ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಎದುರು ಏಕಾಂಗಿ ಪ್ರತಿಭಟನೆ ಕಾರಣವೇನು?

What was the reason for the lone protest in front of the office of the Chief Conservator of Forests, Shivamogga?

ಶಿವಮೊಗ್ಗ  ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಎದುರು ಏಕಾಂಗಿ ಪ್ರತಿಭಟನೆ ಕಾರಣವೇನು?

KARNATAKA NEWS/ ONLINE / Malenadu today/ May 31, 2023 SHIVAMOGGA NEWS

ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಶಿವಮೊಗ್ಗ ವೃತ್ತ ಕಚೇರಿಯ ಎದುರು ವ್ಯಕ್ತಿಯೊಬ್ಬರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ಪ್ರತಿಭಟನೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ಅವರು, ಕಾವಾಡಿಗೆ ಹುದ್ದೆಗೆ ತಮಗೆ ನೀಡಲಾಗಿಲ್ಲ ಎಂದು ದೂರಿದ್ದಾರೆ. 

ಆರೋಪವೇನು? 

ಹೆಚ್.ಶಿವಕುಮಾರ್ ಎಂಬವರು ಕಾವಾಡಿಗ ಹುದ್ದೆಗೆ 5 ಸಲ ಅರ್ಜಿ ಸಲ್ಲಿಸಿದ್ದರಂತೆ. ಐದು ಬಾರಿ ಸಂದರ್ಶನಕ್ಕೂ ಹಾಜರಾಗಿದ್ದಾರೆ. ಮೇಲಾಗಿ ಈ ಸಲ ಅವರನ್ನೇ ಆಯ್ಕೆ ಮಾಡಿಕೊಳ್ಳುವುದಾಗಿ ಹೇಳಿ ತಮ್ಮನ್ನ ಬಿಟ್ಟು ಬೇರೆಯವರನ್ನ ಹುದ್ದೆಗೆ ಆಯ್ಕೆ ಮಾಡಿಕೊಂಡಿದ್ಧಾರೆ ಎಂಬುದು ಪ್ರತಿಭಟನಕಾರರ ದೂರು. 

ಅವರು ಆರೋಪಿಸುವ ಪ್ರಕಾರ, ಕಾವಾಡಿಗ ಹುದ್ದೆಯ ತಾತ್ಕಾಲಿಕ ಪಟ್ಟಿಯಲ್ಲಿ ಅರ್ಹರಲ್ಲದ ವ್ಯಕ್ತಿಗಳನ್ನ ಆಯ್ಕೆ ಮಾಡಿಕೊಳ್ಳಲಾಗಿದೆ. ನಿಯಮಗಳನ್ನು ಮೀರಲಾಗಿದೆ ಎಂದು ಶಿವಕುಮಾರ್ ದೂರುತ್ತಿದ್ದಾರೆ. ಅಲ್ಲದೆ ತಮ್ಮನ್ನ ಪರಿಗಣಿಸದೇ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.  ಈ ಹಿನ್ನೆಲೆಯಲ್ಲಿ ಕಚೇರಿ ಎದುರು ಅವರು ಪ್ರತಿಭಟನೆ ನಡೆಸಿದ್ದಾರೆ. ಇಡೀ ದಿನ ಪ್ರತಿಭಟನೆ ನಡೆಸಿದ ಬಳಿಕ, ಅಧಿಕಾರಿಗಳು ಶಿವಕುಮಾರ್​ ವಿರುದ್ಧ ದೂರು ಸಲ್ಲಿಸುವುದಾಗಿ ಹೇಳಿದ್ದರಿಂದ ಪ್ರತಿಭಟನೆ ಹಿಂಪಡೆದಿದ್ಧಾರೆ ಎನ್ನಲಾಗಿದೆ.

ಮೆಸ್ಕಾಂ ಪ್ರಕಟಣೆ! ಜೂನ್ 2 ರಂದು ಹೊಸನಗರ ಪಟ್ಟಣ ಸೇರಿದಂತೆ , ತಾಲ್ಲೂಕಿನ ಪ್ರಮುಖ ಭಾಗಗಳಲ್ಲಿ ವಿದ್ಯುತ್ ಇರೋದಿಲ್ಲ! ಕಾರಣ? ಎಲ್ಲೆಲ್ಲಿ !? ವಿವರ ಓದಿ

ಹೊಸನಗರ/  ತಾಲ್ಲೂಕಿನ ವ್ಯಾಪ್ತಿಗೆ ಸಂಬಂಧಿಸಿದಂತೆ  ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ (ಕರ್ನಾಟಕ' ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದೆ)  ವಿದ್ಯುತ್ ವ್ಯತ್ಯಯದ ಬಗ್ಗೆ ಪ್ರಕಟಣೆಯೊಂದನ್ನ ಹೊರಡಿಸಿದೆ. 

school opening in karnataka/ ರಾಜಕಾರಣ ಬಿಟ್ಟು ಸ್ಕೂಲ್​ ಟೈಂಗೆ ಹಾಜರಾದ ಜನಪ್ರತಿನಿಧಿಗಳು! ಮಕ್ಕಳೇ ತುಸು ಲೇಟು! ಹೇಗಿತ್ತು ನೋಡಿ ಶಾಲೆಗಳ ಓಪನಿಂಗ್​!

ವಿದ್ಯುತ್​ ವ್ಯತ್ಯಯ

ಹೊಸನಗರ ಉಪವಿಭಾಗದಲ್ಲಿ ದಿನಾಂಕ: 02.06.2023, ರಂದು ಬೆಳಿಗ್ಗೆ 10-00 ರಿಂದ ಸಂಜೆ5-40 ಗಂಟೆವರೆಗೆ ಪವರ್ ಕಟ್ ಇರಲಿದೆ ಎಂದು ತಿಳಿಸಿದೆ. 

nia karnataka/ ಲೋಕಾಯುಕ್ತ ರೇಡ್ ಬೆನ್ನಲ್ಲೆ 16 ಕಡೆಗಳಲ್ಲಿ ಎನ್​ಐಎ ದಾಳಿ!

ಕಾರಣವೇನು? 

ಸಾಗರ-ಹೊಸನಗರ ಮಾರ್ಗ  (sagara hosanagara route )ನಿರ್ವಹಣೆ ಪ್ರಯುಕ್ತ ಸಾಗರದಿಂದ ಹೊಸನಗರಕ್ಕೆ ಬಂದಿರುವ ಸಾಗರ-ಹೊಸನಗರ ವಿದ್ಯುತ್‌ ಮಾರ್ಗದಲ್ಲಿ ವಿದ್ಯುತ್ ವತ್ಯಯವಾಗಲಿದೆ ಎಂದು ತಿಳಿಸಲಾಗಿದೆ. 

ಶಿವಮೊಗ್ಗ ಸೇರಿದಂತೆ 7 ಜಿಲ್ಲೆಗಳಲ್ಲಿಂದು ಯಲ್ಲೋ ಅಲರ್ಟ್! ಹವಾಮಾನ ಇಲಾಖೆ ವರದಿಯಲ್ಲಿ ಗಾಳಿ, ಮಳೆ, ಸಿಡಿಲು, ಗುಡುಗಿನ ಬಗ್ಗೆ ಮಾಹಿತಿ!

ಎಲ್ಲೆಲ್ಲಿ ಇರೋದಿಲ್ಲ ಕರೆಂಟ್

ಜೇನಿ, ಮಾರುತಿಪುರ, ರಾಮಚಂದ್ರಾಮರ ಮಠ, ಮೇಲಿನ ಬೆಸಿಗೆ ಸೋನಲೆ ಗ್ರಾಮ ಪಂಚಾಯಿತಿ ಮತ್ತು ಹೊಸನಗರ ಟೌನ್​ ವ್ಯಾಪ್ತಿಯ ಪ್ರದೇಶಗಳಲ್ಲಿ ಜೂನ್ 2 ರಂದು ಪವರ್ ಕಟ್ ಇರಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು  ಹೊಸನಗರ ಉಪವಿಭಾಗದ ಅಧಿಕಾರಿಗಳು ಕೋರಿದ್ಧಾರೆ.