ನಿಮಗೆ ಗೊತ್ತಿಲ್ಲದೇ ನಿಮ್ಮ ಬ್ಯಾಂಕ್ ಅಕೌಂಟ್​ನಿಂದ ಹಣ ಡ್ರಾ ಮಾಡಬಹುದಾ? ಹೀಗೂ ನಡೀತು! ಹುಷಾರ್?

A complaint about online fraud has been registered at Shimoga CEN Police Station ಶಿವಮೊಗ್ಗ ಸಿಇಎನ್ ಪೊಲೀಸ್ ಸ್ಟೇಷನ್​ನಲ್ಲಿ ಆನ್​ಲೈನ್ ವಂಚನೆ ಬಗ್ಗೆ ದೂರು ದಾಖಲಾಗಿದೆ

ನಿಮಗೆ ಗೊತ್ತಿಲ್ಲದೇ ನಿಮ್ಮ ಬ್ಯಾಂಕ್ ಅಕೌಂಟ್​ನಿಂದ ಹಣ ಡ್ರಾ ಮಾಡಬಹುದಾ? ಹೀಗೂ ನಡೀತು! ಹುಷಾರ್?

KARNATAKA NEWS/ ONLINE / Malenadu today/ Oct 18, 2023 SHIVAMOGGA NEWS’

ಒಟಿಪಿ ಕೇಳಿಯೋ ಅಥವಾ ಅಕೌಂಟ್​ನ್ನ ಮಾಹಿತಿ ಪಡೆದು ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಳ್ಳುವ ಆನ್​ಲೈನ್ ದೋಖಾದ ಬಗ್ಗೆ ಕೇಳಿದ್ದೇವೆ. ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಗ್ರಾಹಕರೊಬ್ಬರು ಯಾವುದೆ ಮಾಹಿತಿ ಯಾರಿಗೂ ನೀಡದೇ ಹೋದರು ಅವರ ಅಕೌಂಟ್​ನಿಂದ 20 ಸಾವಿ ರೂಪಾಯಿ ಅಪರಿಚಿತರು ಬಿಡಿಸಿಕೊಂಡಿರುವ ಬಗ್ಗೆ ದೂರೊಂದು ದಾಖಲಾಗಿದೆ. 

ಈ ಸಂಬಂಧ ಸಿಇಎನ್ ಪೊಲೀಸ್ ಸ್ಟೇಷನ್​ನಲ್ಲಿ ಕಂಪ್ಲೆಂಟ್ ದಾಖಲಾಗಿದ್ದು,  INFORMATION TECHNOLOGY ACT 2000 (U/s-66(C)); IPC 1860 (U/s-419,420) ಅಡಿಯಲ್ಲಿ ಕೇಸ್ ದಾಖಲಾಗಿದೆ. 

ಏನಿದು ಪ್ರಕರಣ! 

ಬ್ಯಾಂಕ್ ಒಂದರ ಗ್ರಾಹಕರು ತಮ್ಮ ಅಕೌಂಟ್​ನಲ್ಲಿ ಎರಡು ಮೂರು ದಿನಗಳ ಅವಧಿಯಲ್ಲಿ ಐದು ಸಾವಿರ,ಮೂರು ಸಾವಿರ, ಮುನ್ನೂರು ರೂಪಾಯಿಗೆ ಹೀಗೆ ಹಣ ಕಡಿತಗೊಳ್ಳುವುದನ್ನ ಗಮನಿಸಿದ್ದಾರೆ. ಈ ಬಗ್ಗೆ ಬ್ಯಾಂಕ್​ನಲ್ಲಿಯು ಹೋಗಿ ವಿಚಾರಿಸಿದ್ದಾರೆ. ಆದರೆ ಬ್ಯಾಂಕ್​ನವರು ಸಮರ್ಪಕವಾಗಿ ಉತ್ತರ ನೀಡಿಲ್ಲ ಎಂದು ಆರೋಪಿಸಲಾಗಿದೆ. 

ಗ್ರಾಹಕರು ಯಾರಿಗೂ ಅಕೌಂಟ್​ನ ಡೀಟೇಲ್ಸ್​ ಕೊಟ್ಟಿಲ್ಲ. ಆದಾಗ್ಯು ಅವರ ಅಕೌಂಟ್​ನಿಂದ ಹಣ ಡ್ರಾ ಗುತ್ತಿರುವುದನ್ನ ಗಮನಿಸಿದ ಅವರು ನೇರವಾಗಿ ಪೊಲೀಸರಿಗೆ ದೂರು ನೀಡಿದ್ದು ಅಕೌಂಟ್​ಗೆ ಅಗತ್ಯವಿರು ಭದ್ರತಾ ವ್ಯವಸ್ಥೆಯನ್ನು ಕಲ್ಪಿಸದ ಬ್ಯಾಂಕ್​ನವರ ವಿರುದ್ದವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.  


ಇನ್ನಷ್ಟು ಸುದ್ದಿಗಳು 

ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ