112 ವಾಹನ ಡಿಕ್ಕಿ ಪಾದಚಾರಿ ಸಾವು! ಸಾಗರ ಗ್ರಾಮಾಂತರ ಸ್ಟೇಷನ್​ ವ್ಯಾಪ್ತಿಯಲ್ಲಿ ನಡೆದಿದ್ದೇನು?

112 vehicle collides with pedestrian killed! What happened in sagar rural station limits?

112 ವಾಹನ ಡಿಕ್ಕಿ ಪಾದಚಾರಿ ಸಾವು! ಸಾಗರ ಗ್ರಾಮಾಂತರ ಸ್ಟೇಷನ್​ ವ್ಯಾಪ್ತಿಯಲ್ಲಿ ನಡೆದಿದ್ದೇನು?

KARNATAKA NEWS/ ONLINE / Malenadu today/ Jul 2, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು, ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್ ವ್ಯಾಪ್ತಿ ಇಆರ್​ಎಸ್ಎಸ್​​ ವಾಹನ 112 ಡಿಕ್ಕಿಯಾಗಿ ಪಾದಚಾರಿಯೊಬ್ಬರು ಸಾವನ್ನಪ್ಪಿದ್ಧಾರೆ.  ಸಾಗರ ತಾಲೂಕಿನ ಗಾಳಿಪುರದ ಕಂಡಿಕಾ‌ಕ್ರಾಸ್ ಬಳಿ ಈ ಘಟನೆ ಸಂಭವಿಸಿದೆ. 

ಇಲ್ಲಿನ ನಿವಾಸಿ ನಾರಾಯಣಪ್ಪ ಎಂಬವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ 112 ಪೊಲೀಸರ ವಾಹನ ಡಿಕ್ಕಿಯಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಪೊಲೀಸರೇ ತಕ್ಷಣ ಆಸ್ಪತ್ರೆಗೆ ರವಾನಿಸಿದ್ಧಾರೆ. ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಅವರನ್ನು ಶಿಫ್ಟ್ ಮಅಡಲಾಗಿತ್ತು. ಆದರೆ ಅಷ್ಟರಲ್ಲಿ ಗಾಯಾಳು ನಾರಾಯಣಪ್ಪ ಸಾವನ್ನಪ್ಪಿದ್ದಾರೆ. ಇನ್ನೂ ಘಟನೆ ನಡೆದಿದ್ದೇಗೆ? ಕಾರಣವಾಗಿದ್ದೇನು? ಎಂಬಿತ್ಯಾದಿ ಮಾಹಿತಿ ಇನ್ನಷ್ಟೆ ಸಿಗಬೇಕಿದೆ. 


BIG BREAKING NEWS / ಶಿವಮೊಗ್ಗದಲ್ಲಿ ಮೂರು ದಿನ ಅಸಾಧಾರಣ ಭಾರೀ ಮಳೆ ! ಯಲ್ಲೋ, ಆರೆಂಜ್, ರೆಡ್ ಅಲರ್ಟ್ ಘೋಷಣೆ! ಪೂರ್ತಿ ವಿವರ ಇಲ್ಲಿದೆ!

ಮಲ್ನಾಡ್​ನಲ್ಲಿ ಮಳೆಯಿಲ್ಲ ಎಂಬ ಕೊರಗಿನ ನಡುವೆ ಹವಾಮಾನ ಇಲಾಖೆ ಬಣ್ಣ ಬಣ್ಣದ ಎಚ್ಚರಿಕೆಯ ಮುನ್ಸೂಚನೆಯನ್ನು ನೀಡಿದೆ. ಜುಲೈ 3 ರಿಂದ 5 ನೇ ತಾರೀಖಿನವರೆಗೂ ಶಿವಮೊಗ್ಗ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ ಐಎಂಡಿ ಬೆಂಗಳೂರು (IMd banglore) ವೆಬ್​ಸೈಟ್​ನಲ್ಲಿ ನೀಡಿರುವ ಪ್ರಕಟಣೆಯ ಪ್ರಕಾರ, 

4ನೇ ಜುಲೈ 2023 ರಂದು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಜುಲೈ 5, 2023 ರಂದು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳ ನಿರ್ಧಿಷ್ಟ ಸ್ಥಳಗಳಲ್ಲಿ ಭಾರಿಯಿಂದ ಅತಿ ಭಾರೀ ಒಮ್ಮೊಮ್ಮೆ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಇನ್ನೂ ಜುಲೈ ಮೂರರಂದು ಯಲ್ಲೋ ಅಲರ್ಟ್ ನೀಡಲಾಗಿದ್ದು, ಜುಲೈ ನಾಲ್ಕರಂದು ಆರೆಂಜ್ ಅಲರ್ಟ್ ನೀಡಲಾಗಿದ್ದು, ಜುಲೈ ಐದರಂದು ರೆಡ್​ ಅಲರ್ಟ್ ಘೋಷಿಸಲಾಗಿದೆ. ಐಸೋಲೇಟೆಡ್​ ಪ್ಲೇಸ್​ಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಖ್ಯವಾಗಿ ಜಿಲ್ಲಾವಾರು ವಾರ್ನಿಂಗ್​ ಪ್ರಕಟಣೆಯಲ್ಲಿ ಜುಲೈ 3 ರಂದು ಶಿವಮೊಗ್ಗ ಜಿಲ್ಲೆಯ ಅನೇಕ ಕಡೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ. ಜುಲೈ 4 ರಂದು ಜಿಲ್ಲೆ 75 ರಷ್ಟು ಕಡೆಗಳಲ್ಲಿ 115 ಮಿ.ಮೀ ನಿಂದ 204 ಮಿಲಿಮೀಟರ್​ನಷ್ಟು ಮಳೆಯಾಗುವ ಸಾಧ್ಯತೆಯನ್ನು ತಿಳಿಸಲಾಗಿದ್ದು ಆರೆಂಜ್ ಅಲರ್ಟ್ ತಿಳಿಸಲಾಗಿದೆ. ಇನ್ನೂ ಜುಲೈ 5 ಅಸಾಧಾರಣ ಭಾರೀ ಮಳೆ ಎಂದು ತಿಳಿಸಿರುವ ಹವಾಮಾನ ಇಲಾಖೆ 204 ಮಿಲೀಮೀಟರ್​ಗಳಿಗಿಂತಲೂ ಅಧಿಕ ಮಳೆಯಾಗಲಿದೆ ಎಂದು ತಿಳಿಸಿ ರೆಡ ಅಲರ್ಟ್ ಘೋಷಿಸಿದೆ. ನಿನ್ನೆ ಹೊರಡಿಸಿರುವ  ಪತ್ರಿಕಾ ಪ್ರಕಟಣೆಯಲ್ಲಿ ಚಿಕ್ಕಮಗಳೂರು ,ಚಾಮರಾಜನಗರ,ಹಾಸನ, ಮೈಸೂರು,ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ.