧಿಕಾರಿ, ಸಂವಿಧಾನ ವಿರೋಧಿ ಧೋರಣೆಯ ವಿರುದ್ಧ ನಾಡಿನ ಹಿತಚಿಂತಕರು, ಬುದ್ದಿಜೀವಿಗಳು, ಪ್ರತಿಭಟನೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಜನರಿಗೆ ಕರೆಕೊಟ್ಟರು