ಮೆಗ್ಗಾನ್ ಆಸ್ಪತ್ರೆ ತುರ್ತು ಚಿಕಿತ್ಸಾ ಘಟಕದ ಎದುರು ಮಹಿಳೆಯ ಸಾವು! ಟೈಲ್ಸ್ ಮೇಲೆ ಪತ್ತೆಯಾದ ಶವ!

SHIVAMOGGA NEWS / Malenadu today/ Dec 1, 2023 | MALENADU TODAY | MALNAD NEWS 

SHIVAMOGGA |   ಅಪರಿಚಿತ ಮಹಿಳೆ ಸಾವು: ವಾರಸ್ಸುದಾರರ ಮಾಹಿತಿ ನೀಡಲು ಮನವಿ

ಮೆಗ್ಗಾನ್​ ಆಸ್ಪತ್ರೆಯ ಎದುರು ಅಪರಿಚಿತ ಮಹಿಳೆ ಸಾವು

ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಎದುರಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಎ.ಆರ್.ಟಿ ಸೆಂಟರ್ ವಿಭಾಗದ ಬಾಗಿಲಿನ ಹತ್ತಿರದಲ್ಲಿ ಕಟ್ಟಡ ನಿರ್ಮಾಣಕ್ಕೆಂದು ಸಂಗ್ರಹ ಮಾಡಿದ ಸಿಮೆಂಟ್ ಟೈಲ್ಸ್​ಗಳ ಮೇಲೆ ಸುಮಾರು 50 ರಿಂದ 55 ವರ್ಷ ವಯಸ್ಸಿನ  ಮಹಿಳೆ ಸಾವನ್ನಪ್ಪಿದ್ಧಾರೆ 

READ : ಸೀದಾ ಮನೆಗೆ ನುಗ್ಗಿದ ಕಾರು! ರಾಷ್ಟ್ರೀಯ ಹೆದ್ದಾರಿಯಲ್ಲಿ ಧರ್ಮಸ್ಥಳಕ್ಕೆ ಹೋಗ್ತಿರುವಾಗ ಘಟನೆ

ಆಕೆಯನ್ನು ಮೆಗ್ಗಾನ್ ಆಸ್ಪತ್ರೆ ಸಿಬ್ಬಂದಿಯವರ ಸಹಕಾರದಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ ಬಳಿಕ ವೈದ್ಯರು ಆಕೆ ಸಾವನ್ನಪ್ಪಿರುವುದನ್ನ ದೃಢೀಕರಿಸಿದ್ದಾರೆ.  ಮೃತ ದೇಹವನ್ನು ಮೆಗ್ಗಾನ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದು. ಮೃತದೇಹವೂ ಮೆಗ್ಗಾನ್ ಆಸ್ಪತ್ರೆ ಶವಾಗಾರದಲ್ಲಿಡಲಾಗಿದೆ.

ಮೃತರ ಗುರುತು ಪತ್ತೆಗೆ ಮನವಿ

ಮೃತಳು ಸುಮಾರು 05 ಅಡಿ 08 ಇಂಚು ಎತ್ತರ, ದುಂಡು ಮುಖ. ದೃಢವಾದ ಮೈಕಟ್ಟು ಹೊಂದಿದ್ದು ಮೃತಳ ತಲೆಯಲ್ಲಿ ಸುಮಾರು 10 ಇಂಚು ಉದ್ದದ ಕಪ್ಪು ಕೂದಲು ಇರುತ್ತದೆ. ಮೃತಳ ಮೈಮೇಲೆ  ಕೆಂಪು ಬಣ್ಣದ ಹಳದಿ ಹೂವಿನ ಚಿತ್ರವಿರುವ ನೈಟಿ ಹಾಗೂ ಹಳದಿ ಬಣ್ಣದ ಬ್ಲೌಸ್ ಇರುತ್ತದೆ.

ಮೃತಳ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ಸಂಖ್ಯೆ : 08182-261414 ಅಥವಾ 9611761255 ನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. 

 

Leave a Comment