ಶಿವಮೊಗ್ಗದ ವಿದ್ಯಾನಗರದಲ್ಲಿ ಇವತ್ತು ಟ್ರಾಫಿಕ್ ಜಾಮ್ ಆಗಿದ್ದೇಕೆ!? ನಡೆದಿದ್ಧೇನು?

Why was there a traffic jam at Vidyanagar in Shivamogga today? What happened?

ಶಿವಮೊಗ್ಗದ ವಿದ್ಯಾನಗರದಲ್ಲಿ ಇವತ್ತು ಟ್ರಾಫಿಕ್ ಜಾಮ್ ಆಗಿದ್ದೇಕೆ!? ನಡೆದಿದ್ಧೇನು?

KARNATAKA NEWS/ ONLINE / Malenadu today/ May 31, 2023 SHIVAMOGGA NEWS

ಶಿವಮೊಗ್ಗ ನಗರದ ವಿದ್ಯಾನಗರ ಸೇತುವೆ ಸುತ್ತಮುತ್ತ ಇವತ್ತು ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಒಂದು ಕಡೆ ಶಾಲೆ ಓಪನ್​ ಆಗುತ್ತಿರುವುದರಿಂದ ಪೋಷಕರ ಓಡಾಟ ಹೆಚ್ಚಾಗಿತ್ತು. ಇನ್ನೊಂದೆಡೆ ರೈಲ್ವೆ ಗೇಟ್ ಮುಚ್ಚಿದ್ದರ ಪರಿಣಾಮ ಸರಿಸುಮಾರು 20 ನಿಮಿಷಕ್ಕೂ ಹೆಚ್ಚುಕಾಲ ಸಂಚಾರ ದಟ್ಟಣೆ ಈ ಪ್ರದೇಶದಲ್ಲಿ ಉಂಟಾಗಿತ್ತು.. 

ಟ್ರೈನ್​ ಸಂಚಾರವೂ ತಡವಾಗಿದ್ದರಿಂದ ಇವತ್ತು ರೈಲ್ವೆ ಗೇಟ್ ಬಂದ್ ಹಾಗೂ ತೆರೆಯುವ ಸಮಯದಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಇನ್ನೊಂದೆಡೆ ಶಾಲೆಗಳ ಪುನಾರಂಭದಿಂದಾಗಿ ಸೋಮವಾರದಂದು ಕಂಡು ಬರುವ ಟ್ರಾಫಿಕ್​ಗಿಂತಲೂ ಕೆಲವೆಡೆ ಹೆಚ್ಚು ವಾಹನ ಗಳ ಸಂಚಾರ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾನಗರದಲ್ಲಿ ಹಲವು ವಾಹನಗಳು ಸ್ಲೋಮೂವಿಂಗ್​ನಲ್ಲಿ ಪಾಸ್ ಆಗಬೇಕಾಗಿ ಬಂದಿತ್ತು. ಅಲ್ಲದೆ ಈ ಟ್ರಾಫಿಕ್​ನಲ್ಲಿ ಕೆಲಹೊತ್ತು ನೂತನ ಶಾಸಕರ ವಾಹನವೂ ಸಹ ಮುಂದಕ್ಕೆ ಹೋಗಲಾಗದೇ , ಟ್ರಾಫಿಕ್​ನಲ್ಲಿ ಸಿಲುಕಿತ್ತು.  ಇನ್ನೂ ನಗರದ ಆಸ್ಪತ್ರೆಗೆ ಬರುತ್ತಿದ್ದ ಆ್ಯಂಬುಲೆನ್ಸ್​ಗೂ ಸಮರ್ಪಕವಾಗಿ ಜಾಗ ಸಿಗದೇ, ಮುಂದಕ್ಕೆ ಸಾಗಲು ಪರದಾಡುವಂತಾಗಿತ್ತು. 

ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಎದುರು ಏಕಾಂಗಿ ಪ್ರತಿಭಟನೆ ಕಾರಣವೇನು?

ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಶಿವಮೊಗ್ಗ ವೃತ್ತ ಕಚೇರಿಯ ಎದುರು ವ್ಯಕ್ತಿಯೊಬ್ಬರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ಪ್ರತಿಭಟನೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ಅವರು, ಕಾವಾಡಿಗೆ ಹುದ್ದೆಗೆ ತಮಗೆ ನೀಡಲಾಗಿಲ್ಲ ಎಂದು ದೂರಿದ್ದಾರೆ. 

ಆರೋಪವೇನು? 

ಹೆಚ್.ಶಿವಕುಮಾರ್ ಎಂಬವರು ಕಾವಾಡಿಗ ಹುದ್ದೆಗೆ 5 ಸಲ ಅರ್ಜಿ ಸಲ್ಲಿಸಿದ್ದರಂತೆ. ಐದು ಬಾರಿ ಸಂದರ್ಶನಕ್ಕೂ ಹಾಜರಾಗಿದ್ದಾರೆ. ಮೇಲಾಗಿ ಈ ಸಲ ಅವರನ್ನೇ ಆಯ್ಕೆ ಮಾಡಿಕೊಳ್ಳುವುದಾಗಿ ಹೇಳಿ ತಮ್ಮನ್ನ ಬಿಟ್ಟು ಬೇರೆಯವರನ್ನ ಹುದ್ದೆಗೆ ಆಯ್ಕೆ ಮಾಡಿಕೊಂಡಿದ್ಧಾರೆ ಎಂಬುದು ದೂರು. 

ಅವರು ಆರೋಪಿಸುವ ಪ್ರಕಾರ, ಕಾವಾಡಿಗ ಹುದ್ದೆಯ ತಾತ್ಕಾಲಿಕ ಪಟ್ಟಿಯಲ್ಲಿ ಅರ್ಹರಲ್ಲದ ವ್ಯಕ್ತಿಗಳನ್ನ ಆಯ್ಕೆ ಮಾಡಿಕೊಳ್ಳಲಾಗಿದೆ. ನಿಯಮಗಳನ್ನು ಮೀರಲಾಗಿದೆ ಎಂದು ಶಿವಕುಮಾರ್ ದೂರುತ್ತಿದ್ದಾರೆ.