ಶಿವಮೊಗ್ಗದಲ್ಲಿ ಮಳೆಯ ಬಯಲಾಟ | ಲಿಂಗನಮಕ್ಕಿಗೆ 60 ಸಾವಿರ ಕ್ಯೂಸೆಕ್ಸ್‌ ನೀರು | 3 ತಾಲ್ಲೂಕುಗಳಲ್ಲಿ 100 MM ಮಳೆ | ಆತಂಕದ ರೆಕಾರ್ಡ್

Heavy rainfall in Shivamogga

ಶಿವಮೊಗ್ಗದಲ್ಲಿ ಮಳೆಯ ಬಯಲಾಟ | ಲಿಂಗನಮಕ್ಕಿಗೆ 60 ಸಾವಿರ ಕ್ಯೂಸೆಕ್ಸ್‌ ನೀರು | 3 ತಾಲ್ಲೂಕುಗಳಲ್ಲಿ 100 MM ಮಳೆ | ಆತಂಕದ ರೆಕಾರ್ಡ್
Heavy rainfall in Shivamogga

SHIVAMOGGA | MALENADUTODAY NEWS | Jul 4, 2024  ಮಲೆನಾಡು ಟುಡೆ   

ಶಿವಮೊಗ್ಗದಲ್ಲಿ ಮಳೆಯ ಬಯಲಾಟ ಆರಂಭವಾಗಿದೆ ನಿನ್ನೆ ಒಂದೇ ದಿನ ಶಿವಮೊಗ್ಗದ ಮೂರು ತಾಲ್ಲೂಕುಗಳಲ್ಲಿ ನೂರು ಮಿಲೀಮೀಟರ್‌ಗೂ ಅಧಿಕ ಮಳೆಯಾಗಿದೆ. ಮಾಸ್ತಿಕಟ್ಟೆಯಲ್ಲಿ 300 ಮಿಲಿ ಮೀಟರ್ ಮಳೆಯಾಗಿದ್ದು, ಮಾಣಿ 290, ಯಡೂರು 206 ಹುಲಿಕಲ್‌ನಲ್ಲಿ 267 ಮಿಲೀಮೀಟರ್‌ ಮಳೆಯಾಗಿದ್ದು ಲಿಂಗನಮಕ್ಕಿ ಬರೋಬ್ಬರಿ 60 ಸಾವಿ ಕ್ಯುಸೆಕ್ಸ್‌ ನೀರು ಹರಿದು ಬಂದಿದೆ.  24 ಗಂಟೆಯ ವಾಡಿಕೆ ಮಳೆಗಿಂತ  ಮೂರು ಪಟ್ಟು ಹೆಚ್ಚಿನ ಪ್ರಮಾಣದ ಮಳೆ ಶಿವಮೊಗ್ಗದಲ್ಲಾಗಿದೆ. 

ನಿನ್ನೆ ದಿನ ಹೊಸನಗದಲ್ಲಿ ಆಕಾಶವೇ ಕಳಚಿ ಬಿದ್ದಂತ ಸ್ವರೂಪದಲ್ಲಿ ಮಳೆಯಾಗಿದೆ. ಹಿಂದಿನ ಮಳೆಯನ್ನ ಕಂಡವರು ಇವತ್ತೇನಾಗುತ್ತೆ ಎಂದು ಹೇಳುತ್ತಿದ್ದರು. ಇನ್ನೂ ಸಾಗರದಲ್ಲಿ ವಿದ್ಯುತ್‌ ಕಂಬಗಳು ಮಳೆಯಿಂದ ರೋಡಿಗುರುಳಿದರೆ, ಇತ್ತ ತೀರ್ಥಹಳ್ಳಿಯಲ್ಲಿ ಮನೆಗಳು ಕುಸಿದಿರುವ ಬಗ್ಗೆ ವರದಿಯಾಗಿದೆ. 

ಶರಾವತಿ ಕಣಿವೆ ಜಲವಿದ್ಯುತ್ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು 192.80 ಮಿಲಿಮೀಟರ್ ಮಳೆಯಾಗುತ್ತಿದೆ. ಮಳೆಯಿಂದಾಗಿ ಲಿಂಗನಮಕ್ಕಿ ಜಲಾಶಯಕ್ಕೆ 60 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಗರಿಷ್ಠ 1819 ಅಡಿ ನೀರಿನ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯದಲ್ಲಿ ಪ್ರಸ್ಥುತ 1760.11 ಅಡಿ ನೀರು ಸಂಗ್ರಹಗೊಂಡಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಡ್ಯಾಂ ನಲ್ಲಿ 1741 ಅಡಿ ಕನಿಷ್ಠ ನೀರಿನ ಮಟ್ಟವಿತ್ತು.ಧಾರಕಾರ ಮಳೆಯಿಂದಾಗಿ ಶರಾವತಿ ನದಿಗೆ ಹರಿವಿನಲ್ಲಿ ಹೆಚ್ಚಳವಾಗಿದ್ದು, ಜೋಗ ಜಲಪಾತ ಮೈದುಂಬಿ ಹರಿಯುತ್ತಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ.

 ಮಾಣಿ ಯೋಜನಾ ಪ್ರದೇಶದಲ್ಲಿ ಮಳೆ ದಾಖಲೆ ಬರೆಯುತ್ತಿದೆ. ಮಾಣಿಯಲ್ಲಿ 290 ಮಿಲಿ ಮೀಟರ್ ಮಳೆಯಾದರೆ ಮಾಸ್ತಿಕಟ್ಟೆಯಲ್ಲಿ 300 ಮಿಲಿಮೀಟರ್ ಮಳೆಯಾಗಿ, ವರ್ಷದ ಮೊದಲ ದಾಖಲೆಯನ್ನುಬರೆದಿದೆ.ಮಳೆಗೆ ಹೆಸರಾಗಿರುವ ಹುಲಿಕಲ್ ನಲ್ಲಿ 267 ಮಿವಿ ಮೀಟರ್ ಮಳೆಯಾದರೆ, ಯಡೂರಿನಲ್ಲಿ 206 ಮಿಲಿಮೀಟರ್ ಮಳೆಯಾಗಿದೆ. ಗಾಜನೂರಿನ ತುಂಗಾ ಅಣೆಕಟ್ಟೆ ಭರ್ತಿಯಾಗಿದ್ದು, ತುಂಗಾ ನದಿಗೆ 39 ,800 ಕ್ಯೂಸೆಕ್ಸ್ ನೀರು ಹರಿಬಿಡಲಾಗಿದೆ.ಶಿ 



Heavy rainfall has been battering Shivamogga, with over 100 millimeters of rain recorded in three taluks in a single day. Mastikatte received 300 mm, Mani 290 mm, and Yadoru 206 mm of rainfall. HuliKal also experienced heavy rainfall, recording 267 mm.